Thursday, May 1, 2025
Google search engine
Homeಶಿವಮೊಗ್ಗಆರೋಗ್ಯಫೆಬ್ರವರಿ ೭ ಕ್ಕೆ ರಥಸಪ್ತಮಿ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ, ರಥಸಪ್ತಮಿಯ ಮಹತ್ವ ,...

ಫೆಬ್ರವರಿ ೭ ಕ್ಕೆ ರಥಸಪ್ತಮಿ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ, ರಥಸಪ್ತಮಿಯ ಮಹತ್ವ , ಸೂರ್ಯನಮಸ್ಕಾರದ ಲಾಭಗಳು, ಸಂಪೂರ್ಣ ವಿವರ..!

ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಇಂದಿಗೆ ಚಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.

ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ. ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.

ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.

ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು : ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.

ಸೂರ್ಯೋಪಾಸನೆಯ ಮಹತ್ವ

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.

೧. ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ.

೨. ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ. ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ.

೩. ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ ‘ತ್ರಾಟಕ’ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.

೪. ಸೂರ್ಯನಮಸ್ಕಾರ ಮಾಡುವುದು: ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಹತ್ವದ ವ್ಯಾಯಾಮವಾಗಿದೆ. ಇದರಲ್ಲಿ ಸ್ಥೂಲ ಶರೀರದ ಉಪಯೋಗ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಹೀಗೆ ೨೦ ವರ್ಷ ನಿತ್ಯವೂ ಸೂರ್ಯನಮಸ್ಕಾರ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುತ್ತಾನೆ.

ಸೂರ್ಯ ನಮಸ್ಕಾರಗಳಿಂದಾಗುವ ಲಾಭ ಮತ್ತು ನಾಮಜಪ ಸಹಿತ ಮಾಡಿದ ಸೂರ್ಯ ನಮಸ್ಕಾರಗಳಿಂದ ಆಗುವ ಹೆಚ್ಚುವರಿ ಪರಿಣಾಮ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯುನಿವರ್ಸಲ್ ಔರಾ ಸ್ಕ್ಯಾನರ್’ (ಯು.ಎ.ಎಸ್) ಈ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಮಾಘ ಮಾಸದಲ್ಲಿ ಸೂರ್ಯೋದಯ ವ್ಯಾಪಿನಿ, ಶುಕ್ಲಸಪ್ತಮಿಯಂದು ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ಸೂರ್ಯನಿಂದ ಆರೋಗ್ಯ ಪ್ರಾಪ್ತಿಯಾಗುವುದರಿಂದ ಈ ದಿನಕ್ಕೆ ಆರೋಗ್ಯ ಸಪ್ತಮಿ ಎಂದೂ ಹೇಳುತ್ತಾರೆ. ಈ ದಿನದಂದು ರಥದಲ್ಲಿ ಆರೂಢನಾಗಿರುವ ಸೂರ್ಯನನ್ನು ಪೂಜಿಸಿ ಸೂರ್ಯ ನಮಸ್ಕಾರಗಳನ್ನು ಹಾಕುತ್ತಾರೆ. ಈ ದಿನಕ್ಕೆ ಜಾಗತಿಕ ಸೂರ್ಯನಮಸ್ಕಾರ ದಿನವೆಂದೂ ಹೇಳುತ್ತಾರೆ. ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?, ಎನ್ನುವುದನ್ನು ವೈಜ್ಞಾನಿಕ ಪದ್ದತಿಯಿಂದ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆಗಳ ವಿವೇಚನೆ ಮತ್ತು ನಿಷ್ಕರ್ಷವನ್ನು ಮುಂದೆ ನೀಡಲಾಗಿದೆ.

೧. ಸೂರ್ಯನಮಸ್ಕಾರದ ಮಹತ್ವ..

ಆದಿತ್ಯಸ್ಯ ನಮಸ್ಕಾರಂ ಯೆ ಕುರ್ವನ್ತಂತಿ ದಿನೇ ದಿನೇ |

ಜನ್ಮಾಂತರ ಸಹಸ್ತ್ರೇಷು ದಾರಿದ್ರ್ಯಂ ನೋಪಜಾಯತೆ ||

ಅರ್ಥ : ಯಾರು ಪ್ರತಿದಿನ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ, ಅವರಿಗೆ ಸಾವಿರಾರು ಜನ್ಮಗಳಲ್ಲಿ ದಾರಿದ್ರ್ಯ ಬರುವುದಿಲ್ಲ

೨. ಸೂರ್ಯನಮಸ್ಕಾರಗಳನ್ನು ಮಾಡುವುದರಿಂದಾಗುವ ಲಾಭಗಳು

ಅ. ಎಲ್ಲ ಮಹತ್ವದ ಅವಯವಗಳಿಗೆ ರಕ್ತಪೂರೈಕೆ ಹೆಚ್ಚಾಗುತ್ತದೆ.
ಆ. ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.
ಇ. ಭುಜ ಮತ್ತು ಸೊಂಟದ ಸ್ನಾಯುಗಳು ಸುದೃಢವಾಗುತ್ತವೆ.
ಈ. ಬೆನ್ನೆಲುಬುಗಳು (ಕಶೇರುಕಾಸ್ಥಿಗಳು) ಮತ್ತು ಸೊಂಟ ಸಡಿಲಾಗುತ್ತದೆ.
ಉ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿ ತೂಕ ಕಡಿಮೆಯಾಗಲು ಸಹಾಯಕವಾಗುತ್ತದೆ.
ಊ. ಪಚನಕ್ರಿಯೆ ಸುಧಾರಿಸುತ್ತದೆ.
ಎ. ಮನಸ್ಸಿನ ಏಕಾಗ್ರತೆ ಹೆಚ್ಚಾಗುತ್ತದೆ.

೩. ಸೂರ್ಯನ ಹೆಸರನ್ನು ಹೇಳದೇ ಮತ್ತು ಸೂರ್ಯನ ಹೆಸರನ್ನು ಹೇಳಿ ಮಾಡಿದ ಸೂರ್ಯನಮಸ್ಕಾರಗಳಿಂದ ವ್ಯಕ್ತಿಯ ಸೂಕ್ಷ್ಮ ಊರ್ಜೆಯ ಮೇಲಾಗುವ ಪರಿಣಾಮವನ್ನು ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್) ಉಪಕರಣದ ಮಾಧ್ಯಮದಿಂದ ಮಾಡಿದ ಅಧ್ಯಯನ

ಈ ಅಧ್ಯಯನವನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀ ಹೀಗೆ ಇಬ್ಬರು ಸಾಧಕರ ಮೇಲೆ ಮಾಡಲಾಯಿತು. ಇದಕ್ಕಾಗಿ ಮುಂದಿನಂತೆ ಪರೀಕ್ಷಣೆಯನ್ನು ಮಾಡಲಾಯಿತು.

ಅ. ಸೂರ್ಯನಮಸ್ಕಾರ ಹಾಕುವ ಮೊದಲು ಯೂ.ಎ.ಎಸ್. ಉಪಕರಣದ ಮೂಲಕ ಇಬ್ಬರೂ ಸಾಧಕರ ನಿರೀಕ್ಷಣೆಯನ್ನು ಮಾಡಲಾಯಿತು. ಇದು ಅವರ ಮೂಲ ಸ್ಥಿತಿಯ ನೋಂದಣಿಯಾಗಿದೆ.

ಆ. ತದನಂತರ ಪ್ರತಿಯೊಬ್ಬರೂ ೧೨ ಸೂರ್ಯನಮಸ್ಕಾರಗಳನ್ನು ಸೂರ್ಯನ ಹೆಸರನ್ನು ಹೇಳದೇ ಮಾಡಿದ ಬಳಿಕ ಪುನಃ ಯು.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆ ಮಾಡಲಾಯಿತು. ಈ ನಿರೀಕ್ಷಣೆಯಿಂದ ಅವರ ಮೇಲೆ ಸೂರ್ಯನ ಹೆಸರನ್ನು ಹೇಳದೇ ಸೂರ್ಯನಮಸ್ಕಾರಗಳನ್ನು ಮಾಡಿದಾಗ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗಿರುವ ಪರಿಣಾಮ ಗಮನಕ್ಕೆ ಬಂದಿತು.

ಇ. ಮರುದಿನ ಪುನಃ ಇಬ್ಬರೂ ಸಾಧಕರ ಮೂಲಸ್ಥಿತಿಯ ನೋಂದಣಿಯನ್ನು ಪಡೆದುಕೊಂಡ ಬಳಿಕ, ಅವರು ೧೨ ಸೂರ್ಯನ ಹೆಸರನ್ನು ಹೇಳುತ್ತ ಸೂರ್ಯನಮಸ್ಕಾರಗಳನ್ನು ಮಾಡಿದರು. ತದನಂತರ ಯು.ಎ.ಎಸ್. ಉಪಕರಣದ ಮೂಲಕ ಅವರ ನಿರೀಕ್ಷಣೆಯನ್ನು ಮಾಡಲಾಯಿತು. ಈ ನಿರೀಕ್ಷಣೆಯಿಂದ ಅವರ ಮೇಲೆ ಸೂರ್ಯನಮಸ್ಕಾರ ಸೂರ್ಯನ ಹೆಸರನ್ನು ಹೇಳುತ್ತಾ ಹಾಕಿದಾಗ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗಿರುವ ಪರಿಣಾಮ ಗಮನಕ್ಕೆ ಬಂದಿತು.

೪. ಪರೀಕ್ಷಣೆಯ ನಿಷ್ಕರ್ಷ – ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿ ತುಂಬಾ ಲಾಭವಾಗುತ್ತದೆ ಮತ್ತು ಅದನ್ನು ನಾಮಜಪದೊಂದಿಗೆ ಮಾಡಿದರೆ ಇನ್ನೂ ಹೆಚ್ಚು ಲಾಭವಾಗುತ್ತದೆ : ಈ ಪರೀಕ್ಷಣೆಯಿಂದ ಸೂರ್ಯನಮಸ್ಕಾರಗಳನ್ನು ಮಾಡುವುದರಿಂದ ಸೂಕ್ಷ್ಮ ಊರ್ಜೆಯ ಸ್ತರದಲ್ಲಿ ಆಗುವ ಲಾಭ ಗಮನಕ್ಕೆ ಬಂದಿತು. ಈ ಲಾಭ ಸೂರ್ಯ ನಮಸ್ಕಾರಗಳನ್ನು ನಾಮಜಪದೊಂದಿಗೆ ಮಾಡಿದರೆ ಇನ್ನೂ ಹೆಚ್ಚಾಗುತ್ತದೆ ಎಂಬುದೂ ಗಮನಕ್ಕೆ ಬಂದಿತು. ಈ ಲಾಭವನ್ನು ನೋಡಿದರೆ ೫ ಸಾವಿರ ವರ್ಷಗಳ ಹಿಂದೆ ನಮ್ಮ ಋಷಿ-ಮುನಿಗಳು ಯಾವುದೇ ಬಾಹ್ಯ, ಸ್ಥೂಲ ಉಪಕರಣಗಳ ಆಧಾರವಿಲ್ಲದೇ ಅದ್ವಿತೀಯ ಯೋಗಾಸನಗಳನ್ನು ನಿರ್ಮಿಸಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಇವುಗಳಿಗೆ ಚೈತನ್ಯಮಯ ನಾಮಜಪವನ್ನು ಜೋಡಿಸಿದಾಗ ಲಾಭದಲ್ಲಿ ಆಗುವ ಹೆಚ್ಚಳವನ್ನು ನೋಡಿದರೆ, ನಮ್ಮ ಋಷಿ-ಮುನಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಶಬ್ದಗಳೇ ಸಾಲುವುದಿಲ್ಲ ಮತ್ತು ಅವರ ಚರಣಗಳಿಗೆ ಶಿರಬಾಗಿ ನಮಸ್ಕರಿಸಬೇಕೆನಿಸುತ್ತದೆ.

ಇಂದಿನ ಬಿಡುವಿಲ್ಲದ ಜೀವನದಲ್ಲಿ ಸೂರ್ಯನಮಸ್ಕಾರಗಳನ್ನು ಮಾಡುವುದು ಒಂದು ಉತ್ತಮ ಪರ್ಯಾಯವಾಗಿದೆ; ಏಕೆಂದರೆ ಒಂದು ಸೂರ್ಯ ನಮಸ್ಕಾರದಲ್ಲಿ ೧೨ ಯೋಗಾಸನಗಳು ಬರುತ್ತದೆ. ಈ ಪರೀಕ್ಷಣೆಯಿಂದ ನಾಮಜಪದೊಂದಿಗೆ ಯೋಗಾಸನಗಳನ್ನು ಹಾಕುವುದರಿಂದ ಆಗುವ ಲಾಭಗಳನ್ನು ಗಮನಿಸಿ ಸಾಧ್ಯವಾದಷ್ಟು ಅಧಿಕಾಧಿಕ ವ್ಯಕ್ತಿಗಳು ನಾಮಜಪದೊಂದಿಗೆ ತಮ್ಮ ದಿನಚರ್ಯೆಯಲ್ಲಿ ಅಳವಡಿಸಿಕೊಂಡರೆ ಉತ್ತಮ.

– ಆಧುನಿಕ ವೈದ್ಯೆ (ಸೌ.) ನಂದಿನಿ ಸಾಮಂತ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಆಧಾರ : Sanatan.org/kannada

ಸಂಗ್ರಹ –
ಶ್ರೀ. ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 93425 99299
..

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:944955305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...