ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 4ರಂದು ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಅನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿದ್ದು.
ಈ ತಾರತಮ್ಯವನ್ನು ನೀತಿಯನ್ನು ಖಂಡಿಸಿ ಸೋಮವಾರ ಮಾರ್ಚ್ 7ರಂದು ನಾಗರಿಕ ಹೋರಾಟ ಸಮಿತಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಮುಖ್ಯ ಮಂತ್ರಿಗಳು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲಿ ಹರಿಹರ ತಾಲೂಕನ್ನು ನಿರ್ಲಕ್ಷ ಮಾಡಲಾಗಿದೆ.
ಮಾರ್ಚ್ 3ರಂದು ಹರಿಹರದಿಂದ ನಿಯೋಗ ತೆರಳಿ ಮನವಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು:
ಬಜೆಟ್ ಹಿಂದಿನ ದಿವಸ ಮಾರ್ಚ್ 3ರಂದು ಹರಿಹರಕ್ಕೆ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕು. ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ಕೈಗಾರಿಕೆಗಳು, ಖ್ಯಾತ ಹರಿಹರೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸುವುದು. ಭೈರನಪಾದ ನೀರಾವರಿಗೆ ಯೋಜನೆ, ಆಗಸನ ಕಟ್ಟೆ ಕೆರೆ ಅಭಿವೃದ್ಧಿ, ಅಗತ್ಯವಾದ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಇದ್ಯಾವುದನ್ನು ಮುಖ್ಯಮಂತ್ರಿಗಳು ಪರಿಗಣನೆ ಮಾಡದೆ ತಾಲೂಕನ್ನು ನಿರ್ಲಕ್ಷ ಮಾಡಿರುವುದರಿಂದ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಸಾರ್ವಜನಿಕರು ರಾಜಕೀಯ ಪಕ್ಷದ ಮುಖಂಡರುಗಳು, ಜನಪರ ಪ್ರಗತಿಪರ ಹೋರಾಟಗಾರರು, ಈ ಹೋರಾಟದಲ್ಲಿ ಭಾಗವಹಿಸಬೇಕಾಗಿ ನಾಗರಿಕ ಸಮಿತಿಯಿಂದ ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಸಮಯ ಮಾರ್ಚ್ ಏಳ ರಂದು ಬೆಳಗ್ಗೆ ಹತ್ತು ಮೂವತ್ತಕ್ಕೆ .
ಮೆರವಣಿಗೆ: ನಗರದ ಫಕೀರ್ ಸ್ವಾಮಿ ಮಠ ರಿಂದ ಕಿತ್ತೂರಾಣಿ ಚನ್ನಮ್ಮ ವೃತ್ತ-ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ , ಸಾಂಕೇತಿಕ ಪ್ರತಿಭಟನೆ ನಡೆಸಿ ತಾಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಹರಿಹರ ತಾಲೂಕಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಲಾಗುವುದು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…