
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಕಳ್ಳರನ್ನು ಹಿಡಿದು ಆರೋಪಿಗಳಿಂದ ಕಳುವು ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರಗಳು ಹಾಗೂ ಕಳವು ಮಾಡಿದ ವಸ್ತುಗಳ ಮೌಲ್ಯ:
ದಿನಾಂಕ 14 /1/ 2021 ರಂದು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಗುನ್ನೆ ನಂಬರ್ 191/2021 ಮತ್ತು 192/2021 ಕಲಂ 454,457,380 ಐಪಿಸಿ ಪ್ರಕರಣಗಳಲ್ಲಿ ಹಾಗೂ ನಿಪ್ಪಾಣಿ, ಸಂಕೇಶ್ವರ,ಖಾನಾಪುರ, ರಾಣೆಬೆನ್ನೂರು, ಹಾವೇರಿ,ಹರಿಹರ ನಗರಗಳಲ್ಲಿ ಒಟ್ಟು 10 ಮನೆಗಳ್ಳತನ ಮಾಡಿದ ಮೂರು ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದು. ಆರೋಪಿಗಳಿಂದ ಕಳವು ಪ್ರಕರಣಗಳಿಗೆ ಸಂಬಂಧಪಟ್ಟಂತೆ 16,84,000/ರೂಂ, ಮೌಲ್ಯದ 421 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ 100000 ರೂ ನಗದು ಹಣವನ್ನು ಮತ್ತು ಫಾಸಿಲ್ ಕಂಪನಿಯ ವಾಚ್ 7000 ರೂ,ಗಳು ಹಾಗೂ 2.85.000/ರೂ ಮೌಲ್ಯದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಒಟ್ಟು 22,92,000 ರೂ ಮೌಲ್ಯದ ಸ್ವತ್ತನ್ನು ಆರೋಪಿತ ರಿಂದ ವಶಪಡಿಸಿಕೊಂಡಿದ್ದು.
ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಸಕ್ರಿಯ ಪೊಲೀಸ್ ತಂಡ:
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಸರಗಿ,ಕೆಎಸ್ ಪಿಎಸ್ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿ ವಾಲ್,ಐಪಿಎಸ್ ಪೊಲೀಸ್ ಉಪಾಧೀಕ್ಷಕರು ಬಸವರಾಜ್ ಬಿಎಸ್,ರುದ್ರೇಶ್ ಅವರ ಮಾರ್ಗದರ್ಶನದಲ್ಲಿ ಸತೀಶ್ ಕುಮಾರ್ ಯು ಸಿಪಿಐ ಹರಿಹರ ವೃತ್ತ ಇವರ ನೇತೃತ್ವದಲ್ಲಿ,ಸುನಿಲ್ ಬಿ ತೇಲಿ ಪಿಎಸ್ಐ ಕಾಸು ಮತ್ತು ಸಂಚಾರ ,ಶ್ರೀಮತಿ ಲತಾ ವಿ ತಾಳೇಕರ್ ತನಿಖೆ, ಮಂಜುನಾಥ್ ಪಿಎಸ್ಐ ಕಲ್ಲೆದೇವರು,ಯಾಸಿನ್ ಉಲ್ಲಾ ಎ ಎಸ್ ಐ,ನಾಗರಾಜ್ ಸುಣಗಾರ್,ಹನುಮಂತ ಗೋಪನಾಳ್,ಶಿವರಾಜ್ ಎಂಎಸ್,ಮಂಜುನಾಥ್ ಖ್ಯಾತ ಮನವರ್,ಸಿದ್ದರಾಜು ಎಸ್ಪಿ, ಸಿದ್ದೇಶ್ ಹೆಚ್, ಸತೀಶ್ ಟಿವಿ,ರಾಘವೇಂದ್ರ,ಉಮೇಶ್ ಬಿಸ್ನಾಳ್,ಶಾಂತರಾಜ್,ಅಕ್ಬರ್, ನಾಗರಾಜ್ ಕುಂಬಾರ್,ವೀರೇಶ್, ಮಾರುತಿ, ಅವರುಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು.
ಸದರಿ ತಂಡಕ್ಕೆ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧೀಕ್ಷಕರಾದ ಸಿ,ಬಿ ರಿಷ್ವಂತ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305