
ಮಲೆನಾಡು ಎಂದರೆ ಪ್ರವಾಸಿಗರಿಗೆ ಅಚ್ಚುಮೆಚ್ಚು ವಾರದ ರಜಾದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಲೆನಾಡಿಗೆ ಪ್ರವಾಸಿಗರ ದಂಡು ಹರಿದು ಬರುತ್ತದೆ.
ಇತ್ತೀಚಿಗೆ ಕೋವಿಡ್ ತೀವ್ರತೆಯಿಂದ ಅದರ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈಗ ಮತ್ತೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

ಇಂಥಹ ಪ್ರವಾಸಿ ತಾಣಗಳಲ್ಲಿ ಒಂದಾದ ಮಂಡಗದ್ದೆ ಪಕ್ಷಿಧಾಮ ವನ್ನು ಅಧಿಕೃತ ಪಕ್ಷಿಧಾಮ ವನ್ನಾಗಿ ಘೋಷಿಸಬೇಕೆಂದು ಗೃಹ ಸಚಿವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆಗಿರುವ ಆರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿನಂತಿ ಮಾಡಿದ್ದರು.
ಈ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದು ಅಧಿಕೃತ ಪಕ್ಷಿಧಾಮವಾಗಿ ಘೋಷಣೆ ಮಾಡಬೇಕೆಂದು ಆದೇಶ ನೀಡಿದ್ದಾರೆ.
ಮಲೆನಾಡಿಗೂ ಹಾಗೂ ಪ್ರವಾಸಿಗರಿಗೂ ಇದು ಸಂತಸದ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಮಂಡಗದ್ದೆ ಪಕ್ಷಿಧಾಮ ಅಧಿಕೃತವಾಗಿ ಪಕ್ಷಿಧಾಮವಾಗಿ ಘೋಷಣೆ ಆಗಲಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…