Wednesday, April 30, 2025
Google search engine
Homeರಾಜ್ಯಮಹಾಶಿವರಾತ್ರಿಯ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ, ತಪ್ಪದೇ ಓದಿ…!

ಮಹಾಶಿವರಾತ್ರಿಯ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ, ತಪ್ಪದೇ ಓದಿ…!

ಶಿವನ ವಿಶ್ರಾಂತಿಯ ಕಾಲ ಎಂದರೇನು ?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ ೪ ಪ್ರಹರಗಳು ಮತ್ತು ರಾತ್ರಿಯಲ್ಲಿ ೪ ಪ್ರಹರಗಳು ಹೀಗೆ ೨೪ ಗಂಟೆಗಳಲ್ಲಿ ಒಟ್ಟು ೮ ಪ್ರಹರಗಳಿವೆ. ಒಂದು ಪ್ರಹರವು ೩ ಗಂಟೆಯದ್ದಾಗಿದೆ.

ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ :

ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ ೩೦ ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ. ೧೦೦ ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ.

ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಅನಿಷ್ಟ ಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ. ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ.

ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವತತ್ತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಅನಿಷ್ಠ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ. ಹಾಗಾಗಿ ನಾವೆಲ್ಲರೂ ಈ ಕಾಲದಲ್ಲಿ ಶಿವನ ತತ್ತ್ವದ ಲಾಭವನ್ನು ಪಡೆಯಲು ಹೆಚ್ಚು ಹೆಚ್ಚು ‘ಓಂ ನಮಃ ಶಿವಾಯ ನಾಮಜಪವನ್ನು ಮಾಡೋಣ.

ಈ ನಾಮಜಪವು ಸನಾತನ-ನಿರ್ಮಿತ ಚೈತನ್ಯವಾಣಿ ಆಪ್ ನಲ್ಲಿ ಉಪಲಬ್ಧವಿದೆ, ಇದರ ಲಿಂಕ್ ಕೆಳಗಡೆ ನೀಡಲಾಗಿದೆ. ಓದುಗರು ಈ ಆಪ್ ಡೌನ್ಲೋಡ್ ಮಾಡಿ ಅದರ ಲಾಭವನ್ನು ಪಡೆಯಬಹುದು.

http://Sanatan.org/Chaitanyavani….

ಆಧಾರ : ಸನಾತನ-ನಿರ್ಮಿತ ಗ್ರಂಥ ‘ಶಿವ’
ವಿನೋದ್ ಕಾಮತ್,
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 9342599299
….

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...