
ಸಾಗರ :- ಸಾಗರದ ನಗರಸಭೆಯಲ್ಲಿ ಬುಧವಾರ 2022-23 ನೇ ಸಾಲಿನ ಆಯವ್ಯಯ ಸಾಮಾನ್ಯ ಸಭೆಯನ್ನು ನಗರಸಭೆ ಅದ್ಯಕ್ಷೆ ಮಧುರಾ ಶಿವಾನಂದ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಸಭೆಗೆ ಬಂದ ವಿರೋಧ ಪಕ್ಷದ ಕಾಂಗ್ರೇಸ್ ಸದಸ್ಯರು ಸಭೆ ಆರಂಭವಾಗುತ್ತಿದ್ದಂತೆ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಪ್ರತಿಭಟಿಸಿದರು.
ಇತ್ತೀಚೆಗೆ ಸಾಗರದ ಪ್ರತಿಷ್ಟಿತ ಎಲ್ ಬಿ ಕಾಲೇಜಿನ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಎದುರಲ್ಲೇ ಹಲ್ಲೆ ನಡೆದಿತ್ತು.
ಈ ಘಟನೆಯನ್ನು ಈ ರೀತಿಯಾಗಿ ಖಂಡಿಸಲಾಯಿತು.
ಆಡಳಿತ ಪಕ್ಷದವರಿಂದ ನಮಗೆ ರಕ್ಷಣೆ ಇಲ್ಲಾ ಎಂದು ವಿಪಕ್ಷ ಕಾಂಗ್ರೇಸ್ ಸದಸ್ಯರು ಆರೋಪಿಸಿದರು.
ಇದರಿಂದಾಗಿ ಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕೊನೆಗೆ ಸದಸ್ಯರು ತಲೆಗೆ ಹಾಕಿದ ಹೆಲ್ಮೆಟ್ ತೆಗೆದ ನಂತರವೇ ಸಭೆ ಮುಂದುವರಿಯಿತು.
ವರದಿ: ಓಂಕಾರ ಎಸ್. ವಿ. ತಾಳಗುಪ್ಪ
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305..