Home ರಾಜ್ಯಬತ್ತಿದ ಶರಾವತಿ – ಲಾಂಚ್ ಸೇವೆ ಸ್ಥಗಿತ ಸಾಧ್ಯತೆ – ಆತಂಕದಲ್ಲಿ ಹಿನ್ನೀರ ಜನತೆ..!!

ಬತ್ತಿದ ಶರಾವತಿ – ಲಾಂಚ್ ಸೇವೆ ಸ್ಥಗಿತ ಸಾಧ್ಯತೆ – ಆತಂಕದಲ್ಲಿ ಹಿನ್ನೀರ ಜನತೆ..!!

by EDITOR NEWS WARRIORS
0 comments
    ಸಿಗಂದೂರು :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಕ್ಷೇತ್ರ ನಾಡಿಗೆ ಪ್ರಸಿದ್ಧವಾಗಿದ್ದು, ಕಳೆದ ಹಲವು ವರ್ಷಗಳಿಗಿಂತ ಈ ವರ್ಷ ಬಹಳ ನೀರು ಕಡಿಮೆಯಾಗಿದ್ದು ಇನ್ನೂ ಮಳೆ ಬಾರದಿದ್ದರೆ ಲಾಂಚ್ ಸಂಪರ್ಕ ಅಸಾಧ್ಯ ವಾಗಿದೆ.ಜೂನ್ ಮೊದಲ ವಾರ ಮುಗಿಯುತ್ತಾ ಬಂದರೂ ಮಳೆಯ ಲಕ್ಷಣಗಳು ಕಾಣುತ್ತಿಲ್ಲ.ಶರಾವತಿ ಒಡಲು ಬತ್ತಿ ಬಹುತೇಕ ಬರಿದಾಗಿದ್ದು ಹೀಗೆ ಮುಂದು ವರೆದರೆ ಲಾಂಚ್ ಸಂಪರ್ಕ ಸ್ಥಗಿತವಾಗುವ ಲಕ್ಷಣ ಕಂಡುಬರುತ್ತಿದೆ.

  ಲಾಂಚ್ ನಿಲ್ಲಿಸುವ ಎರಡೂ ದಡಗಳ ಪ್ಲಾಟ್ ಫಾರಂ ಗಳು ಮುಕ್ತಾಯವಾಗಿದ್ದು ವಾಹನ ಏರಿಸಲು,ಇಳಿಸಲು ಸಾಹಸ ಪಡುವಂತಾಗಿದೆ.ಲಕ್ಷಗಟ್ಟಲೆ ಬೆಲೆಬಾಳುವ ಬಸ್ಸು,ಕಾರುಗಳು ಇಲ್ಲಿ ಮುರಿದು ಹೋಗುತ್ತಿದ್ದು ಜನ ಪರದಾಡುವಂತಾಗಿದೆ.ಹೀಗೆ ಲಾಂಚ್ ಏನಾದರೂ ನಿಂತು ಕಲೆಕ್ಷನ್ ಮಾಡಿ ಜನರನ್ನು ಮಾತ್ರ ದಾಟಿಸುವಂತಾದರೆ ಇಲ್ಲಿನ ಅನಾರೋಗ್ಯ ಪೀಡಿತರಿಗೆ,ಹೆರಿಗೆಯ ದಿನ ಹತ್ತಿರವಾಗುತ್ತಿರು ಗರ್ಭಿಣಿಯರಿಗೆ ,ಹಾವು ಕಡಿದವರಿಗೆ, ಕಡುಕಷ್ಟವಾಗುವ ಸಾಧ್ಯತೆ ಎದುರಾಗಿದೆ. 

     ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಪ್ರಯತ್ನದಿಂದ ನಿರ್ಮಾಣವಾಗುತ್ತಿರುವ ಸೇತುವೆಯ ಕೆಲಸ ಬರದಿಂದ ಸಾಗುತ್ತಿದ್ದು ಬಹುಬೇಗ ಈ ಕಾಮಗಾರಿ ಮುಗಿದು ಜನರ ಸಂಕಷ್ಟ ನೀಗುವಂತಾಗಲಿ ಎಂಬುದು ಬಹುಜನರ ನಿರೀಕ್ಷೆಯಾಗಿದೆ.

ಓಂಕಾರ ಎಸ್. ವಿ. ತಾಳಗುಪ್ಪ….

Related Articles

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...