ಶಿವಮೊಗ್ಗ: ಇಂದು ಶಾರ್ಟ್ ಸೆರ್ಕ್ಯೂಟ್ನಿಂದಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದ ಒಬಿಜಿಯಲ್ಲಿನ ಐಸಿಯುಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದ್ದು.

ಈ ಅವಘಡಕ್ಕೆ ಹೆದರಿದ ಜನರು ಕೆಲಕಾಲ ಭಯಭೀತರಾಗಿದ್ದು. ವಾರ್ಡ್ ಇಂದ ಹೊರಗೆ ಓಡಿ ಬಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಆದ ಅವಗಡ:
ಈ ವಾರ್ಡ್ ನಲ್ಲಿದ್ದ ಐಸಿಯನಲ್ಲಿ ಶಾರ್ಟ್ ಸೆರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಬೆಂಕಿ ಕಾಣಿಸಿಕೊಂಡ ಕೂಡಲೇ ಮೆಗ್ಗಾನ್ ಮಕ್ಕಳ ಕಟ್ಟಡದ ಬಹುತೇಕ ವಾರ್ಡ್ ನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಸದ್ಯ ಒಬಿಜಿ ವಾರ್ಡ್ ನಲ್ಲಿದ್ದ ಇಬ್ಬರು ಮಹಿಳೆಯರು ಮತ್ತು ಮಕ್ಕಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದ್ದು. ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಒಬಿಜಿಯಲ್ಲಿದ್ದ ಉಳಿದ ಉಪಕರಣಗಳನ್ನ ಹೊರಗೆ ತರುವ ಕಾರ್ಯ ಮಾಡಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಭೇಟಿ ನೀಡಿದ್ದಾರೆ.
ಇಲ್ಲಿ ಎಲ್ಲವೂ ಸರಿಯಿಲ್ಲ ನಿರಂತರ ಸಮಸ್ಯೆಗಳೇ:
ಮೇಗನ್ ಮಹಿಳಾ ಮತ್ತು ಮಕ್ಕಳ ವಾರ್ಡ್ನಲ್ಲಿ ಎಲ್ಲವೂ ಸರಿಯಿಲ್ಲ ನಿರಂತರ ಸಮಸ್ಯೆಗಳು ಕಂಡುಬರುತ್ತಿದ್ದು. ತಾಯಂದಿರು ಅವರ ಪೋಷಕರು ಈ ವಾರ್ಡ್ ನಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಪತ್ರಿಕಾ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಕಟ ಮಾಡುತ್ತಿದ್ದರು ಎಚ್ಚೆತ್ತುಕೊಳ್ಳದ ಆಡಳಿತ ಮಂಡಳಿ .ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಮುಖರ ತಲೆದಂಡ ವಾಗುವುದು ಖಚಿತ.
ಇದು ಎರಡನೇ ಸಲ ಆದ ಬೆಂಕಿ ಅವಗಡ:
ಇದೆ ವಾರ್ಡ್ನಲ್ಲಿ 2019ರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು.ಆ ಸಮಯದಲ್ಲಿ ನಿರ್ದೇಶಕರಾದ ಡಾಕ್ಟರ್ ಡಾ.ಲೇಪಾಪಕ್ಷಿ ಹೊಣೆಗಾರರನ್ನಾಗಿ ಮಾಡಿ ನಿರ್ದೇಶಕ ಸ್ಥಾನದಿಂದ ತೆಗೆಯಲಾಗಿತ್ತು.
ಈಗಿನ ನಿರ್ದೇಶಕರ ತಲೆದಂಡ ಆಗುತ್ತದೆಯಾ?
2019ರಲ್ಲಿ ಆದ ಘಟನೆ ಮತ್ತೆ ಪುನರಾವರ್ತನೆ ಆಗಿದ್ದು 2021 ರ ಘಟನೆಗೆ ಈಗಿನ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಿ ಅವರ ತಲೆದಂಡ ಆಗುತ್ತದೆಯಾ? ಕಾದುನೋಡಬೇಕು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…