Home ರಾಜ್ಯಸಚಿವ ಸ್ಥಾನಕ್ಕೆ ತೀವ್ರ ಲಾಬಿ ಮಧುಬಂಗಾರಪ್ಪ, ಸಂಗಮೇಶ್, ಬಿಕೆ ಹರಿಪ್ರಸಾದ್, ರಿಂದ ಹೆಚ್ಚಿದ ಒತ್ತಡ ಇವರ ಪರವಾಗಿ ಲಾಭಿ ನಡೆಸುತ್ತಿರುವವರು ಯಾರು..?! ಹರತಾಳು ಹಾಲಪ್ಪನವರನ್ನು ಮಣಿಸಿದ ಬೇಲೂರು ಗೋಪಾಲಕೃಷ್ಣಗೆ ಯಾವ ಸ್ಥಾನ ಗೊತ್ತಾ..?!

ಸಚಿವ ಸ್ಥಾನಕ್ಕೆ ತೀವ್ರ ಲಾಬಿ ಮಧುಬಂಗಾರಪ್ಪ, ಸಂಗಮೇಶ್, ಬಿಕೆ ಹರಿಪ್ರಸಾದ್, ರಿಂದ ಹೆಚ್ಚಿದ ಒತ್ತಡ ಇವರ ಪರವಾಗಿ ಲಾಭಿ ನಡೆಸುತ್ತಿರುವವರು ಯಾರು..?! ಹರತಾಳು ಹಾಲಪ್ಪನವರನ್ನು ಮಣಿಸಿದ ಬೇಲೂರು ಗೋಪಾಲಕೃಷ್ಣಗೆ ಯಾವ ಸ್ಥಾನ ಗೊತ್ತಾ..?!

by EDITOR NEWS WARRIORS
0 comments

ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದು. ಇದೇ ಶನಿವಾರ 20ರಂದು ಪ್ರಮಾಣವಚನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಸರ್ಕಾರ ಅಸ್ತಿತ್ವಕ್ಕೆ ಬರುವ ಬೆನ್ನಲ್ಲೇ ಮಂತ್ರಿ ಗಿರಿಗಾಗಿ ತೀವ್ರ ಲಾಭಿ ಶುರುವಾಗಿದೆ.

ಬಲ್ಲ ಮಾಹಿತಿಗಳ ಪ್ರಕಾರ ಸೊರಬದಿಂದ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸ್ಪರ್ಧಿಸಿ 45,000 ಮತಗಳ ಅಂತರದಲ್ಲಿ ಗೆದ್ದಿರುವ ಮಧು ಬಂಗಾರಪ್ಪನವರಿಗೆ ಸಂಪುಟದಲ್ಲಿ ಖಾತೆ ನೀಡಿ ಸಚಿವರನ್ನಾಗಿ ಮಾಡಬೇಕೆಂದು ಅಕ್ಕ ಗೀತಾ ಶಿವರಾಜ್ ಕುಮಾರ್ ಪತಿ ಶಿವರಾಜ್ ಕುಮಾರ್ ಮೂಲಕ ಸಿದ್ದರಾಮಯ್ಯ ಅವರಿಗೆ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ತರುತ್ತಿದ್ದಾರೆ ಎನ್ನಲಾಗುತ್ತಿದೆ.

ಇತ್ತ ಜಾತಿವಾರು ಲೆಕ್ಕಾಚಾರದಲ್ಲಿ ಲಿಂಗಾಯತ್ ಸಮುದಾಯದ ಸಂಗಮೇಶ್ ಅವರಿಗೆ ಮತ್ತು ಸಂಗಮೇಶ್ ಸಿದ್ದರಾಮಯ್ಯನವರ ಆಪ್ತ ಬಣದಲ್ಲಿ ಗುರುತಿಸಿಕೊಂಡವರಾಗಿರುವುದರಿಂದ ಅವರಿಗೂ ಸ್ಥಾನ ನೀಡಬೇಕು ಎಂದು ಕೂಗು ಕೇಳಿ ಬರುತ್ತಿದೆ. ಹಾಗಾದರೆ ಶಿವಮೊಗ್ಗ ಜಿಲ್ಲೆಗೆ ಎರಡು ಸ್ಥಾನ ಸಿಕ್ಕಂತಾಗುತ್ತದೆ.

ಇತ್ತ ತನ್ನ ಪ್ರಬಲ ಪ್ರತಿಸ್ಪರ್ಧಿ ಹರತಾಳು ಹಾಲಪ್ಪ ವಿರುದ್ಧ ಗೆದ್ದಿರುವ ಬೇಳೂರು ಗೋಪಾಲಕೃಷ್ಣ ಅವರಿಗೆ ಎಂ ಎಸ್ ಐ ಎಲ್ ಅಧ್ಯಕ್ಷ ಪಟ್ಟ ನೀಡಬೇಕೆನ್ನುವ ಬಯಕೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಡಿಕೆ ಶಿವಕುಮಾರ್ ಗೆ ಹೆಚ್ಚಿನ ಒಲವು ಇದೆ ಎನ್ನಲಾಗುತ್ತಿದೆ .

ಇನ್ನೋರ್ವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಗೆ ಕೂಡ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಅಧಿಕವಾಗಿದೆ..

ಈಗಾಗಲೇ ಮೊದಲ ಹಂತದಲ್ಲಿಯೇ ಮಧು ಬಂಗಾರಪ್ಪ ಹೆಸರು ಇದೆ ಎನ್ನಲಾಗುತ್ತಿದೆ… ಉಳಿದಂತೆ ಸಂಗಮೇಶ್ ಹೆಸರು ಸೇರ್ಪಡೆಯಾದರು ಅಚ್ಚರಿಲ್ಲ…

ರಘುರಾಜ್ ಹೆಚ್.ಕೆ…9449553305…

Related Articles

Latest news
ಅಂಬು ಗ್ಯಾಂಗಿನ ಹುಡುಗರ ಮಧ್ಯೆ ಕಿತ್ತಾಟ ರಾಮಿನಕೊಪ್ಪದ ಉಮೇಶ ಕುಳ್ಳಿ ಕಿರಣನನ್ನು ಕೊಲೆ ಮಾಡಲು ಕಾರಣವೇನು..? ಶಾಂತಿನಗರದಲ್ಲಿ ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮದ ಈದ್ ಮೀಲಾದ್...! ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಡಾ. ಮೈತ್ರಿ ಹೆಚ್ ಪಿ, ಎಸ್ ಮುಂದುವರಿಕೆ..! ಶಿವಮೊಗ್ಗದಲ್ಲಿ ‘ಅವಿಸ್ಮರಣೀಯ ಪ್ರಕರಣಗಳು’ ಕೃತಿ ಬಿಡುಗಡೆ..! Shivamogga breaking: ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಮತ್ತೆ ಜಿ ಹೆಚ್ ಸತ್ಯನಾರಾಯಣ ಮುಂದುವರಿಕೆ...?! ಡಾ. ಮೈತ್ರಿ... Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ...