
ದಾವಣಗೆರೆ: ನಗರದಲ್ಲಿ ಹಂದಿ, ನಾಯಿಗಳ ದಾಳಿ ಹೆಚ್ಚಾಗಿದ್ದು, ಈ ಹಾವಳಿ ನಿಯಂತ್ರಿಸುವಲ್ಲಿ ದಾವಣಗೆರೆ ಮಹಾನಗರ ಸಂಪೂರ್ಣ ಪಾಲಿಕೆ ವಿಫಲವಾಗಿದೆ ಎಂದು ಕರ್ನಾಟಕ ಸೋಷಿಯಲ್ ಸರ್ವಿಸ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್ ಸಂಘಟನೆ ಕಿಡಿಕಾರಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮಹಮ್ಮದ್ ಹಯಾತ್, ನಗರದಲ್ಲಿನ ಹಂದಿ, ನಾಯಿಗಳ ಹಾವಳಿ ನಿಯಂತ್ರಣ ಮಾಡುವಂತೆ ಅನೇಕ ಸಲ ಮನವಿ ಕೊಟ್ಟಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ನಾಯಿ, ಹಂದಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಬಜೆಟ್ ನಲ್ಲಿ 40 ಲಕ್ಷ ಮಿಸಲಿಟ್ಟಿದ್ದು, ಅದರಲ್ಲಿ ಎಷ್ಟು ಖರ್ಚು ಆಗಿದೆ..? ಎಷ್ಟು ಬಾಕಿ ಇದೆ..? ಎಂದು ದಾವಣಗೆರೆ ಜನತೆಗೆ ಪಾಲಿಕೆ ಕಮಿಷನರ್ ಹಾಗೂ ಮೇಯರ್ ಬಹಿರಂಗ ಪಡಿಸಬೇಕು ಒತ್ತಾಯಿಸಿದರು.
ನಾಯಿ, ಹಂದಿ ದಾಳಿಗಳ ನಿಯಂತ್ರಿಸಲು ವಿಫಲವಾದ ಮೇಯರ್ ರಾಜೀನಾಮೆ ನೀಡಬೇಕು. ಪಾಲಿಕೆ ಆಯುಕ್ತರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಇನ್ನು ಪಾಲಿಕೆಯಲ್ಲಿ ವಿರೋಧ ಪಕ್ಷಗಳು ಜನ ಸಾಮಾನ್ಯರ ಸಮಸ್ಯೆ ಪ್ರಶ್ನೆ ಮಾಡುತ್ತಿಲ್ಲ ಹೇಳಿದರು. ಈ ಸಂದರ್ಭದಲ್ಲಿ ಆದಿಲ್ ಖಾನ್, ಬಸವರಾಜ್ ಸೇರಿದಂತೆ ಮತ್ತಿತರರು ಇದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305/7892830899..