Wednesday, April 30, 2025
Google search engine

ಅವ್ವ’ ಕಿರುಚಿತ್ರ ಬಿಡುಗಡೆ….
ಹುಬ್ಬಳ್ಳಿ: ‘ಅವ್ವ’ ಎಂಬ ಪದದಲ್ಲಿ ಏನೋ ಸೆಳೆತವಿದೆ.ಈ ಅವ್ವ (ಬರಿ ಹಡೆದವಳಲ್ಲ) ಎಂಬ ಕಿರುಚಿತ್ರವನ್ನು ಚಲನಚಿತ್ರ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ (ಡೆಡ್ಲಿ) ಬಿಡುಗಡೆಗೊಳಿಸಿದರು.
ಅವರು ಡಾ.ವಿಷ್ಣುಸೇನಾ ಸಮಿತಿ(ರಿ) ಧಾರವಾಡ ಜಿಲ್ಲಾ ಘಟಕ ಹುಬಳ್ಳಿ ಅವರು ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ನಂತರ ಮಾತನಾಡಿ ಅವ್ವ ಎಂಬುದು ಬಹಳ ಅಪ್ಯಾಯಮಾನವಾಗಿದೆ. ತಾಯಿ ಮಮತೆ ಯಾವುದಕ್ಕೂ ಹೋಲಿಸಲಾಗದು, ಬಣ್ಣಿಸಲಂತೂ ಸಾಧ್ಯವಿಲ್ಲ. ಇಂತಹ ಅವ್ವ ಎಂಬುವಳ ಬಗ್ಗೆ ಮೂಡಿಬಂದ ಕಿರುಚಿತ್ರ ಎಲ್ಲರ ಮನ ತಲುಪಲಿ ಎಂದು ಶುಭಹಾರೈಸಿದರು.
ಉತ್ತರ ಕರ್ನಾಟಕದವರೇ ಅದ ಚಲನಚಿತ್ರದ ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ(ಪಾಂಡು) ಮಾತನಾಡಿ, ಅವ್ವನ ಹೆಸರಿನಲ್ಲಿ ಎಷ್ಟು ಸಿನಿಮಾ ತೆಗೆದರೂ ಮುಗಿಯದ ವಿಷಯ. ಅವ್ವ ಎಂದರೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿದ ಈ ಕಿರುಚಿತ್ರ ಯಶಸ್ವಿಯಾಗಲಿ. ಇನ್ನೂ ಇಲ್ಲಿರುವ ಹಲವಾರು ಕಲಾವಿದರಿಗೆ ಅವಕಾಶಗಳು ಸಿಕ್ಕು ಅವರ ಪ್ರತಿಭೆ ಹೊರಹೊಮ್ಮುವಂತಾಗಲಿ ಎಂದು ಶುಭಕೋರಿದರು.

ತಾಯಿಯನ್ನು ಕಳೆದುಕೊಂಡ ಇಬ್ಬರು ಮೊಮ್ಮಕ್ಕಳನ್ನು ಜೋಪಾನ ಮಾಡಿದ ಅಜ್ಜಿ ತಾಯಿ ವಾತ್ಸಲ್ಯವನ್ನು ಮೊಮ್ಮಕ್ಕಳಿಗೆ ನೀಡಿದಳು. ಕೊರೊನಾದ ದಿನಗಳಲ್ಲಿ ವ್ಯಾಕ್ಸಿನ್ ಪಡೆಯಬೇಕು ಎಂದು ಮೊಮ್ಮಗ ಹೇಳುತ್ತಾನೆ. ಅನಕ್ಷರಸ್ಥ ಹಿರಿಯ ಮೊಮ್ಮಗ ವ್ಯಾಕ್ಸಿನ್ ಬೇಡ ಎನ್ನುತ್ತಾರೆ. ಮೂಢರ ಮಾತು ಕೇಳಿ ವ್ಯಾಕ್ಸಿನ್‌ದಿಂದ ಸಾಯುತ್ತಾರೆ ಎಂಬ ಮಾತು ನಂಬಿ ಬಿಡುತ್ತಾನೆ. ಅವ್ವಗ ವ್ಯಾಕ್ಸಿನ್ ಬೇಡೆಂಬ ನಿರ್ಧಾರಕ್ಕೆ ಬರುತ್ತಾನೆ. ದೇವರಿಗೆ ಹರಕೆ ಹೊತ್ತಿರುವೆ ಏನು ಆಗಲ್ಲ ಎಂದು ನಂಬುತ್ತಾನೆ. ನಂತರದ ದಿನಗಳಲ್ಲಿ ಅವ್ವಗ ಕೆಮ್ಮು ಶುರುವಾಗುತ್ತದೆ. ಮುಂದಿನ ವಿಷಯವನ್ನು ಚಿತ್ರದಲ್ಲಿ ನೋಡಬಹುದು. ಕತೆಯ ಕೊನೆಗೆ ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಸಿ ಅರುಣಕುಮಾರ ಅವರು ಲಸಿಕೆ ಮಹತ್ವ ಕುರಿತು ಒಂದಿಷ್ಟು ಮಾತುಗಳನ್ನು ಹೇಳಿ ಕತೆಗೆ ಮೆರುಗು ನೀಡಿದ್ದಾರೆ.

ಕತೆ ಬರೆದು ನಿರ್ಮಾಣದ ಹೊಣೆಯನ್ನು ಮೃತ್ಯುಂಜಯ ಹಿರೇಮಠ ಹೊತ್ತಿದ್ದಾರೆ. ವಿಕ್ರಂ ಕುಮಟಾ ಅವರು ಚಿತ್ರಕತೆ,ಸಂಭಾಷಣೆ ಜತೆಗೆ ನಿರ್ದೇಶನ ಮಾಡಿದ್ದಾರೆ. ಪ್ರಚಾರಕಲೆ ಡಾ. ಪ್ರಭು ಗಂಜಿಹಾಳ,ಡಾ. ವೀರೇಶ್ ಹಂಡಿಗಿ ಅವರದು ಇದೆ. ಬಸವರಾಜ ಇಂಚಲ ಅವರ ಛಾಯಾಗ್ರಹಣ , ಕೃಷ್ಣ ಪಂತ ಅವರು ಸಂಕಲನ ಮಾಡಿದ್ದಾರೆ. ಪಾತ್ರ ವರ್ಗದಲ್ಲಿ ಮಾಸ್ಟರ್ ಶ್ರವಣ ಹಿರೇಮಠ, ರೇಖಾ ಹೊನವಾಡ, ವೆಂಕಟೇಶ ಭಂಡಾರಿ, ಮಹೇಶ ಚೌಕಿಮಠ ಉತ್ತಮವಾಗಿ ನಟಿಸಿದ್ದಾರೆ. ಧಾರವಾಡ ಜಿಲ್ಲಾ ಡಾ.ವಿಷ್ಣು ಸೇನಾ ಸಮಿತಿ ಈ ಕಿರುಚಿತ್ರವನ್ನು ಅರ್ಪಿಸಿದ್ದು. ಈ ಕಿರು ಚಿತ್ರವನ್ನು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್ ನಲ್ಲಿ ಸದ್ದು ಮಾಡುತ್ತಿದೆ.

ಅಪ್ಯಾಯಮಾನವಾಗಿದೆ. ತಾಯಿ ಮಮತೆ ಯಾವುದಕ್ಕೂ ಹೋಲಿಸಲಾಗದು, ಬಣ್ಣಿಸಲಂತೂ ಸಾಧ್ಯವಿಲ್ಲ. ಇಂತಹ ಅವ್ವ ಎಂಬುವಳ ಬಗ್ಗೆ ಮೂಡಿಬಂದ ಕಿರುಚಿತ್ರ ಎಲ್ಲರ ಮನ ತಲುಪಲಿ ಎಂದು ಶುಭಹಾರೈಸಿದರು.

ಉತ್ತರ ಕರ್ನಾಟಕದವರೇ ಅದ ಚಲನಚಿತ್ರದ ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ(ಪಾಂಡು) ಮಾತನಾಡಿ, ಅವ್ವನ ಹೆಸರಿನಲ್ಲಿ ಎಷ್ಟು ಸಿನಿಮಾ ತೆಗೆದರೂ ಮುಗಿಯದ ವಿಷಯ. ಅವ್ವ ಎಂದರೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಉತ್ತರ ಕರ್ನಾಟಕದ ಕಲಾವಿದರೇ ಅಭಿನಯಿಸಿದ ಈ ಕಿರುಚಿತ್ರ ಯಶಸ್ವಿಯಾಗಲಿ. ಇನ್ನೂ ಇಲ್ಲಿರುವ ಹಲವಾರು ಕಲಾವಿದರಿಗೆ ಅವಕಾಶಗಳು ಸಿಕ್ಕು ಅವರ ಪ್ರತಿಭೆ ಹೊರಹೊಮ್ಮುವಂತಾಗಲಿ ಎಂದು ಶುಭಕೋರಿದರು.

ತಾಯಿಯನ್ನು ಕಳೆದುಕೊಂಡ ಇಬ್ಬರು ಮೊಮ್ಮಕ್ಕಳನ್ನು ಜೋಪಾನ ಮಾಡಿದ ಅಜ್ಜಿ ತಾಯಿ ವಾತ್ಸಲ್ಯವನ್ನು ಮೊಮ್ಮಕ್ಕಳಿಗೆ ನೀಡಿದಳು. ಕೊರೊನಾದ ದಿನಗಳಲ್ಲಿ ವ್ಯಾಕ್ಸಿನ್ ಪಡೆಯಬೇಕು ಎಂದು ಮೊಮ್ಮಗ ಹೇಳುತ್ತಾನೆ. ಅನಕ್ಷರಸ್ಥ ಹಿರಿಯ ಮೊಮ್ಮಗ ವ್ಯಾಕ್ಸಿನ್ ಬೇಡ ಎನ್ನುತ್ತಾರೆ. ಮೂಢರ ಮಾತು ಕೇಳಿ ವ್ಯಾಕ್ಸಿನ್‌ದಿಂದ ಸಾಯುತ್ತಾರೆ ಎಂಬ ಮಾತು ನಂಬಿ ಬಿಡುತ್ತಾನೆ. ಅವ್ವಗ ವ್ಯಾಕ್ಸಿನ್ ಬೇಡೆಂಬ ನಿರ್ಧಾರಕ್ಕೆ ಬರುತ್ತಾನೆ. ದೇವರಿಗೆ ಹರಕೆ ಹೊತ್ತಿರುವೆ ಏನು ಆಗಲ್ಲ ಎಂದು ನಂಬುತ್ತಾನೆ. ನಂತರದ ದಿನಗಳಲ್ಲಿ ಅವ್ವಗ ಕೆಮ್ಮು ಶುರುವಾಗುತ್ತದೆ. ಮುಂದಿನ ವಿಷಯವನ್ನು ಚಿತ್ರದಲ್ಲಿ ನೋಡಬಹುದು. ಕತೆಯ ಕೊನೆಗೆ ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಸಿ ಅರುಣಕುಮಾರ ಅವರು ಲಸಿಕೆ ಮಹತ್ವ ಕುರಿತು ಒಂದಿಷ್ಟು ಮಾತುಗಳನ್ನು ಹೇಳಿ ಕತೆಗೆ ಮೆರುಗು ನೀಡಿದ್ದಾರೆ.
ಕತೆ ಬರೆದು ನಿರ್ಮಾಣದ ಹೊಣೆಯನ್ನು ಮೃತ್ಯುಂಜಯ ಹಿರೇಮಠ ಹೊತ್ತಿದ್ದಾರೆ. ವಿಕ್ರಂ ಕುಮಟಾ ಅವರು ಚಿತ್ರಕತೆ,ಸಂಭಾಷಣೆ ಜತೆಗೆ ನಿರ್ದೇಶನ ಮಾಡಿದ್ದಾರೆ. ಪ್ರಚಾರಕಲೆ ಡಾ. ಪ್ರಭು ಗಂಜಿಹಾಳ,ಡಾ. ವೀರೇಶ್ ಹಂಡಿಗಿ ಅವರದು ಇದೆ. ಬಸವರಾಜ ಇಂಚಲ ಅವರ ಛಾಯಾಗ್ರಹಣ , ಕೃಷ್ಣ ಪಂತ ಅವರು ಸಂಕಲನ ಮಾಡಿದ್ದಾರೆ. ಪಾತ್ರ ವರ್ಗದಲ್ಲಿ ಮಾಸ್ಟರ್ ಶ್ರವಣ ಹಿರೇಮಠ, ರೇಖಾ ಹೊನವಾಡ, ವೆಂಕಟೇಶ ಭಂಡಾರಿ, ಮಹೇಶ ಚೌಕಿಮಠ ಉತ್ತಮವಾಗಿ ನಟಿಸಿದ್ದಾರೆ. ಧಾರವಾಡ ಜಿಲ್ಲಾ ಡಾ.ವಿಷ್ಣು ಸೇನಾ ಸಮಿತಿ ಈ ಕಿರುಚಿತ್ರವನ್ನು ಅರ್ಪಿಸಿದ್ದು. ಈ ಕಿರು ಚಿತ್ರವನ್ನು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನಲ್ ನಲ್ಲಿ ಸದ್ದು ಮಾಡುತ್ತಿದೆ.

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...