
ಶಿಕಾರಿಪುರ :- ದಿನಾಂಕ 13/03/2022 ರಂದು ಶಿಕಾರಿಪುರ ತಾಲ್ಲೂಕು ತೊಗರ್ಸಿ ದೇವರ ರಥೋತ್ಸವ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದ ಶ್ರೀ ಜಯದೇವ ಬಿನ್ ಬಸವರಾಜ್ ಕೆರೋಡಿ ಸರತಿ ಸಾಲಿನಲ್ಲಿ ಬಿಡುವ ವಿಷಯವಾಗಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರ ಸಮುಖದಲ್ಲಿ ವಾಗ್ವಾದಕ್ಕಿಳಿದು, ತಳ್ಳಾಟ ನೂಕಾಟ ನೆಡೆಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾರೆ.ಸದರಿಯವರ ಅನುಚಿತ ವರ್ತನೆ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಿ ಅವಕಾಶವಿದ್ದಾಗಲೂ ಸಹ ಸಿಪಿಐ ರವರು ಬಂದೋಬಸ್ತ್ ಕರ್ತವ್ಯದಲ್ಲಿದ್ದ ಇತರ ಸಿಬ್ಬಂದಿಗಳ ಸಹಾಯದಿಂದ ಅವರನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಅವರ ಮೇಲೆ ಹಲ್ಲೆ ಮಾಡುವ ಮೂಲಕ ಶಿಸ್ತಿನ ಇಲಾಖೆಯ ಸಿಪಿಐ ಹುದ್ದೆಯಂತಹ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗೆ ಸಲ್ಲದ ಅತೀವ ಬೇಜವಾಬ್ದಾರಿತನ ಮತ್ತು ಕರ್ತವ್ಯದಲ್ಲಿ ಘೋರ ನಿರ್ಲಕ್ಷತನ ತೋರಿಸಿದಲ್ಲದೇ, ಇಲಾಖೆಯ ಘನತೆಗೆ ಮುಜುಗರವುಂಟಾಗುವಂತೆ ದುರ್ವತನೆ ತೋರಿರುವುದಾಗಿ ತಿಳಿಸಿ ಸದರಿಯವರನ್ನು ಅಮಾನತ್ತಿನಲ್ಲಿರಿಸಿ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸುವಂತೆ ಕೋರಿರುತ್ತಾರೆ.
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಉಲ್ಲೇಖ (1) ರ ವರದಿಯನ್ವಯ ಶ್ರೀ ಗುರುರಾಜ್ ಏನ್ ಮೈಲಾರ್ ಸಿಪಿಐ ಶಿಕಾರಿಪುರ ನಗರ ವೃತ್ತ ಶಿವಮೊಗ್ಗ ಜಿಲ್ಲೆಯವರನ್ನು ಉಲ್ಲೇಖ (2)ರ ಕಚೇರಿಯ ಆದೇಶದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿರಿಸಿ ಅದೇಶಿಸಲಾಗಿರುತ್ತದೆ. ಸದರಿ ಸಿಪಿಐ ರವರನ್ನು ಅಮಾನತ್ತುಗೊಳಿಸಿದ ಆದೇಶವನ್ನು ಸ್ವೀಕರಿಸಲು ಹಾಗೂ ಲೀನ್ ನ್ನು ಬೇರೆಡೆಗೆ ವರ್ಗಾಯಿಸಲು ಕೋರಿ ಉಲ್ಲೇಖ (1) ರ ವರದಿ ಮತ್ತು ಆದೇಶದ ಪ್ರತಿಯನ್ನು ಲಗತ್ತಿಸಿದೆ
ಅಮಾನತ್ತು ಆದೇಶ ಮಾನ್ಯ ಡಾ. ಕೆ. ತ್ಯಾಗರಾಜನ್ (ಐಪಿಸ್ ), ಪ್ರಭಾರ ಪೊಲೀಸ್ ಮಹಾ ನಿರೀಕ್ಷಕರು, ಪೂರ್ವ ವಲಯ,ದಾವಣಗೆರೆ
ವರದಿ: ಓಂಕಾರ ಎಸ್. ವಿ. ತಾಳಗುಪ್ಪ..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…