Home ತೀರ್ಥಹಳ್ಳಿತೀರ್ಥಹಳ್ಳಿ ಪೊಲೀಸರಿಂದ ಮನೆಮರಿದು ಕಳ್ಳತನ ಮಾಡಿದ ಆರೋಪಿಗಳ ಪತ್ತೆ..! ಹಣ, ಚಿನ್ನ, ಬೆಳ್ಳಿ ವಶ ಆರೋಪಿಗಳು ಜೈಲಿಗೆ..!

ತೀರ್ಥಹಳ್ಳಿ ಪೊಲೀಸರಿಂದ ಮನೆಮರಿದು ಕಳ್ಳತನ ಮಾಡಿದ ಆರೋಪಿಗಳ ಪತ್ತೆ..! ಹಣ, ಚಿನ್ನ, ಬೆಳ್ಳಿ ವಶ ಆರೋಪಿಗಳು ಜೈಲಿಗೆ..!

by EDITOR NEWS WARRIORS
0 comments

ತೀರ್ಥಹಳ್ಳಿ: ತಾಲೂಕಿನ ಕಳಸ ಗುಂಡಿ ಗ್ರಾಮದ ಉಮೇಶ್ ಎನ್ನುವವರು ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದಾಗ ಅವರ ತಂದೆ ಮನೆಯಲ್ಲಿ ಇದ್ದರು ಅವರು ಮನೆಗೆ ಬೀಗ ಹಾಕಿಕೊಂಡು ತೋಟಕ್ಕೆ ಹೋಗಿ ಬಂದಾಗ ಅವರಿಗೆ ಶಾಕ್ ಆಗಿತ್ತು ಕಾರಣ ಅವರ ಮನೆಯ ಹಂಚನ್ನು ತೆಗೆದು ಬೀರುವಿನಲ್ಲಿ ಇಟ್ಟಿದ್ದ ಸುಮಾರು 4,93,000/- ರೂಗಳ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ. ಈ ಸಂಬಂಧ ತೀರ್ಥಳ್ಳಿ ತಾಲೂಕಿನ ಮಾಲೂರು ಠಾಣೆಯಲ್ಲಿ ಗುನ್ನೆ ಸಂಖ್ಯೆ 0009/2025 ಕಲಂ 305, 331(3) ಬಿ ಎನ್ ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಪತ್ತೆಗಾಗಿ ತಂಡ ರಚಿಸಿದ ಎಸ್ಪಿ ಮಿಥುನ್ ಕುಮಾರ್ ..!

ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಶಿವಮೊಗ್ಗ ಜಿಲ್ಲೆ, ಕಾರಿಯಪ್ಪ ಎ.ಜಿ.ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ, ಅರವಿಂದ್ ಎನ್ ಕಲಗುಚ್ಚಿ ಪೊಲೀಸ್ ಉಪಾಧೀಕ್ಷಕರು ತೀರ್ಥಹಳ್ಳಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀಧರ್ ಪೊಲೀಸ್ ವೃತ್ತ ನಿರೀಕ್ಷಕರು ಮಾಳೂರು ವೃತ್ತ ರವರ ನೇತೃತ್ವದಲ್ಲಿ, ಕುಮಾರ್ ಕುರಗುಂದ ಪಿಎಸ್ಐ, ಮಾಳೂರು ಪೊಲೀಸ್ ಠಾಣೆ ಶಿವಾನಂದ ಧರೇನವರ್, ಪಿಎಸ್ಐ ಮಾಳೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ಸುರಕ್ಷಿತ್, ಮೋಹನ್, ಮೇಘರಾಜ್, ಮಂಜುನಾಥ, ಲೊಕೇಶ್, ಸಿಪಿಸಿ ಸಂತೋಷ್ ಕುಮಾರ್, ರಮೇಶನಾಯ್ಕ, ವಿವೇಕ, ಪುನೀತ್ ಕುಮಾರ್, ವಿನಯ್ ಕುಮಾರ್, ಅರವಿಂದ, ಚೇತನ್ ಕುಮಾರ್ ಅಭಿಲಾಷ್, ಮಂಜಾನಾಯ್ಕ, ಪ್ರವೀಣ್ ಕುಮಾರ್ ಮತ್ತು ಪ್ರಸನ್ನ ರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕಃ 13-03-2025 ರಂದು ಪ್ರಕರಣದ ಆರೋಪಿತರಾದ 1) ಅಬ್ದುಲ್ ಶಫೀಕ್ ಅಬ್ದುಲ್ ರಶೀದ್, 21 ವರ್ಷ, ಶ್ರೀರಾಮನಗರ, ಗೋಪಾಳ, ಶಿವಮೊಗ್ಗ. 2) ಖಲೀಲ್ ಖಾನ್ 24 ವರ್ಷ, ಸೂಳೆಬೈಲ್ ಶಿವಮೊಗ್ಗ ಟೌನ್ ಮತ್ತು 3) ಸೈಯದ್ ಜಾವೀದ್ @ ಶೋಯೆಬ್, 23 ವರ್ಷ, ಜೆ.ಪಿ. ನಗರ, ಶಿವಮೊಗ್ಗ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಆರೋಪಿತರಿಂದ ಮೇಲ್ಕಂಡ ಪ್ರರಕಣವೂ ಸೇರಿದಂತೆ, ಮಾಳೂರು ಪೊಲೀಸ್ ಠಾಣೆಯಲ್ಲಿ 2025ನೇ ಸಾಲಿನಲ್ಲಿ ವರದಿಯಾದ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 80,000/- ರೂಗಳ ಸುಜುಕಿ ಆಕ್ಸೆಸ್ ಸ್ಕೂಟರ್, ಅಂದಾಜು ಮೌಲ್ಯ 5,50,000/- ರೂಗಳ 72 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 22,000/- ರೂಗಳ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 6,52,000/- ರೂಪಾಯಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರನ್ನು ಘನ ನ್ಯಾಯಾಲಯಕ್ಕೆ ಹಾಜರ್ ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್‌‌ ಜಿ ಕೆ ಅಭಿನಂದಿಸಿದ್ದಾರೆ.

ರಘುರಾಜ್ ಹೆಚ್. ಕೆ..9449553305…

Related Articles

Latest news
Big news : ಜಿಪಿಟಿ ನೇಮಕಾತಿಯಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತ: ಸರ್ಕಾರದ ವಿರುದ್ಧ ಆಕಾಂಕ್ಷಿಗಳ ತೀವ್ರ ... ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?!