
ಧರ್ಮಸ್ಥಳ: ಮಂಗಳವಾರ >9>ರಾಜ್ಯದಲ್ಲಿ ಗೋವುಗಳ ಹತ್ಯೆ ಮತ್ತು ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇದಿಸಿದ್ದು, ಇದಕ್ಕೆ ಸಂಬಂದಿಸಿದ ಕಾಯಿದೆಯ್ನನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುವುದು ಎಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಹೇಳಿದ್ದಾರೆ.
ಪೊಲೀಸ್ ಠಾಣೆಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ “ಅಕ್ರಮ ಗೋವುಗಳ ಸಾಗಾಟ ಮತ್ತು ಹತ್ಯೆಯನ್ನು ತಡೆಗಟ್ಟಲು ರಾಜ್ಯದ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ” ಎಂದರು.
“ಈ ಹಿಂದೆ ಅಕ್ರಮ ಗೋವುಗಳ ಸಾಗಾಟ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡ ಉದಾಹರಣೆಗಳು ಇದ್ದು, ಇದರಿಂದ ಹಲವು ಬಾರಿ ಸಂಘರ್ಷಕ್ಕೂ ಕಾರಣವಾಗಿದ್ದವು. ಪೊಲೀಸರು, ಗೋವುಗಳ ಹತ್ಯೆ ಮತ್ತು ಅಕ್ರಮ ಸಾಗಾಟ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರಿಂದ, ಸಾರ್ವಜನಿಕರ ಮಧ್ಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ” ಎಂದರು.
ಮತಾಂತರ ತಡೆ ಕಾಯಿದೆ ಕುರಿತು, ಕೇಳಲಾದ ಪ್ರಶ್ನೆಗೆ, ಸಚಿವರು ಉತ್ತರಿಸುತ್ತಾ ” ಈ ಸಂಬಂಧ ಪ್ರಕ್ರಿಯೆಗಳು ನಡೆದಿದೆ, ಹಾಗೂ ಪ್ರಸ್ತುತ ಇರುವ ಕಾಯಿದೆಯನ್ನು ಉಪಯೋಗಿಸಿಕೊಂಡು ಯಾವುದೇ ರೀತಿಯ ಬಲವಂತದ ಅಥವಾ ಆಮಿಷಗಳನ್ನೊಡ್ಡಿ ನಡೆಸಲಾಗುವ ಮತಾಂತರ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು”
ಎಂದರು.
ನಂತರ, ಸಚಿವರು, ಪೊಲೀಸ್ ಠಾಣೆಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು, ಧರ್ಮಸ್ಥಳದ ಧರ್ಮಾಧಿಕಾರಿ, ಪೂಜ್ಯ ಶ್ರೀ, ವೀರೇಂದ್ರ ಹೆಗ್ಗಡೆಯವರು, ಸ್ಥಳೀಯ ಶಾಸಕ ಶ್ರೀ ಹರೀಶ್ ಪೂಂಜಾ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಇತರರು ಈ ಸಂಧರ್ಭದಲ್ಲಿ ಪಾಲ್ಗೊಂಡಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…