ಲಾಫಿಂಗ್ ಬುದ್ಧ ಎನ್ನುವ ಚಿತ್ರ ನಗಿಸುತ್ತಲೆ ಅಳಿಸುವ ಒಂದಷ್ಟು ಮನರಂಜನೆಯ ಜೊತೆಗೆ ಸಮಾಜವನ್ನು ಕಾಪಾಡುವ ಪೊಲೀಸ್ ವ್ಯವಸ್ಥೆ ಅದರಲ್ಲೂ ತಳಮಟ್ಟದ ಸಿಬ್ಬಂದಿಗಳು ಅನುಭವಿಸುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಒಂದು ಅತ್ಯುತ್ತಮ ಚಿತ್ರ ಎಂದರೆ ತಪ್ಪಾಗಲಾರದು.
ಎಲ್ಲೂ ಬೋರ್ ಹೊಡಿಸದೆ ಸಾಗುವ ಚಿತ್ರ ಒಂದಷ್ಟು ಕುತೂಹಲದ ಜೊತೆಗೆ ಏನಾಗುತ್ತದೆ ಮುಂದೆ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿಸುತ್ತದೆ.
ಇನ್ನೇನು ಕಥೆ ಅಂತಿಮ ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಮತ್ತೆ ಇನ್ನೊಂದಷ್ಟು ತಿರುವು ಪಡೆದುಕೊಳ್ಳುತ್ತದೆ .
ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸುವಂತೆ ಮಾಡುವಲ್ಲಿ ಲಾಫಿಂಗ್ ಬುದ್ಧ ಚಿತ್ರದ ಪಾತ್ರ ಮಹತ್ವ ಪಡೆದುಕೊಂಡಿದೆ.
ಒಂದಷ್ಟು ಹಾಸ್ಯ, ಕುತೂಹಲ, ಕೆರಳಿಸುವ ಚಿತ್ರ ನಗಿಸುತ್ತಲೆ ಅಳಿಸುವ ಚಿತ್ರ ಕೊನೆಯಲ್ಲಿ ಉತ್ತಮ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.
ಒಂದೊಳ್ಳೆ ಸದಭಿರುಚಿಯ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಪ್ರಮೋದ್ ಶೆಟ್ಟಿ ಪಾತ್ರ ವರ್ಗದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು.ಪ್ರೇಕ್ಷಕರು ಕೊಡುವ ಹಣಕ್ಕೆ ಯಾವುದೇ ಮೋಸ ಮಾಡದೆ ಒಂದೊಳ್ಳೆ ಚಿತ್ರವನ್ನು ಜನಕ್ಕೆ ನೀಡಿದ್ದು ಗೌರಿ ಗಣೇಶ ಹಬ್ಬದ ಈ ಸಮಯದಲ್ಲಿ ಬಿಡು ಮಾಡಿಕೊಂಡು ಈ ಚಿತ್ರವನ್ನು ನೋಡಿದರೆ ಒಂದಷ್ಟು ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಬಹುದು.
ರಘುರಾಜ್ ಹೆಚ್.ಕೆ..9449553305.