Home ರಾಜ್ಯBIG IMPACT:: ಮಾಧ್ಯಮಗಳಲ್ಲಿ ನಿರಂತರ ವರದಿ ಜಂಟಿ ಆಯುಕ್ತರಾದ ಗಾಯತ್ರಿದೇವಿ ದಿಡೀರ್ ಪರಿಶೀಲನೆ..!!! ಶಿವಮೊಗ್ಗ ಆರ್‌ ಟಿ ಓ ಕಚೇರಿಗೆ ಮೇಜರ್ ಸರ್ಜರಿ..!!! ಮೇಲ್ನೋಟಕ್ಕೆ ಎಲ್ಲ ಕ್ಲೀನ್ ಇನ್ನೇನಿದರೂ ಆಪರೇಷನ್ ಕಡತ ವಿಲೇವಾರಿ…!!!!

BIG IMPACT:: ಮಾಧ್ಯಮಗಳಲ್ಲಿ ನಿರಂತರ ವರದಿ ಜಂಟಿ ಆಯುಕ್ತರಾದ ಗಾಯತ್ರಿದೇವಿ ದಿಡೀರ್ ಪರಿಶೀಲನೆ..!!! ಶಿವಮೊಗ್ಗ ಆರ್‌ ಟಿ ಓ ಕಚೇರಿಗೆ ಮೇಜರ್ ಸರ್ಜರಿ..!!! ಮೇಲ್ನೋಟಕ್ಕೆ ಎಲ್ಲ ಕ್ಲೀನ್ ಇನ್ನೇನಿದರೂ ಆಪರೇಷನ್ ಕಡತ ವಿಲೇವಾರಿ…!!!!

by EDITOR NEWS WARRIORS
2 comments

ಶಿವಮೊಗ್ಗ : ಜಿಲ್ಲೆಯ ಜಂಟಿ ಸಾರಿಗೆ ಆಯುಕ್ತರ ಕಚೇರಿ (ಆರ್ ಟಿ ಓ ಕಚೇರಿ )ಬಹಳ ಸುದ್ದಿಯಲ್ಲಿತ್ತು. ಕಾರಣ ಇಲ್ಲಿ ನಡೆಯುತ್ತಿರುವ ನಿರಂತರ ಭ್ರಷ್ಟಾಚಾರ ಹಣವಿಲ್ಲದೆ ಇಲ್ಲಿ ಒಂದು ಫೈಲ್ ಗಳು ಮುಂದೆ ಹೋಗುವುದಿಲ್ಲ. ಪ್ರತಿ ಒಂದಕ್ಕೂ ಹಣ ಈ ಹಣದ ಚಲಾವಣೆಗೆ ಕಂಟ್ರೋಲ್ ಮಾಡುವ ದೃಷ್ಟಿಯಿಂದ ಕಡಿವಾಣ ಹಾಕಲೆಂದೆ ಡಿಜಿಟಲ್ ವ್ಯವಸ್ಥೆಯನ್ನು ತಂದಿದ್ದರು ಕೂಡ ಇಲ್ಲಿ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ಅಲ್ಲೂ ಕೂಡ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿದ್ದರು. ಸಾರ್ವಜನಿಕರು ಕೂಡ ತಮ್ಮ ಕೆಲಸ ಕಾರ್ಯಗಳು ಆಗಬೇಕೆಂದು ವಿನಾಕಾರಣ ಇವರಿಗೆ ಲಂಚ ನೀಡಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ಹಣ ತೆಗೆದುಕೊಂಡು ಲಂಚ ತೆಗೆದುಕೊಂಡು ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ ಕೂಡ ಇಡೀ ಕಚೇರಿ ಅವ್ಯವಸ್ಥೆಯಿಂದ ಕೂಡಿತ್ತು ಎಲ್ಲಿ ನೋಡಿದರೂ ಗಬ್ಬು ವಾಸನೆ ಕ್ಲೀನ್ ಇಲ್ಲದೆ ಸ್ವಚ್ಛತೆ ಇಲ್ಲದೆ ಬಾತ್ ರೂಮ್ ಗಳು ಗಬ್ಬುನಾರುತ್ತಿದ್ದವು.

ಇಲ್ಲಿ ಪ್ರತಿ ಕೆಲಸಗಳು ಆಗಲು ಒಂದೊಂದು ಕೆಲಸಗಳಿಗೆ ಒಂದೊಂದು ರೇಟ್ ಫಿಕ್ಸ್…

ಶಿವಮೊಗ್ಗದ ಆರ್ ಟಿ ಓ ಕಚೇರಿಯಲ್ಲಿ ಒಂದೊಂದು ಕೆಲಸಗಳಿಗೂ ಒಂದೊಂದು ರೇಟ್ ಫಿಕ್ಸ್ ಹಳೆ ಗಾಡಿ ನೋಂದಾವಣೆಗೆ ಒಂದು ರೇಟ್, ಹೊಸ ಗಾಡಿ ನೋಂದಾವಣೆಗೆ ಒಂದು ರೇಟ್, ಡಿಎಲ್ ಗೆ ಒಂದು ರೇಟ್, ಲಾರಿ ಟ್ರಾನ್ಸ್ಫರ್ ಗೆ ಒಂದು ರೇಟ್ ಮೋಟರ್ ಕ್ಯಾಬ್ ಟ್ರಾನ್ಸ್ಫರ್ ಗೆ ಒಂದು ರೇಟ್, ಹೀಗೆ ವಿವಿಧ ಕೆಲಸಗಳಿಗೆ ಒಂದೊಂದು ರೇಟ್ಗಳನ್ನು ಫಿಕ್ಸ್ ಮಾಡಿಕೊಂಡು ಆ ಹಣವನ್ನು ನೀಡಿದ ರಷ್ಟೇ ಇಲ್ಲಿ ಕೆಲಸವಾಗುವುದು… ಇಲ್ಲವಾದರೆ ಸುಮ್ಮನೆ ಸತಾಯಿಸುವುದು ಇಲ್ಲಿ ಮಾಮೂಲು… ನೇರವಾಗಿ ಬಂದರೆ ಕೆಲಸ ಆಗುವುದು ಕಷ್ಟ ಸಾಧ್ಯ… ಏನಿದ್ದರೂ ಇವರೇ ಅನಧಿಕೃತವಾಗಿ ನೇಮಿಸಿಕೊಂಡಿರುವ ವ್ಯಕ್ತಿಗಳ ಮೂಲಕ ಬರಬೇಕು.. ಅವರ ಕೈಯಲ್ಲಿ ಒಂದು ರೇಟನ್ನು ಫಿಕ್ಸ್ ಮಾಡಿಸಿ ಅವರಿಗೂ ಒಂದಷ್ಟು ಕೊಟ್ಟು ಇವರು ಒಂದಷ್ಟು ತಿಂದು ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿ ಇಟ್ಟಿದ್ದಾರೆ… ಇದು ಇಂದು ನಿನ್ನೇದಲ್ಲ ಸಾಂಪ್ರದಾಯಿಕವಾಗಿ ನಡೆದುಕೊಂಡ ಬಂದಂತ ಪದ್ಧತಿ… ಆದರೆ ಅದಕ್ಕೆಲ್ಲಾ ಬ್ರೇಕ್ ಹಾಕುವ ಉದ್ದೇಶದಿಂದ ನಮ್ಮ ಟೀಮ್ ಒಂದು ಕಾರ್ಯಾಚರಣೆ ನಡೆಸುತ್ತಿದೆ… ಪ್ರತಿ ಹಂತದಲ್ಲೂ ಪ್ರತಿ ವಿಭಾಗದಲ್ಲೂ ಏನು ನಡೆಯುತ್ತಿದೆ ಏನು ಮಾಡುತ್ತಿದ್ದಾರೆ ಯಾವ ಫೈಲ್ ಎಲ್ಲಿ ಹೋಗುತ್ತಿದೆ ಯಾರು ಎಷ್ಟು ಲಂಚ ಕೇಳುತ್ತಾರೆ ಯಾರು ಎಷ್ಟು ತೆಗೆದುಕೊಳ್ಳುತ್ತಾರೆ ಎಲ್ಲವೂ ರೆಕಾರ್ಡ್ ಆಗುತ್ತದೆ… ಸಾಕ್ಷಿ ಸಮೇತ ಆಧಾರಗಳನ್ನು ಇಟ್ಟುಕೊಂಡು ಜಂಟಿ ಆಯುಕ್ತರನ್ನು ಭೇಟಿ ಮಾಡಿ ಸಮಗ್ರವಾಗಿ ಚರ್ಚಿಸಿದ ಮಾಧ್ಯಮದ ಮಿತ್ರರು..

ಖುದ್ದು ಜಂಟಿ ಆಯುಕ್ತರಾದ ಗಾಯತ್ರಿದೇವಿ ಅವರು ಪ್ರತಿ ವಿಭಾಗಕ್ಕೂ ಬಂದು ಪರಿಶೀಲನೆ ನಡೆಸಿ ಖಡಕ್ ಎಚ್ಚರಿಕೆ ನೀಡಿದರು ::

ಜಂಟಿ ಆಯುಕ್ತರಾದ ಗಾಯತ್ರಿ ದೇವಿ ಅವರನ್ನು ಮಾಧ್ಯಮ ಮಿತ್ರರು ಭೇಟಿ ಮಾಡಿ ಇಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಕಚೇರಿಯನ್ನು ಇಟ್ಟುಕೊಂಡಿರುವ ರೀತಿ, ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳು, ಎಲ್ಲದರ ಬಗ್ಗೆ ವಿಸ್ತಾರವಾಗಿ ವಿವರಿಸಿದಾಗ ಇನ್ನು ಮುಂದೆ ಈಗಾಗದಂತೆ ಎಚ್ಚರ ವಹಿಸುತ್ತೇನೆ ಸಹಕರಿಸಿ ಎಂದು ಹೇಳಿದಷ್ಟೇ ಅಲ್ಲದೆ ಪ್ರತಿ ಅಧಿಕಾರಿಗಳಿಗೂ ಸೂಕ್ತ ನಿರ್ದೇಶನವನ್ನು ನೀಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಯಾವುದೇ ರೀತಿಯ ಲಂಚ ಬಾಕತನವನ್ನು ಮಾಡಬಾರದು ನಿಲ್ಲಿಸಬೇಕು ಎನ್ನುವ ಆದೇಶವನ್ನು ನಮ್ಮ ಎದುರಿನಲ್ಲಿಯೇ ನೀಡಿದ್ದರು… ಇದರ ಪರಿಣಾಮ ಆರ್ ಟಿ ಓ ಕಚೇರಿ ಈಗ ಸ್ವಚ್ಛವಾಗಿದೆ.. ಇದು ಹೀಗೆ ಮುಂದುವರೆದುಕೊಂಡು ಹೋಗಬೇಕು… ಮತ್ತೆ ತಮ್ಮ ಚಾಳಿ ಶುರು ಮಾಡಿದರೆ ನಮ್ಮ ತಂಡ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು , ಈಗಾಗಲೇ ಇರುವ ದಾಖಲೆಗಳ ಜೊತೆಗೆ,ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಉನ್ನತ ಮಟ್ಟದಲ್ಲಿ ಸಂಬಂಧಪಟ್ಟವರಿಗೆ ತಲುಪಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಚ್ಚರ, ಎಚ್ಚರ, ಎಚ್ಚರ….

ಶಿವಮೊಗ್ಗದ ಹೊರವಲಯದಲ್ಲಿ ಒಬ್ಬರಿದ್ದಾರೆ ಯಾರ್ ಗೊತ್ತಾ..?!

ಅಂದ ಹಾಗೆ ಮರೆತುಬಿಟ್ಟಿದ್ದೆ ಊರ ಹೊರಗೆ ಒಬ್ಬರು ತನ್ನ ಇಬ್ಬರು ಹುಡುಗರನ್ನು ಇಟ್ಟುಕೊಂಡು ದಿನ ಬೆಳಿಗ್ಗೆಯಿಂದ ಮಧ್ಯಾಹ್ನ ಊಟಕ್ಕೂ ಸಮಯವಿಲ್ಲದೆ ಎತ್ತುವಳಿ ಮಾಡುತ್ತಿದ್ದಾರೆ. ಪಾಪ ಅವರಿಗೆ ಆರ್ ಟಿ ಓ ಕಚೇರಿಗೆ ಬರಲು ಸಮಯವಿಲ್ಲ… ಕಲೆಕ್ಷನ್ ಆಗಿದ ಹಣ ಎಣಿಸಲು ಸಮಯ ಸಾಕಾಗುತ್ತಿಲ್ಲ… ಸಾಯಿಬ್ರ ಡ್ಯೂಟಿ ಏನಿದ್ದರೂ ಬೆಳಗ್ಗೆ 10ರಿಂದ ಮೂರುವರೆವರೆಗೆ ಅಷ್ಟೇ ಇಲ್ಲಿಯವರೆಗೆ ಸಾಹೇಬ್ರು ಹಾಕಿರೋ ಕೇಸ್ ಗಳು ಎಷ್ಟು..?! ಎಲ್ಲೆಲ್ಲಿ ಭೇಟಿ ನೀಡಿ ಏನು ಪರಿಶೀಲನೆ ನಡೆಸಿದ್ದಾರೆ..?! ಎನ್ನುವ ಮಾಹಿತಿ ಕೂಡ ಇದೆ… ಕೋಟಿಗಟ್ಟಲೆ ಬೆಳೆಬಾಳುವ ಬೃಹತ್ ಬಂಗಲೆ , ನೂರಕ್ಕೂ ಅಧಿಕ ಕ್ವಿಂಟಲ್ ಅಡಿಕೆ ಆಗುವ ತೋಟ.. ಆದರೂ ಸಾಹೇಬ್ರಿಗೆ ಯಾಕೋ ಬಹಳ ಆಸೆ… ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗಲ್ಲ ಅನ್ಕೊಂಡಿದ್ದಾರೆ ಪಾಪ… ಸಾಹೇಬ್ರು ಪುರಾಣ ಇಂಚು, ಇಂಚುಚಾಗಿ ದಾಖಲೆ ಆಗ್ತಿದೆ ಆಡಿಯೋ, ವಿಡಿಯೋ ಎಲ್ಲ ಅದು ಕೂಡ ರಿಲೀಸ್ ಆಗುತ್ತದೆ… ಅಂದಹಾಗೆ ಆ ಮಹಾ ಸಾಹೇಬರು ಯಾರು ಗೊತ್ತಾ..?! ವೈಟ್ ಸಮ್ ಟೈಮ್…

ರಘುರಾಜ್ ಹೆಚ್.ಕೆ…9449553305….

Related Articles

2 comments

GeorgeZew July 20, 2025 - 4:55 pm

best haircut Shop- https://www.menspire.sg

Reply
köpa cialis Sverige September 18, 2025 - 12:46 pm

Köp Cialis tryggt – Vill du köpa Cialis tryggt? Vi erbjuder säkra online-beställningar med diskret leverans och garanterad kvalitet. Återfå ditt självförtroende enkelt och smidigt.

Reply

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...