Home ರಾಜ್ಯಆಗುಂಬೆ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸೂರುನಲ್ಲಿ ನಡೆದ ಅದ್ದೂರಿ ಶಾಲಾ ವಾರ್ಷಿಕೋತ್ಸವ ..!!

ಆಗುಂಬೆ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸೂರುನಲ್ಲಿ ನಡೆದ ಅದ್ದೂರಿ ಶಾಲಾ ವಾರ್ಷಿಕೋತ್ಸವ ..!!

by EDITOR NEWS WARRIORS
0 comments

ಶಾಲಾ ಸಮಗ್ರ ಪ್ರಗತಿಗೆ ಪ್ರಶಂಸೆ ವ್ಯಕ್ತಪಡಿಸಿದ ..
ತಹಶೀಲ್ದಾರ್ ಅಮೃತ ಅತ್ರೇಶ್

ಪುಟಾಣಿ ಮಕ್ಕಳ ಡ್ಯಾನ್ಸ್ ಗೆ ಫಿದಾ ಆದ ಪೋಷಕರು ಮತ್ತು ಸಾರ್ವಜನಿಕರು..‌ದಾನಿಗಳು..

ಇತ್ತೀಚಿಗೆ ತಾಲೂಕಿನ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲೆ ಎನ್ನುವ ಪ್ರಶಸ್ತಿಗೆ ಬಾಜನರಾಗಿರುವ ಗುಡ್ಡೇಕೇರಿ ಸಮೀಪದ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲೆ ಹೊಸೂರು ಇಲ್ಲಿ.. ಸರ್ವರ ಸಹಕಾರದಿಂದ ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವ ನೆರವೇರಿದ್ದು ಮಕ್ಕಳ ನೃತ್ಯ,ಹಾಡು, ಮಿಮಿಕ್ರಿ ಕಿರು ನಾಟಕ ಹಾಸ್ಯಗಳಿಗೆ ಪೋಷಕರ ಮತ್ತು ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದ್ದು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೀರ್ಥಹಳ್ಳಿ ತಾಲೂಕಿನ ತಾಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದರಾದ ಅಮೃತ್ ಅತ್ರೇಶ್ ಅವರು ಮಾತನಾಡಿ ” ಪೋಷಕರು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡಿ ಆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂದು ಮಾರ್ಗದರ್ಶನ ನೀಡಿದರು..”

ಇದೇ ಕಾರ್ಯಕ್ರಮದಲ್ಲಿ ಶಾಲೆಗಾಗಿ ದುಡಿದ ಶ್ರೀಮತಿ ರೂಪಿಣಿ, ಗಣೇಶ್ ನಾಯಕ್, ಸರ್ಕಾರಿ ಶಾಲೆಯ ಅಭ್ಯುದಯಕ್ಕೆ ತಂಡದ ಜೊತೆಗೆ ದುಡಿಯುತ್ತಿರುವ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಬಾಬು ಎಚ್ ಪಿ ಮತ್ತು ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ನೇತ್ರಾವತಿ ಮತ್ತು ಶ್ರೀಮತಿ ಪಾರ್ವತಿ ಅವರನ್ನು ಗೌರವಿಸಲಾಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ರವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ಶ್ವೇತಾ ಗಿರೀಶ್ ಹೆಗಡೆ, ಮಾಜಿ ಅಧ್ಯಕ್ಷರಾದ ನಾಗರತ್ನ ಶ್ರೀನಿವಾಸ್, ಹಾಗೂ, ಜಯೇಶ್ ಹೆಗಡೆ, ಗಿರೀಶ್ ಹೆಗಡೆ, ಮಹಾಬಲೇಶ್ ಹಸಿರು ಮನೆ, ಅಬ್ದುಲ್ಲ ಹೆಚ್ ಹೆಚ್, ಆಲಿದ್, ಸುಬ್ರಹ್ಮಣ್ಯ ಭಟ್, ಬಾಳೇಹಳ್ಳಿ ಪ್ರಭಾಕರ್, ರೇಷ್ಮಾ, ಹಾಗೂ ಎಲ್ಲಾ ಎಸ್ ಡಿ ಎಂ ಸಿ ಸದ್ಯಸರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು..
ಕಾರ್ಯಕ್ರಮದ ರೂವಾರಿ, ಮುಖ್ಯ ಶಿಕ್ಷಕರಾದ ಪೂರ್ಣೇಶ್ ಅವರು ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು, ಶಿಕ್ಷಕಿ ಜಲಜಾಕ್ಷಿ ವಂದಿಸಿದರು..

ರಘುರಾಜ್ ಹೆಚ್.ಕೆ..9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...