
ಬೆಂಗಳೂರು : ಜಾಗೃತಿ ಟ್ರಸ್ಟ್ ಸದಾ ಸಾಮಾಜಿಕ ಕಳಾಕಳಿಯುಳ್ಳ ಕೆಲಸಗಳನ್ನು ನಿರ್ವಸುತ್ತಾ ಬಂದಿದ್ದು, ಪರಿಸರ ಸಂರಕ್ಷಣೆ, ಕನ್ನಡ ನಾಡು – ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯಕ್ರಮಗಳು, ಪ್ರತಿಭಾವಂತರಿಗೆ ಪುರಸ್ಕಾರ, ಮಹಿಳೆಯರಿಗೆ ಗೌರವ ಸನ್ಮಾನ ಈ ರೀತಿಯಾಗಿ ದಿನ ನಿತ್ಯವೂ ಒಂದಲ್ಲ ಒಂದು ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುತ್ತಾ ತನ್ನದೇ ಆದ ಹೆಸರನ್ನು ಗಳಿಸುತ್ತಾ ಬಂದಿದೆ.

ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಹಲವು ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಿದ ಜಾಗೃತಿ ಟ್ರಸ್ಟ್ ಸಂಸ್ಥಾಪಕರಾದ ಬಿ. ನಾಗೇಶ್ ರವರು ಮಾತನಾಡಿ, ಕಾಯಕವೇ ಕೈಲಾಸ ಎಂಬ ಸಿದ್ದಾಂತದೊಂದಿಗೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. ವಿಶೇಷವಾಗಿ ನಮ್ಮ ಸಂಸ್ಥೆ ಈ ದಿನ ಸ್ವಚ್ಛತೆಯನ್ನು ಕಾಪಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಜಾಗೃತಿ ಟ್ರಸ್ಟ್ ಸಂಸ್ಥಾಪಕರಾದ ನಾಗೇಶ್. ಬಿ, ಪ್ರಭು ವಕೀಲರು, ವಿಶ್ವನಾಥ್ ಹಾಗೂ ಮುರಳಿ ಕೃಷ್ಣ ಬೆಲಾಳು ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ
ಮಂಜುಳ ಪಾವಗಡ ✍️
#####################################
ಸುದ್ದಿ ನೀಡಲು ಸಂಪರ್ಕಿಸಿ:9449553305…