Home ತೀರ್ಥಹಳ್ಳಿBig breaking news: ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ಮೇಲೆ ಪೊಲೀಸರ ದಾಳಿ..! ಅಪಾರ ಪ್ರಮಾಣದ ವಿದೇಶಿ ಮಧ್ಯ ಹಾಗೂ ಕಾಡು ಪ್ರಾಣಿಗಳ ಕೊಂಬು ವಶ ‌..!

Big breaking news: ತೀರ್ಥಹಳ್ಳಿ ವಿಹಂಗಮ ರೆಸಾರ್ಟ್ ಮೇಲೆ ಪೊಲೀಸರ ದಾಳಿ..! ಅಪಾರ ಪ್ರಮಾಣದ ವಿದೇಶಿ ಮಧ್ಯ ಹಾಗೂ ಕಾಡು ಪ್ರಾಣಿಗಳ ಕೊಂಬು ವಶ ‌..!

by EDITOR NEWS WARRIORS
0 comments

ತೀರ್ಥಹಳ್ಳಿ : ವಿಹಂಗಮ ರೆಸಾರ್ಟ್ ನಲ್ಲಿ ಹಲವು ವರ್ಷಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ವಿದೇಶಿ ಮಧ್ಯಗಳ ಸರಬರಾಜು, ಕಾಡುಪ್ರಾಣಿಗಳ ಕೊಂಬು ಮಾರಾಟದ ಬಗ್ಗೆ ಅಲ್ಲಲ್ಲಿ ಗುಸು ಗುಸು ಪಿಸು ಪಿಸು ಮಾತುಗಳು ನಡೆಯುತ್ತಿದ್ದವು.

ತೀರ್ಥಹಳ್ಳಿ ಪೊಲೀಸ್ ಇಲಾಖೆಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ,

     ಗಜಾನನ ವಾಮನ ಸುತಾರ  ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ಮತ್ತು  ಅಶ್ವತ್ ಗೌಡ  ಪೋಲಿಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದ  ಸಾಗರ್ ಅತ್ತರವಾಲ ಪೊಲೀಸ್ ಉಪನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ,  ನವೀನ್ ಕುಮಾರ್ ಮಠಪತಿ ಪೊಲೀಸ್ ಉಪನಿರೀಕ್ಷಕರು ಮಾಳೂರು ಪೊಲೀಸ್ ಠಾಣೆ,  ರಂಗನಾಥ ಅಂತರಗಟ್ಟಿ ಪೋಲಿಸ್ ಉಪನಿರೀಕ್ಷಕರು ಆಗುಂಬೆ ಪೊಲೀಸ್ ಠಾಣೆ,  ಪ್ರವೀಣ್, ಪೊಲೀಸ್ ಉಪ ನಿರೀಕ್ಷಕರು, ರಿಪ್ಪನ್ ಪೇಟೆ ಪೊಲೀಸ್ ಠಾಣೆ ಹಾಗೂ 50 ಜನ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ತಂಡವು ನಿನ್ನೆ ಅಂದರೆ ದಿನಾಂಕ  : 12-08-2023 ರಂದು ರಾತ್ರಿ ಸ್ಥಳಕ್ಕೆ ಹೋಗಿ ವಿಹಂಗಮ ರೆಸಾರ್ಟ್  ಮೇಲೆ ದಾಳಿ ನಡೆಸಿ  ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 1) ಅಂದಾಜು ಮೌಲ್ಯ  1,00,000/- ರೂಗಳ  ಒಂದು ಡಬಲ್ ಬ್ಯಾರಲ್ ಬಂದೂಕು, 2) ಅಂದಾಜು ಮೌಲ್ಯ 25,000 /- ರೂಗಳ   310 ಜೀವಂತ ಗುಂಡುಗಳು    3) ಒಂದು ಕತ್ತಿ ಮತ್ತು ಒಂದು ಚಾಕು 4) ಮೂರು ಕಾಡು ಕೋಣದ ಕೊಂಬಿನ ಟ್ರೊಫಿ, 5) ಆರು ಜಿಂಕೆ ಕೊಂಬಿನ ಟ್ರೊಫಿ, 6) ಒಂದು ಸಿಸಿ ಟಿವಿ ಡಿವಿ ಆರ್ 7) ಅಂದಾಜು ಮೌಲ್ಯ 7,650/- ರೂ ಗಳ ಒಟ್ಟು 51 ಬಿಯರ್ ಟಿನ್ ಗಳು, 8) ಅಂದಾಜು ಮೌಲ್ಯ 1,00,000/- ರೂ ಗಳ ಮದ್ಯ ತುಂಬಿದ ಬಾಟಲ್ ಗಳು 9) ಅಂದಾಜು ಮೌಲ್ಯ 750/- ರೂ ಗಳ ಒಟ್ಟು 6 Breezer ಬಾಟಲ್ ಮತ್ತು 10) 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ದಕ್ಷ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜೆ ಕೆ ಅವರ ಆದೇಶದ ಮೇರೆಗೆ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ್ ವಾಮನ್ ಸುತಾರ್ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪೊಲೀಸ್ ಇಲಾಖೆ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ .

ರಘುರಾಜ್ ಹೆಚ್.ಕೆ…9449553305…

Related Articles

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...