ಶಿವಮೊಗ್ಗ: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಗಾಂಜಾ ಮಾರಾಟ ಮತ್ತು ಸೇವನೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಎಸ್ಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಹಲವು ಕಡೆ ದಾಳಿ ಆರೋಪಿಗಳ ಬಂಧನ:
ಜಿಲ್ಲೆಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಎಸ್ಪಿ ಲಕ್ಷ್ಮಿ ಪ್ರಸಾದ್ ಅವರ ನೇತೃತ್ವದಲ್ಲಿ ಇಡೀ ಶಿವಮೊಗ್ಗದ ಪೊಲೀಸರ ತಂಡ ವ್ಯವಸ್ಥಿತವಾಗಿ ಕಾರ್ಯಚರಣೆ ನಡೆಸಿ ಮಾರಾಟ ಮಾಡುವವರನ್ನು ಹಾಗೂ ಸೇವನೆ ಮಾಡುವವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ.
ರಾಗಿ ಗುಡ್ಡದಲ್ಲಿ ನಿಲ್ಲದ ಗಾಂಜಾ ಹಾವಳಿ:
ನಗರದ ರಾಗಿಗುಡ್ಡ ದಲ್ಲಿ ಗಾಂಜಾದ ಹಾವಳಿ ಹೆಚ್ಚಾಗಿದ್ದು ಕೆಲವರು ಈ ಮಾರಾಟದ ದಂಧೆಯಿಂದ ಹಿಂದೆ ಸರಿದಿದ್ದಾರೆ. ಇನ್ನು ಕೆಲವರು ನಿರಂತರವಾಗಿ ಇದರಲ್ಲಿ ತೊಡಗಿದ್ದಾರೆ.
ಗಾಂಜಾದ ಅಮಲಿನಲ್ಲಿ ಹಲ್ಲೆ:
ಎಂಟರಿಂದ ಹತ್ತು ಜನ ಸೇರಿಕೊಂಡು ಗಾಂಜಾದ ಅಮಲಿನಲ್ಲಿ ರಾಗಿಗುಡ್ಡದ ನಿವಾಸಿಯಾದ ಅಜಯ್ ಎಂಬ ಯುವಕನ ಮೇಲೆ ನಿನ್ನೆ ತಡರಾತ್ರಿ ಹಲ್ಲೇ ಮಾಡಿದ್ದು ತೀವ್ರಸ್ವರೂಪದ ಗಾಯವಾಗಿ ನಗರದ ಮೆಟ್ರೋ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಪಡೆಯುತ್ತಿದ್ದಾನೆ.


ಪೊಲೀಸರಿಂದ 5ಜನ ಆರೋಪಿಗಳ ಬಂಧನ:
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಉಳಿದವರ ಹುಡುಕಾಟದಲ್ಲಿದ್ದಾರೆ ಇವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದ್ದು ಮುಂದಿನ ದಿನಗಳಲ್ಲಿ ಗೂಂಡಾ ಕಾಯ್ದೆ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.
ಊರಿನಲ್ಲಿ ಸಭೆ ನಡೆಸಿದ ಗ್ರಾಮಸ್ಥರು ಸಭೆಗೆ ಬಜರಂಗದಳದ ಸಾಥ್:

ಇಂದು ರಾಗಿಗುಡ್ಡದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗಾಂಜಾದ ನಿರಂತರ ಹಾವಳಿ ಹಾಗೂ ಯುವಕನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಬಜರಂಗದಳದವರು ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮಸ್ಥರು:
ಈ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ ನಿರಂತರವಾಗಿ ನಮ್ಮ ಭಾಗದಲ್ಲಿ ಗಾಂಜಾದ ಹಾವಳಿ ಹೆಚ್ಚಾಗಿದೆ. ಇದರಿಂದ ಇಲ್ಲಿನ ಯುವಕರು ಹಾಳಾಗುತ್ತಿದ್ದಾರೆ. ಮನೆಗೆ ನುಗ್ಗಿ ಹಲ್ಲೆ ಮಾಡುವಂತಹ ಪ್ರಕರಣಗಳನ್ನು ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಇವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಎಂದು ಒತ್ತಾಯಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ದೀನ್ ದಯಾಳ್:
ನಿರಂತರವಾಗಿ ಈ ಭಾಗದಲ್ಲಿ ಗಾಂಜಾದ ಹಾವಳಿ ತೀವ್ರವಾಗಿದ್ದು ಇದರಿಂದ ಜನರಿಗೆ ಜೀವನ ಮಾಡುವುದು ಕಷ್ಟವಾಗುತ್ತಿದೆ. ಹೆಣ್ಣುಮಕ್ಕಳು ಇರುವಂತಹ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸುತ್ತಾರೆ ಎಂದರೆ ಅವರ ಧೈರ್ಯ ಎಷ್ಟಿರಬೇಕು. ಕೂಡಲೇ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಉಳಿದವರನ್ನು ಬಂದಿಸಿ ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಪೊಲೀಸರು:
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಜನರನ್ನು ಬಂಧಿಸಿದ್ದು ಉಳಿದವರನ್ನು ಕೂಡಲೇ ಬಂಧಿಸುತ್ತೇವೆ. ಹಾಗೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದರು.
ಈ ಸಭೆಯಲ್ಲಿ ಊರಿನ ಗ್ರಾಮಸ್ಥರು, ದೀನ್ ದಯಾಳ್, ಶಶಿಕುಮಾರ್, ಪ್ರಕಾಶ್, ಪ್ರದೀಪ್, ಕಾರ್ತಿಕ್, ರಾಜುಗೌಡ, ಶಿವು, ಮುಂತಾದವರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…