ಹರಿಹರ: ಅಕ್ಟೋಬರ್ 11ರಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಿಟ್ಲ ಕಟ್ಟೆ ಗ್ರಾಮದ ಭದ್ರಾ ಚಾನೆಲ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸುಮಾರು ಇಪ್ಪತ್ತೆಂಟು ವರ್ಷದ ಅನಾಮಧೇಯ ಶವ ದೊರೆತಿದ್ದು ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುಡಿಆರ್ ನಂಬರ್ 34 /2021 ಕಲಂ 174 ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಮೃತ ಮಹಿಳೆಯ ಶವವನ್ನು ಸಂಬಂಧಿಕರು ಗುರುತಿಸಿದ್ದರು.
ಮೃತ ಮಹಿಳೆಯು ಜಗಳೂರು ತಾಲೂಕು ಅಸಗೋಡು ಗ್ರಾಮ ಮಾರುತಿ ಎಂಬಾತನ ಹೆಂಡತಿ ಚೌಡಮ್ಮ/ಕವಿತಾ ಎಂದು ಸಂಬಂಧಿಕರು ಗುರುತಿಸಿದ್ದು.
ಗಂಡ ಮಾರುತಿ ಕೊಲೆಗೆ ಕಾರಣ ಎಂದು ದೂರು ನೀಡಿದ ಸಂಬಂಧಿಕರು: ಆರೋಪಿ ಮಾರುತಿ ಇಬ್ಬರು ಹೆಂಡಿರ ಗಂಡ ನಾಗಿದ್ದು ಅದರಲ್ಲಿ ಚೌಡಮ್ಮ ಹಿರಿಯ ಪತ್ನಿಯಾಗಿದ್ದು. ಈಕೆಯ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸಿ ಕೊಲೆ ಮಾಡಿದ್ದಾನೆ ಎಂದು
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 189/2021. ಕಲಂ 302,201, 34 ಐಪಿಸಿ ರೀತಿ ಕೇಸ್ ದಾಖಲಾಗಿರುತ್ತದೆ.
ಪ್ರಕರಣದ ಬೆನ್ನತ್ತಿದ ಪೊಲೀಸ್ ತಂಡ:
ಪ್ರಕರಣದ ತನಿಖೆಯನ್ನು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನಿಕಾ ಸಕ್ರಿ ವಾಲ್ ಅವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಯು ಅವರು ತನಿಖೆ ನಡೆಸಿ ಚೌಡಮ್ಮ ಪತಿ ಮಾರುತಿ ತಂದೆ ಶಂಭುಲಿಂಗಪ್ಪ (29) ವರ್ಷ ಜಗಳೂರು ತಾಲೂಕ್ ಅಸಗೋಡು ಗ್ರಾಮ ವಾಸಿಯಾದ ಈತನನ್ನು ಒಂದು ತಿಂಗಳ ನಂತರ ಅಂದರೆ 10/11/2021 ರಂದು ಅಂದರೆ ನಿನ್ನೆ ಬಂದಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡ:
ಅನುಮಾನಸ್ಪದ ಸಾವನ್ನು ಬೆನ್ನತ್ತಿದ ಪೊಲೀಸ್ ಇಲಾಖೆ ತಂಡದಲ್ಲಿ ಹರಿಹರ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್ ಯು, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ವೀರಬಸಪ್ಪ ಕುಸಲಾಪುರ, ಹಾಗೂ ಸಿಬ್ಬಂದಿಗಳಾದ ಎ ಎಸ್ ಐ ಯಾಸಿನ್ ಉಲ್ಲಾ, ಮಾಮದ್ ಇಲಿಯಾಸ್, ಸೈಯದ್ ಗಫಾರ್, ವೆಂಕಟೇಶ್ ದ್ವಾರಕೀಶ್, ಅಮ್ಜದ್ ಖಾನ್, ಮುರಳಿಧರ್, ಸಿದ್ದಪ್ಪ ಅವರುಗಳಿಂದ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ದಿನಾಂಕ 10/ 11/2021ರಂದು ಅಂದರೆ ನಿನ್ನೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…