ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಐದು ತಿಂಗಳ ನಂತರ ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಯಾರಿಗೆ ಯಾವ ಜಿಲ್ಲೆ ವಿವರ ಈ ಕೆಳಕಂಡಂತಿದೆ:
ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಕೆ. ಎಸ್. ಈಶ್ವರಪ್ಪ – ಚಿಕ್ಕಮಗಳೂರು
ಬಿ. ಶ್ರೀರಾಮುಲು – ಬಳ್ಳಾರಿ
ವಿ. ಸೋಮಣ್ಣ – ಚಾಮರಾಜನಗರ
ಉಮೇಶ್ ವಿ. ಕತ್ತಿ – ವಿಜಯಪುರ
ಎಸ್. ಅಂಗಾರ – ಉಡುಪಿ
ಆರಗ ಜ್ಞಾನೇಂದ್ರ – ತುಮಕೂರು
ಡಾ. ಸಿ. ಎನ್. ಅಶ್ವತ್ಥ ನಾರಾಯಣ – ರಾಮನಗರ
ಸಿ. ಸಿ. ಪಾಟೀಲ್ – ಬಾಗಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಕೋಟಾ ಶ್ರೀನಿವಾಸ ಪೂಜಾರಿ – ಉತ್ತರ ಕನ್ನಡ
ಪ್ರಭು ಚವ್ಹಾಣ – ಯಾದಗಿರಿ
ಮುರುಗೇಶ್ ನಿರಾಣಿ – ಕಲಬುರಗಿ
ಶಿವರಾಮ್ ಹೆಬ್ಬಾರ್ – ಹಾವೇರಿ
ಎಸ್. ಟಿ. ಸೋಮಶೇಖರ್ – ಮೈಸೂರು
ಬಿ. ಸಿ. ಪಾಟೀಲ್ – ಚಿತ್ರದುರ್ಗ ಮತ್ತು ಗದಗ
ಬಿ. ಎ. ಬಸವರಾಜ – ದಾವಣಗೆರೆ
ಡಾ. ಕೆ. ಸುಧಾಕರ್ – ಬೆಂಗಳೂರು ಗ್ರಾಮಾಂತರ
ಕೆ. ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
ಶಶಿಕಲಾ ಜೊಲ್ಲೆ – ವಿಜಯನಗರ
ಎಂಟಿಬಿ ನಾಗರಾಜ್ – ಚಿಕ್ಕಬಳ್ಳಾಪುರ
ಕೆ. ಸಿ. ನಾರಾಯಣ ಗೌಡ – ಶಿವಮೊಗ್ಗ
ಬಿ. ಸಿ. ನಾಗೇಶ್ – ಕೊಡಗು
ವಿ. ಸುನೀಲ್ ಕುಮಾರ್ – ದಕ್ಷಿಣ ಕನ್ನಡ
ಹಾಲಪ್ಪ ಆಚಾರ್ – ಧಾರವಾಡ
ಶಂಕರ್ ಬಿ. ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
ಮುನಿರತ್ನ – ಕೋಲಾರ.
ಮುಖ್ಯಮಂತ್ರಿಯ ಪರಮಾಪ್ತ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಹಾಗೂ ಸಚಿವ ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಗಳನ್ನು ನೀಡಿಲ್ಲ.
ಮಾಧುಸ್ವಾಮಿ ಅವರಿಗಿಂತ ಮುಖ್ಯಮಂತ್ರಿಯ ಪರಮಾಪ್ತ ಅಶೋಕ್ ಅವರಿಗೆ ಬೆಂಗಳೂರು ನಗರದ ಉಸ್ತುವಾರಿ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಈಗ ಹುಸಿಯಾಗಿದೆ.
ಹಲವು ರಾಜಕೀಯ ಲೆಕ್ಕಾಚಾರ ಗಳನ್ನೊಳಗೊಂಡ ಈ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಹಲವು ಸಚಿವರುಗಳಿಗೆ ನುಂಗಲಾರದ ತುಪ್ಪವಾಗಿದ್ದು ಅಸಮಾಧಾನದ ಬೇಗುದಿ ಹೊಗೆಯಾಡುತ್ತಿದೆ. ತಮ್ಮ ಆಪ್ತರಲ್ಲಿ ಕೆಲ ಸಚಿವರು ಗಳು ಅಸಮಧಾನವನ್ನು ಹೊರಹಾಕುತ್ತಿದ್ದು ಅದರಲ್ಲೂ ಹಿರಿಯ ಸಚಿವರು ತಮ್ಮ ಮೂಲ ಕ್ಷೇತ್ರವನ್ನೇ ಬಿಟ್ಟು ಬೇರೆ ಕಡೆ ಕೊಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಉಸ್ತುವಾರಿ ಸಚಿವರುಗಳ ಬದಲಾವಣೆಯ ಬೆನ್ನಲ್ಲೇ ಸಂಪುಟ ವಿಸ್ತರಣೆ ಸಾಧ್ಯತೆ:
ಜಿಲ್ಲಾ ಉಸ್ತುವಾರಿಗಳ ನೇಮಕ ಆದೇಶ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು .ಹಲವು ಹಿರಿಯ ಸಚಿವರುಗಳಿಗೆ ಕೋಕ್ ನೀಡಿ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಶಾಸಕ ಯತ್ನಾಳ್ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ:
ಬಸನಗೌಡ ಯತ್ನಾಳ್, ಹೊನ್ನಾಳಿ ಶಾಸಕ ರೇಣುಕಾಚಾರ್ಯ ನೂತನ ಸಂಪುಟದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದು. ಬದ್ಧ ವೈರಿಗಳಾಗಿದ್ದ ಇವರು ಇತ್ತೀಚೆಗೆ ಪರಸ್ಪರ ಆಪ್ತ ಸಮಾಲೋಚನೆಯಲ್ಲಿ ತೊಡಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305