
ನಿರಂತರವಾಗಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುವ ಉದ್ದೇಶದಿಂದ ಅಶ್ಲೀಲವಾಗಿ ,ಅಸಭ್ಯವಾಗಿ , ಪೋಸ್ಟರ್ ಗಳನ್ನು ಹಾಕುವುದು. ಅಸಭ್ಯವಾಗಿ ಚಿತ್ರಗಳನ್ನು ಬಿತ್ತರಿಸುವುದು ನಡೆದುಕೊಂಡುಬರುತ್ತಿದೆ.
ಇದೀಗ ಹೊಸದಾದ ವಿವಾದ ಒಂದು ಹುಟ್ಟು ಕೊಂಡಿದ್ದು”ಸಹಾರಾ ರೇ ಸ್ವಿಮ್” ಹೆಸರಿನ ಬಟ್ಟೆ ಬ್ರಾಂಡ್ ಹೊಸ ವಿವಾದ ಹುಟ್ಟುಹಾಕಿದೆ. ಹೊಸದಾಗಿ ಲಾಂಚ್ ಮಾಡಿರೋ ಈಜುಡುಗೆಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿದೆ. ಸಹಾರಾ ರೇ ಒಡೆತನದಲ್ಲಿರುವ ಬ್ರಾಂಡ್ ಇದಾಗಿದೆ.
‘ಔರಾ ಕಲೆಕ್ಷನ್ 2022′ ಹೆಸರಿನಲ್ಲಿ ಈ ಸ್ವಿಮ್ ಸೂಟ್‌ಗಳನ್ನು ಬಿಡುಗಡೆ ಮಾಡಲಾಗಿದ್ದು.
ಥಾಂಗ್ಸ್ ಮತ್ತು ಮೈಕ್ರೋ ಸ್ಟ್ರಿಂಗ್ ಟಾಪ್‌ಗಳನ್ನು ಒಳಗೊಂಡಿರುವ ಹೊಸ ಸಂಗ್ರಹ ಇದಾಗಿದೆ. ಇವುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಲಾಗಿದೆ. ಈ ವಿವಾದಾತ್ಮಕ ಸ್ವಿಮ್ ಸೂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು.
ಬಿಕಿನಿ ಹಾಗೂ ಟಾಪ್ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿರೋದು ಹಲವರನ್ನು ಕೆರಳಿಸಿದೆ.
ದೇವರ ಚಿತ್ರ ಮುದ್ರಿಸಲೇಬೇಕೆಂಬ ಉದ್ದೇಶ ಕಂಪನಿಗಿದ್ದರೆ, ಯಾಕೆ ಜೀಸಸ್ ಚಿತ್ರವನ್ನು ಮುದ್ರಿಸಿಲ್ಲ ಅಂತಾ ಟ್ವಿಟ್ಟರ್ ಬಳಕೆದಾರನೊಬ್ಬ ಪ್ರಶ್ನಿಸಿದ್ದಾನೆ.
ಹಿಂದುತ್ವ ಅನ್ನೋದು ಜೋಕ್ ಅಲ್ಲ, ಅಥವಾ ಕಂಪನಿಗಳಿಗೆ ಹಣ ಮಾಡಿಕೊಳ್ಳುವ ಮಾರ್ಗವೂ ಅಲ್ಲವೆಂದು ಮತ್ತೋರ್ವ ಆಕ್ರೋಶ ಹೊರಹಾಕಿದ್ದಾನೆ.
ಸಹರಾ ರೇ ಕಂಪನಿ ಈ ರೀತಿ ಮಾಡಿರೋದು ಇದೇ ಮೊದಲೇನಲ್ಲ. 2019ರಲ್ಲಿ ಫ್ಲೋರ್ ಮ್ಯಾಟ್ ಹಾಗೂ ಟಾಯ್ಲೆಟ್ ಕವರ್‌ಗಳ ಮೇಲೆ ಹಿಂದು ದೇವತೆಗಳ ಚಿತ್ರವನ್ನು ಮುದ್ರಿಸಿತ್ತು. ಅದನ್ನು ಅಮೇಜಾನ್‌ನಲ್ಲಿ ಮಾರಾಟಕ್ಕಿಡಲಾಗಿತ್ತು.
ಸಂಸ್ಥೆಗಳಿಗೆ ಪ್ರಚಾರಮಾಡಲು ಸಾಕಷ್ಟು ವಿಧಾನಗಳಿವೆ ಅಂತದ್ದರಲ್ಲಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಇತರ ಕೀಳುಮಟ್ಟದ ಜಾಹೀರಾತುಗಳನ್ನು ನೀಡುವುದು ಒಳ್ಳೆಯದಲ್ಲ ಇದರಲ್ಲಿ ಭಾಗವಹಿಸುವುದು ಸಹ ಒಳ್ಳೆಯದಲ್ಲ ಇದು ಇಲ್ಲಿಗೇ ನಿಲ್ಲಬೇಕು ಇಲ್ಲವಾದರೆ ಅದರ ವಿರುದ್ಧ ತೀವ್ರ ಹೋರಾಟ ಮಾಡಿ ಕಂಪನಿಯನ್ನೇ ಮುಚ್ಚಿ ಸಲಾಗುವುದು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ…
ರಘುರಾಜ್ ಹೆಚ್. ಕೆ….
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…