
ರಾಜ್ಯದಲ್ಲಿ ಮರಳು ಮಾಫಿಯಾ ಹೇರಳವಾಗಿ ಹಬ್ಬಿದ್ದು. ಇದರಿಂದ ಜನಸಾಮಾನ್ಯರು ಮನೆ ಕಟ್ಟುವುದು ಹಾಗಿರಲಿ, ಗುಡಿಸಲು ಕಟ್ಟುವುದಕ್ಕೂ ಮರಳು ಕೊಂಡುಕೊಳ್ಳುವುದು ಕಷ್ಟಕರವಾಗಿದೆ.
ಸರ್ಕಾರದ ಮಹತ್ವದ ನಿರ್ಧಾರ ಸಮರ್ಪಕವಾಗಿ ಜಾರಿ ಆಗುತ್ತಾ?
ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ ಕೈಗೆಟುಕುವ ದರದಲ್ಲಿ ಮರಳು ಸಿಗಲು ಅನುಕೂಲವಾಗುವಂತೆ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಮರಳು ನೀತಿಯನ್ನು ಜಾರಿಗೆ ತರುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಯಾಗಿರುವುದರಿಂದ ಇನ್ನು ಮುಂದೆ ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಮರಳು ಲಭ್ಯವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಿಗುತ್ತೆ ಇದರಿಂದ ಲಾಭ:
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ಟನ್ ಮರಳಿಗೆ 300 ರೂ. ನದಿ ಪಾತ್ರದಲ್ಲಿ 700 ರೂ. ನಿಗದಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೆಗೆಯುವ ಮರಳಿಗೆ ಶೇ.50ರಷ್ಟು ರಾಜಸ್ವವನ್ನು ನಿಗದಿಪಡಿಸಲಾಗಿದೆ.
ಇದರಲ್ಲಿ ಶೇ.25ರಷ್ಟು ರಾಜಸ್ವವು ಸರಕಾರಕ್ಕೆ ಹಾಗೂ ಉಳಿದ ಶೇ.25ರಷ್ಟು ರಾಜಸ್ವ ಗ್ರಾಪಂ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಗಳು ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದೆಂದು ತಿಳಿಸಿದರು.
ಯಂತ್ರಗಳಿಂದ ಮರಳು ತೆಗೆಯುವುದನ್ನು ನಿಲ್ಲಿಸಿ ಮಾನವರಿಂದ ಮರಳು ತೆಗೆಯಲು ಸೂಚನೆ:
ಕರಾವಳಿ ತೀರ ಪ್ರದೇಶದಲ್ಲಿ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಸುವುದು ಪರಿಸರಕ್ಕೆ ಹಾನಿಕರ ಎಂಬ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಮಾನವರ ಮೂಲಕವೇ ಮರಳು ತೆಗೆಯುವುದನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ಮರಳುಗಾರಿಕೆ ಸಂಪೂರ್ಣವಾಗಿ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆಯಬೇಕು ಎಂಬುದನ್ನು ಆಯಾ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗುವುದು ಎಂದರು.
ರಾಜ್ಯ ಸರ್ಕಾರವು ಉಪಖನಿಜ ನೀತಿಗೆ ತಿದ್ದುಪಡಿ ಮಾಡಲಾಗಿದ್ದು, ಈವರೆಗೂ 10ರಿಂದ 15 ವರ್ಷ ಮಾತ್ರ ಗುತ್ತಿಗೆ ನೀಡಲಾಗುತ್ತಿತ್ತು. ಇನ್ನು ಮುಂದೆ 50 ವರ್ಷ ಗುತ್ತಿಗೆ ನೀಡಲು ತಿದ್ದುಪಡಿ ಮಾಡಿದ್ದೇವೆ ಎಂದು ತಿಳಿಸಿದರು.
ಸುಗ್ರಿವಾಜ್ಞೆ:
50 ಕೋಟಿ ಮೀರಿದ ಎಲ್ಲಾ ಇಲಾಖೆಯ ಟೆಂಡರ್‍ಗಳನ್ನು ಪರಿಶೀಲಿಸಲು ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲು ಸುಗ್ರೀವಾಜ್ಞೆ ಜಾರಿಗೆ ತರಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಬಳ್ಳಾರಿ ಜಿಲ್ಲೆ ಖನಿಜ ಪ್ರತಿಷ್ಠಾನ ಕ್ರಿಯಾಯೋಜನೆ 6ರಡಿ 30 ಕೋಟಿ ರೂ. ವೆಚ್ಚದಲ್ಲಿ ಹೊಸಪೇಟೆ-ಬಳ್ಳಾರಿ ರಸ್ತೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಹೊಸ ಮರಳು ನೀತಿ ಸಮರ್ಪಕವಾಗಿ ಜಾರಿ ಆಗುತ್ತಾ?
ನಿರಂತರವಾಗಿ ಮಾಧ್ಯಮಗಳ ಮಾಡಿದ ಒತ್ತಾಯಕ್ಕೆ ಜನಸಾಮಾನ್ಯರ ಆಕ್ರೋಶಕ್ಕೆ ಮಣಿದು ಜನಸಾಮಾನ್ಯರಿಗೆ ಒಳಿತಾಗುವ ದೃಷ್ಟಿಯಿಂದ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದೆ. ಹಾಗೆ ಯಂತ್ರಗಳಿಂದ ಮರಳನ್ನು ತೆಗೆಯದೆ ಮಾನವರಿಂದ ಮಾತ್ರ ಮರಳು ತೆಗೆಯಬೇಕೆಂಬ ಎನ್ನುವ ಆದೇಶವನ್ನು ಸಹ ನೀಡಿದೆ.
ಈ ಆದೇಶಗಳು ಸಮರ್ಪಕವಾಗಿ ರಾಜ್ಯದಲ್ಲಿ ಜಾರಿ ಆಗುತ್ತಾ? ಮರಳು ಮಾಫಿಯಾದ ದೊರೆಗಳು ಸರ್ಕಾರದ ಆದೇಶಕ್ಕೆ ಬೆಲೆ ನೀಡುತ್ತಾರ? ಕೆಲವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭ್ರಷ್ಟ ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸುತ್ತಾರ? ಮುಂದಿನ ದಿನಗಳಲ್ಲಿ ಕಾದು ನೋಡಬೇಕು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…