
ತೀರ್ಥಹಳ್ಳಿ: ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲದಿನಗಳಿಂದ ರಾತ್ರಿಹೊತ್ತು ಗೋವುಕಳ್ಳರ ಹಾವಳಿ ಹೆಚ್ಚಾಗಿದ್ದು.
ಕಾರಿನಲ್ಲಿ ಬಂದು ಗೋವುಗಳನ್ನು ತುಂಬಿಕೊಂಡು ಹೋಗುತ್ತಿರುವ ಕಳ್ಳರು:
ರಾತ್ರಿ ಹೊತ್ತು ಕಾರಿನಲ್ಲಿ ಬಂದು ಗೋವುಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿರುವ ಕಳ್ಳರು ಸಿಕ್ಕಸಿಕ್ಕ ಹಸುಗಳನ್ನು ರಾತ್ರಿಹೊತ್ತು ತುಂಬಿಕೊಂಡು ಹೋಗುತ್ತಿದ್ದಾರೆ.
ನಿನ್ನೆ ಮಾಲೂರು ಸಮೀಪ ಸಿಕೆ ರೋಡಿನಲ್ಲಿ ಇದೇ ರೀತಿ ಕಳ್ಳತನ ರಿಡ್ಜ್ ಕಾರಿನಲ್ಲಿ ಬಂದ ಕಳ್ಳರು ಎರಡು ಹಸುಗಳನ್ನು ಕಾರಿನಲ್ಲಿ ತುಂಬು ತುಂಬಿಕೊಂಡು ಹೋಗಿದ್ದಾರೆ.
ಜನರಿಗೆ ಎದುರಿಸಿ ಗೋವು ಕಳ್ಳತನ ಮಾಡಿದ ಪುಂಡರು:
ಸಿಕೆ ರೋಡಿನಲ್ಲಿ ಎರಡು ಹಸುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಹೆದುರಿಸಿ ಹಸುಗಳನ್ನು ಹೊತ್ತುಕೊಂಡು ಹೋಗಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಕಳ್ಳತನ ಆಗಲು ಕಾರಣವೇನು?
ಬೆಜ್ಜವಳ್ಳಿ, ತೂದೂರು, ಸಿಕೆ ರೋಡ್, ಮುಡುಬ ಭಾಗದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ರಾತ್ರಿ ಹೊತ್ತಿನಲ್ಲಿ ಕಳ್ಳತನ ಮಾಡುತ್ತಿರುವ ಕಳ್ಳರಿಗೆ ನೈಟ್ ಪೊಲೀಸರ ಭಯ ಇಲ್ಲವಾಗಿದೆ. ಈ ಭಾಗದಲ್ಲಿ ಪೊಲೀಸರ ನೈಟ್ ಬೀಟ್ ಇಲ್ಲವಾಗಿದೆ. ಹೀಗಾಗಿ ದನಗಳ್ಳತನ ಹೆಚ್ಚಲು ಇದು ಸಹ ಒಂದು ಕಾರಣ ಎನ್ನಲಾಗುತ್ತಿದೆ.
ಹಸು ಕಳ್ಳತನ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರೆ ಸಂಪರ್ಕಕ್ಕೆ ಸಿಗದ ಪೊಲೀಸರು:
ಈ ಭಾಗದಲ್ಲಿ ರಾತ್ರಿಹೊತ್ತು ಹಸು ಕಳ್ಳತನ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರೇ ಪೊಲೀಸರು ಸ್ಥಳೀಯರ ಸಂಪರ್ಕಕ್ಕೆ ಸಿಗುತ್ತಿಲ್ಲ ಕಾರಣವೇನು? ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಫೋನಿನ ನೆಟ್ವರ್ಕ್ ಸಮಸ್ಯೆ ಇದೆಯಾ? ಅಥವಾ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆಯಾ? ಈ ಭಾಗದಲ್ಲಿ ಮರಳು ಮಾಫಿಯಾ ಕೂಡ ಹೇರಳವಾಗಿ ನಡೆಯುತ್ತಿರುವುದರಿಂದ ಮಾಲೂರು ಠಾಣೆಗೆ ಬಂದ ಎಸ್ಐ ನವೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಆದರೂ ಇಂತಹ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ ಸ್ವಲ್ಪ ನೈಟ್ ಬಿಟ್ ಹೆಚ್ಚು ಮಾಡಿದರೆ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದು.
ಗೋವುಗಳ ಮಾಲೀಕರು ಕೂಡ ಗೋವುಗಳನ್ನು ಬಿಡಾಡಿ ಯಾಗಿ ಓಡಾಡಲು ಬಿಡಬಾರದು:
ಗೋವುಗಳ ಮಾಲೀಕರು ಕೂಡ ಗೋವುಗಳನ್ನು ರಾತ್ರಿಹೊತ್ತು ಬಿಡಾಡಿ ಯಾಗಿ ಓಡಾಡಲು ಬಿಡದೆ ಅವುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಬೇಕು. ಇದರಿಂದ ಗೋವುಗಳ ರಕ್ಷಣೆ ಒಂದೆಡೆಯಾದರೆ,
ಬಿಡಾಡಿ ಯಾಗಿ ಓಡಾಡುವ ಹಸುಗಳಿಂದ ಆಗುವ ಅಪಘಾತ ಪ್ರಕರಣಗಳು ತಪ್ಪುತ್ತವೆ.
ರಘುರಾಜ್ ಹೆಚ್. ಕೆ….
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…