2022-23ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವಂತ 22,000 ಅತಿಥಿ ಶಿಕ್ಷಕರ ನೇಮಕಾತಿಗೆ , ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಡಾ.ವಿಶಾಲ್ ಆರ್ ಅವರು ಆದೇಶ ಹೊರಡಿಸಿದ್ದು, 2022-23ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಒಟ್ಟು 22,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಿ ಅಗತ್ಯ ಖಾಲಿ ಹುದ್ದೆಗಳಿವೆಯೋ ಅಂತಹ ಖಾಲಿ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳ ಮಾಹಿತಿಯಂತೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಜಿಲ್ಲಾ ಉಪ ನಿರ್ದೇಶಕರ ವಿಲೇವಾರಿಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಖಾಲಿ ಹುದ್ದೆಗಳ ವಿವರ
ಬೆಂಗಳೂರು ಉತ್ತರ – 139
ಬೆಂಗಳೂರು ದಕ್ಷಿಣ – 230
ಬೆಂಗಳೂರು ಗ್ರಾಮಾಂತರ – 232
ಕೋಲಾರ – 251
ಚಿಕ್ಕಬಳ್ಳಾಪುರ – 337
ತುಮಕೂರು – 444
ಮಧುಗಿರಿ – 301
ಚಿತ್ರದುರ್ಗ – 499
ದಾವಣಗೆರೆ – 154
ಶಿವಮೊಗ್ಗ – 681
ರಾಮನಗರ – 264
ಮೈಸೂರು – 679
ಚಾಮರಾಜನಗರ – 343
ಮಂಡ್ಯ – 683
ಹಾಸನ – 302
ಚಿಕ್ಕಮಗಳೂರು – 188
ಕೊಡಗು – 156
ದಕ್ಷಿಣ ಕನ್ನಡ – 764
ಉಡುಪಿ – 310
ಬೆಳಗಾಂ – 986
ಚಿಕ್ಕೋಡಿ – 1355
ಉತ್ತರ ಕನ್ನಡ – 209
ಶಿರಸಿ – 606
ಗದಗ – 333
ಧಾರವಾಡ – 389
ವಿಜಯಪುರ – 1157
ಹಾವೇರಿ – 511
ಗುಲಬರ್ಗಾ – 1743
ಯಾದಗಿರಿ – 1623
ಬಳ್ಳಾರಿ – 994
ರಾಯಚೂರು – 1833
ಕೊಪ್ಪಳ – 977
ವಿಜಯನಗರ – 774
ಬೀದರ್ – 570
ಬಾಗಲಕೋಟೆ – 987
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…