Home ರಾಜ್ಯರಾಮರಾಜ್ಯದ ಆದರ್ಶವನ್ನಿಟ್ಟು ಪ್ರತಿಯೊಬ್ಬ ಹಿಂದೂಗಳು ಧರ್ಮಚಾರಣೆ ಮಾಡಿ ! – ಶ್ರೀ. ಗುರುರಾಜ ಶರ್ಮಾ, ಹಿಂದೂ ಜನಜಾಗೃತಿ ಸಮಿತಿ..!!

ರಾಮರಾಜ್ಯದ ಆದರ್ಶವನ್ನಿಟ್ಟು ಪ್ರತಿಯೊಬ್ಬ ಹಿಂದೂಗಳು ಧರ್ಮಚಾರಣೆ ಮಾಡಿ ! – ಶ್ರೀ. ಗುರುರಾಜ ಶರ್ಮಾ, ಹಿಂದೂ ಜನಜಾಗೃತಿ ಸಮಿತಿ..!!

by EDITOR NEWS WARRIORS
0 comments

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬಾಶೆಟ್ಟಿಹಳ್ಳಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ !

ಬೆಂಗಳೂರು (ಗ್ರಾ.) : ‘ಇಂದು ‘ಮೆಕಾಲೆ’ ಶಿಕ್ಷಣಪದ್ಧತಿಯಿಂದ ನಾವು ಸುಶಿಕ್ಷಿತರಾಗುತ್ತಿದ್ದೇವೆ. ಆದರೆ ಧರ್ಮದಿಂದ ದೂರ ಸರಿಯುತ್ತಿದ್ದೇವೆ. ನಾವು ನಮ್ಮ ವೇಶಭೂಷಣ- ಕೇಶಭೂಷಣ-ಆಹಾರ- ಸಂಸ್ಕೃತಿ- ಪರಂಪರೆ ಎಲ್ಲವೂ ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಬಿಟ್ಟಿರುವ ಪರಿಣಾಮವನ್ನು ಇಂದು ಪ್ರತಿಯೊಂದು ಮನೆಯಲ್ಲಿ ಕಂಡುಬರುತ್ತಿದೆ. ರಾಮರಾಜ್ಯದಲ್ಲಿ ಪ್ರಜೆಗಳು ಧರ್ಮಚರಣೆಯನ್ನು ಮಾಡುತ್ತಿದ್ದರು, ಇದಕ್ಕಾಗಿಯೇ ರಾಮರಾಜ್ಯವು ಆದರ್ಶವಾಗಿತ್ತು. ಅದೇ ರೀತಿ ಇಂದು ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಲು ಸಂಕಲ್ಪ ಮಾಡೋಣ’ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ ಶರ್ಮಾ ತಿಳಿಸಿದರು. ಅವರು ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಉದ್ಯೋಗಪತಿಗಳಾದ ಶ್ರೀ. ಎಸ್. ಪ್ರೇಮ್ ಕುಮಾರ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುರಾಜ್ ಶರ್ಮಾ ಇವರು ದೀಪ ಪ್ರಜ್ವಲನೆಯ ಮೂಲಕ ಸಭೆಯನ್ನು ಉದ್ಘಾಟಿಸಿದರು. 50 ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದು ಈ ಸಭೆಯ ಲಾಭ ಪಡೆದುಕೊಂಡರು.

ಶ್ರೀ. ಗುರುರಾಜ್ ಶರ್ಮಾ ಮುಂದೆ ಮಾತನಾಡಿ, ಇಂದು ಧರ್ಮಪಾಲನೆ ಮಾಡುವುದೆಂದರೆ ನಮಗೆ ಹಾಸ್ಯಾಸ್ಪದವೆನಿಸುತ್ತಿದೆ. ಧರ್ಮಾಚರಣೆ ಮಾಡುವುದು ಕೀಳೆನಿಸುತ್ತಿದೆ. ಆದರೆ ಇಂದಿನ ಪೀಳಿಗೆ ಸುಖವಾಗಿದೆಯೇ ? ನಮ್ಮ ಹಿಂದಿನ ಪೀಳಿಗೆಯವರಿಗೆ ಸೌಲಭ್ಯಗಳು ಕಡಿಮೆಯಿದ್ದವು, ಅವರ ಮನಸ್ಸಿನಲ್ಲಿ ಮತ್ತು ಆಚರಣೆಯಲ್ಲಿ ಧರ್ಮಸಂಸ್ಕಾರವಿತ್ತು. ಒಂದು ವೇಳೆ ನಮಗೆ ನಮ್ಮ ಆ ಪೀಳಿಗೆಯನ್ನು ಪುನಃ ಮುಂದುವರಿಸಬೇಕಾಗಿದ್ದರೆ, ಋಷಿಮುನಿಗಳು ಹಾಕಿಕೊಟ್ಟಿರುವ ದಾರಿಯಲ್ಲಿಯೇ ನಡೆಯಬೇಕಾಗುವುದು. ಧರ್ಮಾಚರಣೆಯಿಲ್ಲದೇ ಹಿಂದೂ ರಾಷ್ಟ್ರ ಸ್ಥಾಪನೆಯೂ ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಕೃತಿಯ ಹಿಂದೆ ವೈಜ್ಞಾನಿಕ ಕಾರಣವಿದೆ. ಇಂದು ವಿದೇಶದ ಜನರು ಹಿಂದೂ ಧರ್ಮದೆಡೆಗೆ ಆಕರ್ಷಿತರಾಗುತ್ತಿದ್ದಾರೆ, ಇದರ ಕಾರಣ ಹಿಂದೂ ಧರ್ಮದಲ್ಲಿ ಪ್ರಚಂಡ ಶಕ್ತಿ, ಊರ್ಜೆಯಿದೆ, ಇದಕ್ಕಾಗಿ ನಮ್ಮ ಶ್ರೇಷ್ಠ ಧರ್ಮದ ಕುರಿತು ವೈಜ್ಞಾನಿಕ ದೃಷ್ಟಿಯಿಂದ ಅಭ್ಯಾಸ ಮಾಡಿ ಧರ್ಮಾಚರಣೆಯನ್ನು ಪ್ರಾರಂಭಿಸಿರಿ’ ಎಂದರು. ಶ್ರೀ. ಪ್ರೇಮ್ ಕುಮಾರ್ ಇವರು ಮಾತನಾಡಿ, ಒಂದೆಡೆ ಭಾರತದಲ್ಲಿರುವವರಿಂದಲೇ ಪದೇ ಪದೇ ಹಿಂದೂ ಧರ್ಮ ಹಾಗೂ ಹಿಂದೂಗಳ ಮೇಲೆ ಅನ್ಯಾಯವಾಗುತ್ತಿದೆ, ಇನ್ನೊಂದೆಡೆ ಕೆಲವು ಪಂಥೀಯರು ಹಿಂದೂಗಳ ಹತ್ಯೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಜಗತ್ತಿನಾದ್ಯಂತ ‘ಜಿಹಾದ್’ ಹೆಸರಿನಲ್ಲಿ ಎಲ್ಲೆಡೆ ಹರಡಿದೆ, ಅದೇ ರೀತಿ ಭಾರತದಲ್ಲಿಯೂ ವಿವಿಧ ಮಾಧ್ಯಮಗಳಿಂದ ಜಿಹಾದ್ ಪ್ರಾರಂಭವಾಗಿದೆ. ಇದರ ಪರಿಣಾಮವಾಗಿ ಇತ್ತೀಚೆಗೆ ಲವ್ ಜಿಹಾದ್ ನ ಭಯಾನಕ ಷಡ್ಯಂತ್ರ ದೇಶದ ವಿವಿಧ ಭಾಗಗಳಲ್ಲಿ ಬಯಲಾಗುತ್ತಿದೆ. ಹಾಗಾಗಿ ಹಿಂದೂಗಳು ಜಿಹಾದ್ ನ ವಾಸ್ತವಿಕತೆಯನ್ನರಿತು ಜಾಗೃತರಾಗಬೇಕು’ ಎಂದರು….

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...