
ನಿಲ್ಲದ ಕರ್ತವ್ಯ ನಿರತ ಲೈನ್ ಮ್ಯಾನ್ ಗಳ ಸರಣಿ ವಿದ್ಯುತ್ ಅಪಘಾತದಿಂದ ಸಾವು – ನೋವುಗಳು – ಕೂಡಲೇ ಸಾಗರ ತಾಲೂಕಿನಲ್ಲಿ ಸರಣಿ ವಿದ್ಯುತ್ ಅವಘಡದಿಂದ ಲೈನ್ ಮ್ಯಾನ್ ಸಾವು ನೋವು ಗಳಿಗೆ ಕಾರಣರಾಗುತ್ತಿರುವ ಕರ್ತವ್ಯ ಲೋಪವೆಸಗುತ್ತಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಇಂಧನ ಸಚಿವರಲ್ಲಿ ಮನವಿಯತ್ತ ಮೆಸ್ಕಾಂ ಲೈನ್ ಮ್ಯಾನ್ ಗಳು……..!!!!!!!
ಸಾಗರ:- ಸಾಗರ ತಾಲೂಕಿನಲ್ಲಿ ನಿರಂತರವಾಗಿ ಮೆಸ್ಕಾಂ ಲೈನ್ ಮ್ಯಾನ್ ಗಳ ವಿದ್ಯುತ್ ಅಪಘಾತದಿಂದ ಸಾವು ನೋವು ಸಂಭವಿಸುತ್ತಿದ್ದರೂ ಮೆಸ್ಕಾಂ ಅಧಿಕಾರಿಗಳು ಮಾತ್ರ ಗುಪ್ ಚುಪ್ ಆಗಿರುವುದು ಅನೇಕ ಸಂದೇಹಗಳಿಗೆ ಅಹ್ವಾನ ನೀಡಿದಂತಾಗಿದೆ.. ಮೆಸ್ಕಾಂ ಲೈನ್ ಮ್ಯಾನ್ ಗಳ ಜೀವ – ಜೀವನ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದರೂ, ಮೆಸ್ಕಾಂ ಅಧಿಕಾರಿಗಳು ಲೈನ್ ಮ್ಯಾನ್ ಗಳಿಗೆ ಸೂಕ್ತ ಭದ್ರತೆ ನೀಡುವಲ್ಲಿ ವಿಫಲರಾಗಿದ್ದಾರೆ. ಇಂದು ಸಹ ಓರ್ವ ಮೆಸ್ಕಾಂ ಲೈನ್ ಮ್ಯಾನ್ ವಿದ್ಯುತ್ ಅವಘಡದಿಂದ ಮೃತ ಪಟ್ಟಿರುವ ಬಗ್ಗೆ ಮಾಹಿತಿಯು ಲಭ್ಯವಾಗಿದ್ದು, ಮೃತನ ಶರೀರ ಇನ್ನೂ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಶವಾಗರದಲ್ಲಿರುವ ಮಾಹಿತಿ ಲಭ್ಯವಾಗಿದ್ದೂ, ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿ….
ಮೆಸ್ಕಾಂ ಲೈನ್ ಮ್ಯಾನ್ ಸರಣಿ ವಿದ್ಯುತ್ ಅವಘಡದಿಂದ ಸಾವು ನೋವು ಗಳ ಹಿಂದೇ ಮೆಸ್ಕಾಂ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಈ ಬಗ್ಗೆ ಇಂಧನ ಸಚಿವರು ಸೂಕ್ತ ತನಿಖೆ ನೆಡೆಸಿ ಸಾಗರ ತಾಲೂಕಿನಲ್ಲಿ ಸರಣಿ ವಿದ್ಯುತ್ ಅವಘಡದಿಂದ ಸಾವು ನೋವುಗಳಿಂದ ನೊಂದ ಕುಟುಂಬಕ್ಕೆ ನ್ಯಾಯ ನೀಡುವಂತೆ ಹಾಗೂ ಕರ್ತವ್ಯ ಲೋಪ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಹೆಸರು ಹೇಳಲು ಇಚ್ಚಿಸದ ಮೆಸ್ಕಾಂ ಕರ್ತವ್ಯ ನಿರತ ಲೈನ್ ಮ್ಯಾನ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ
ವರದಿ:ಓಂಕಾರ ಎಸ್. ವಿ. ತಾಳಗುಪ್ಪ…..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…