
ಸಾಗರ:- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ತಹಸೀಲ್ದಾರ್ ರವರಿಗೆ ಕರ್ತವ್ಯ ನಿಮಿತ್ತ ತಿರುಗಾಡಲು ಲಕ್ಷಾಂತರ ಮೌಲ್ಯದ ಮಹಿಂದ್ರಾ ಕಂಪನಿಯ ಬೊಲೆರೋ ವಾಹನ ನೀಡಿದ್ದೂ, ಈ ಸುಸಜ್ಜಿತ ವಾಹನದ ಸ್ಥಿತಿ – ದುಸ್ಥಿತಿ ನೋಡಿದರೇ ಎಂತವರೀಗೂ ಮರುಕ ಬರುವುದು ಸಹಜ, ತಾಲ್ಲೂಕು ಮಟ್ಟದ ಅಧಿಕಾರಿಗಳೇ ಈ ರೀತಿಯ ಸಾರ್ವಜನಿಕ ತೆರಿಗೆ ಹಣ ದುರುಪಯೋಗಕ್ಕೆ ತೊಡಗಿದರೇ ಮುಂದೇನು ಗತಿ.
ಇದು ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಸನ್ಮಾನ್ಯ ಅಶೋಕ್ ರವರ ಕಂದಾಯ ಇಲಾಖೆಯ ಸಾರ್ವಜನಿಕ ತೆರಿಗೆ ಹಣ ದುರುಪಯೋಗದ ಕಥೆ – ವ್ಯಥೆ. ಕೂಡಲೇ ಈ ಹಣ ದುರುಪಯೋಗದಲ್ಲಿ ಶಾಮೀಲಾದ ಕರ್ತವ್ಯ ಲೋಪ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಸಾಮಾಜಿಕ ಹೋರಾಟಗಾರನಾದ ನಾನು ಗೌರವಾನ್ವಿತ ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ…
-ಓಂಕಾರ ಎಸ್. ವಿ. ತಾಳಗುಪ್ಪ..
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…