
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆ ವ್ಯಾಪ್ತಿಯ ಸಾಗರದ ಗಣಪತಿ ಕೆರೆಯಲ್ಲಿ ಬೆಳಲಮಕ್ಕಿ ವಾಸಿಯಾದ ರಕ್ಷಿತಾ ಎಂಬ ಹುಡುಗಿಯ ಶವ ಪತ್ತೆಯಾಗಿದ್ದು.
ಗಣಪತಿ ಕೆರೆಯ ದಡದ ನೀರಿನಲ್ಲಿ ಶವ ತೇಲುತ್ತಿತ್ತು,ಸಾಗರ ನಗರ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು.
ರಕ್ಷಿತಾ ಸಾವು ಕೊಲೆಯ, ಆತ್ಮಹತ್ಯೆಯ, ಕೊಲೆಯಾದರೆ ಮಾಡಿದ್ಯಾರು, ಕಾರಣವೇನು? ಆತ್ಮಹತ್ಯೆಯ ಆದರೆ ಕಾರಣವೇನು? ಎಂಬಿತ್ಯಾದಿ ನಿಗೂಢ ಅಂಶಗಳು ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.
ಸಾಗರದ ಕೇಶವ ಜ್ಯುವೆಲ್ಲರ್ಸ್ ನ ಸುಚಿತ್ರ ಸಾವಿನ ಪ್ರಕರಣದ ಹಿಂದೆಯೇ ರಕ್ಷಿತಾ ಪ್ರಕರಣವು ನಡೆದಿದ್ದು ಸುಚಿತ್ರ ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎನ್ನುವುದು ಇನ್ನೂ ಬಗೆಹರಿದಿಲ್ಲ . ಇದು ಯಾವ ಹಂತಕ್ಕೆ ತಲುಪುತ್ತದೆ ಕಾದುನೋಡಬೇಕು.
ದಕ್ಷ ಡಿವೈಎಸ್ಪಿ ರೋಹನ್ ಜಗದೀಶ್ ಸುಚಿತ್ರ ಪ್ರಕರಣ ಹಾಗೂ ರಕ್ಷಿತಾ ಪ್ರಕರಣವನ್ನು ಬಯಲಿಗೆಳೆಯುತ್ತಾರೆ ಎನ್ನುವ ನಂಬಿಕೆ ಸಾಗರದ ನಾಗರಿಕರದ್ದು….

ಓಂಕಾರ್ ಎಸ್ ವಿ ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…