
ಮಲೆನಾಡು ಎಂದರೆ ಸುಸಂಸ್ಕೃತರ, ಸಭ್ಯರ , ಬುದ್ದಿವಂತರ ತವರೂರು ಆದರೆ ಕೆಲವರು ಮಾಡುವ ಅನಾಚಾರಗಳಿಂದ ಆ ಹೆಸರಿಗೆ ಮಸಿಬಳಿಯುವಂತಹ ಪರಿಸ್ಥಿತಿ ಬಂದೊದಗಿದೆ.
ಅಕ್ರಮ ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಇದರ ಜೊತೆಗೆ ಗಾಂಜಾ ಮಾರಾಟ ಸೇವನೆ ವ್ಯಾಪಕವಾಗಿ ತಾಲೂಕಿನಾದ್ಯಂತ ಹರಡಿದ್ದು. ಇತ್ತೀಚೆಗೆ ಇದರ ವಿರುದ್ಧ ಪತ್ರಿಕಾ ಮಾಧ್ಯಮಗಳು ಕೂಡ ವ್ಯಾಪಕವಾಗಿ ವರದಿಗಳನ್ನು ಮಾಡುತ್ತಿವೆ.
ತೀರ್ಥಹಳ್ಳಿಯ ಹೊಸೂರಿನಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ:
ತೀರ್ಥಹಳ್ಳಿ ಸಮೀಪದ ಹೊಸೂರು ಗ್ರಾಮದ ನಿತಿನ್ ತಂದೆ ಮಂಜುನಾಥ್ 24 ವರ್ಷ ಈತ ಗಾಂಜಾ ಸೇವಿಸುತ್ತಿದ್ದು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಗಸ್ತಿನಲ್ಲಿದ್ದ ಆಗುಂಬೆ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಈತನನ್ನು ಬಂಧಿಸಿ ಶಿವಮೊಗ್ಗ ಮೇಗನ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಈತ ಗಾಂಜಾ ಸೇವನೆ ಮಾಡಿರುವುದು ಖಚಿತವಾದ ನಂತರ ಈತನ ವಿರುದ್ಧ ಕೇಸ್ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ.
ಗಾಂಜಾದ ಪೂರೈಕೆಯ ಮೂಲದ ಹಿಂದೆ ಬಿದ್ದ ತೀರ್ಥಹಳ್ಳಿ ಪೊಲೀಸರು:
ತೀರ್ಥಹಳ್ಳಿಯಲ್ಲಿ ಗಾಂಜಾ ಪೂರೈಕೆ ಹಾಗೂ ಸೇವನೆ ಆಘಾತಕಾರಿ ವಿಷಯವಾಗಿದ್ದು. ಇದನ್ನು ಪೂರೈಸುವವರ ಹಿಂದೆ ಪೊಲೀಸರು ವ್ಯವಸ್ಥಿತವಾಗಿ ಬಿದ್ದಿದ್ದು ಸದ್ಯದಲ್ಲೇ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ.
ಗಾಂಜಾ ಪೂರೈಕೆ ಮಾಡುವವರಿಗೆ ಅಷ್ಟೇ ಅಲ್ಲ ಸೇವನೆ ಮಾಡುವವರಿಗೂ ಕೇಸ್ ಬೀಳುತ್ತೆ ಹುಷಾರ್:
ಮುಂಚೆ ಗಾಂಜಾ ಪೂರೈಕೆ ಮಾಡುವವರಿಗೆ ಹಾಗೂ ದಾಸ್ತಾನು ಇಟ್ಟುಕೊಂಡವರಿಗೆ ಮಾತ್ರ ಕೇಸ್ ಬೀಳುತ್ತಿತ್ತು. ಆದರೆ ಈಗ ಸೇವನೆ ಮಾಡುವವರಿಗೂ ಕೇಸ್ ಬೀಳುತ್ತೆ ಹುಷಾರ್. ಜೈಲು ಪಾಲಾಗುವುದು ಗ್ಯಾರಂಟಿ.
ಅಕ್ರಮ ಮದ್ಯ ಮಾರಾಟಗಾರರಿಗೂ ಎಚ್ಚರಿಕೆ ನೀಡಿದ ಪೊಲೀಸರು:
ತೀರ್ಥಹಳ್ಳಿಯಲ್ಲಿ ಅಂಗಡಿ ಮನೆಗಳಲ್ಲಿ ಯಥೇಚ್ಛವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು ನಿರಂತರವಾಗಿ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸದ್ಯದಲ್ಲೇ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಹಾಗೂ ಅಲ್ಲಿ ಬಂದು ಅಂತಹ ಮದ್ಯವನ್ನು ಸೇವಿಸುವವರಿಗೂ ಸಹ ತಕ್ಕ ಶಿಕ್ಷೆ ನೀಡಲಾಗುವುದು ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ:9449553305