
ನವದೆಹಲಿ: ಕೇಂದ್ರಸರ್ಕಾರದ ಪಿಂಚಣಿದಾರರಿಗೆ ಪಿಂಚಣಿ ಪಡೆಯಲು ಬ್ಯಾಂಕುಗಳು ಅಥವಾ ಅಂಚೆ ಕಚೇರಿಗಳಿಗೆ ಒದಗಿಸಬೇಕಾದ ಜೀವನ ಪ್ರಮಾಣಪತ್ರಕ್ಕೆ ನೀಡುವ ಗಡುವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಈ ಹಿಂದೆ ಜೀವನ ಪ್ರಮಾಣಪತ್ರ ನೀಡಲು ನವೆಂಬರ್ 31 ಕ್ಕೆ ಕೊನೆ ದಿನವಾಗಿತ್ತು. ಇದೀಗ ಡಿಸೆಂಬರ್. 31ರವರೆಗೆ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪಿಂಚಣಿದಾರರು ಡಿ. 31 ರವರೆಗೆ ಜೀವನ ಪ್ರಮಾಣಪತ್ರವನ್ನು ಸಂಬಂಧಿಸಿದ ಬ್ಯಾಂಕ್, ಅಂಚೆ ಇಲಾಖೆಗೆ ಸಲ್ಲಿಸಬಹುದು.
ಪಿಂಚಣಿದಾರರು ಜೀವಂತವಾಗಿದ್ದಾರೆ ಎಂದು ತಿಳಿಯಲು ಕೇಂದ್ರ ಸರ್ಕಾರ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಜೀವನ ಪ್ರಮಾಣಪತ್ರ ಸಲ್ಲಿಸುವ ಅವಧಿಯನ್ನು ಇದೀಗ ವಿಸ್ತರಿಸಲಾಗಿದೆ.
ಇದರ ಸದುಪಯೋಗವನ್ನು ಸಂಬಂಧಪಟ್ಟವರು ಪಡೆದುಕೊಳ್ಳಬಹುದು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..