Tuesday, April 29, 2025
Google search engine
Homeಸಿನಿಮಾ"ಉತ್ತರದ ಸಿಂಹ" ಪೋಸ್ಟರ್ ಬಿಡುಗಡೆ..!!

“ಉತ್ತರದ ಸಿಂಹ” ಪೋಸ್ಟರ್ ಬಿಡುಗಡೆ..!!


  • ಧಾರವಾಡ : “ಉತ್ತರದ ಸಿಂಹ” ಕನ್ನಡ ಚಲನಚಿತ್ರ ಸೆಟ್ಟೇರಲು ತಯಾರಿ ನಡೆಯುತ್ತಿದ್ದು ಮೊದಲ ಹೆಜ್ಜೆಯಾಗಿ ಚಿತ್ರ ತಂಡ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಛೇರಿಯಲ್ಲಿ ಸರಳ ಸಮಾರಂಭದ ಮೂಲಕ ಬಿಡುಗಡೆಗೊಳಿಸಲಾಯಿತು.

  • ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಶಂಕರ್ ಸುಗತೆ, ಕಾರ್ಯದರ್ಶಿ ಮಂಜುನಾಥ ಹಗೆದಾರ, ಕಲಾಸಂಗಮ ಅಧ್ಯಕ್ಷ ಪ್ರಭು ಹಂಚಿನಾಳ, ಮಾಜಿ ಯೋಧ ರುದ್ರಪ್ಪ ಚಿನಿವಾಲ, ಮೂರ್ತಿ ಮಾಳದ್ಕರ, ನಿರ್ಮಾಪಕ ವೀರನಗೌಡ ಸಿದ್ಧಾಪೂರ, ಚಿತ್ರದ ನಾಯಕ ನಟ ಕಿರಣ ಸಿದ್ಧಾಪೂರ ಮತ್ತು ಚಿತ್ರ ನಿರ್ದೇಶಕ ರಾಹುಲ್ ದತ್ತಪ್ರಸಾದ ಚಿತ್ರತಂಡದ ಮೊದಲಾದವರು ಪಾಲ್ಗೊಂಡಿದ್ದರು.
  • ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಚಿತ್ರಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ರಾಹುಲ್‌ರು -ಇಡೀ ಚಿತ್ರ ಪರಂಪರೆ ಮತ್ತು ಪ್ರಕೃತಿಯ ವಿಶೇಷಣಗಳನ್ನು ವಿವರಿಸುವಂತದ್ದಾಗಿದೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆ ಜೊತೆಗೆ ಚಿತ್ರದ ಕಥಾವಸ್ತು ಅಷ್ಟೇ ಸೂಕ್ಷ್ಮವಾಗಿದ್ದು ಅನೇಕ ತಿರುವುಗಳನ್ನು ಹೊಂದಿದೆ. ಧರ್ಮವೀರ ಡಾ.ಕಲ್ಮೇಶ ಹಾವೇರಿಪೇಟ್ ಅವರ ಶುಭಹಾರೈಕೆಗಳೊಂದಿಗೆ ಚಿತ್ರನಿರ್ಮಾಣವನ್ನು ಸಿದ್ದಾಪುರ ಸಹೋದರರು ಮಾಡುತ್ತಿದ್ದಾರೆ ಎಂದರು.
  • ಕನಸು, ಹೆಜ್ಜೆ ಹೆಜ್ಜೆಗೂ ಧಾರಾವಾಹಿ ಮತ್ತು ಮೂಕಗುರು, ವಿದ್ಯಾಸಾಗರ ಮಕ್ಕಳ ಚಿತ್ರಗಳ ನಿರ್ದೇಶಕರಾಗಿರುವ ಮತ್ತು ಪ್ರೇಮ ಪೂಜೆ, ಹೊಳಲಮ್ಮ ದೇವಿ ಮಹಾತ್ಮೆ, ಜಗಜ್ಯೋತಿ ಬಸವೇಶ್ವರ, ಶ್ರೀಗಂಧ ಚಲನಚಿತ್ರಗಳ ಛಾಯಾಗ್ರಾಹಕ , ಉತ್ತಮ ಛಾಯಾಗ್ರಾಹಕ “ಗಲಾಂಟಿ” ಮರಾಠಿ ಕಲಾತ್ಮಕ ಚಿತ್ರಕ್ಕೆ ಪೂನಾ ಇಂಟರ್ನ್ಯಾಷನಲ್ ಫಿಲ್ಮ್ ದಲ್ಲಿ ಪ್ರಶಸ್ತಿ ಪಡೆದ ರಾಹುಲ್ ದತ್ತಪ್ರಸಾದ ಕಥೆ, ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ ,
  • ಚಿತ್ರಕಥೆ ಮತ್ತು ಸಂಭಾಷಣೆ ರಂಗಭೂಮಿಯ ಎಲ್,ಆರ್,ಬೂದಿಹಾಳ , ಸಂಗೀತ ಶಿವಶಂಕರ ಕೊಣ್ಣೂರ , ಯುವಕವಿ ವಿನಾಯಕ ಕಲ್ಲೂರರ ಗೀತರಚನೆ , ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ , ಡಾ.ವೀರೇಶ ಹಂಡಗಿ ಅವರದಿದೆ.

  • ತಾರಾಗಣದಲ್ಲಿ ರಂಗಭೂಮಿಯ ಕಲಾವಿದರು ಹಾಗೂ ಕಿರುತೆರೆ, ಹಿರಿತೆರೆ ಕಲಾವಿದರಿದ್ದು ಮುಖ್ಯ ಭೂಮಿಕೆಯಲ್ಲಿ ನಾಯಕ ನಟನಾಗಿ ಕಿರಣ ಸಿದ್ದಾಪುರ ಕಾಣಿಸಲಿದ್ದಾರೆ, ವೀರನಗೌಡ ಸಿದ್ದಾಪುರ, ಪ್ರಭು ಹಂಚಿನಾಳ, ಕೃಷ್ಣಪ್ರಿಯಾ, ರಾಜೀವ್ ಸಿಂಗ್, ಬಾಬಾಜಾನ ದರೂರ, ಆನಂದ ಜೋಶಿ, ರಾಜು ಗಡ್ಡಿ ಅವರ ಜೊತೆಗೆ ಇನ್ನೂ ಕೆಲವು ಪಾತ್ರಗಳಿಗೆ ಸೂಕ್ತ ಕಲಾವಿದರ ಆಯ್ಕೆ ನಡೆದಿದೆ. ಈ ಚಿತ್ರಕ್ಕೆ ಅರವಿಂದ ಮುಳಗುಂದ, ರಮೇಶ ಹಿರೇರೆಡ್ಡಿ ಮತ್ತು ಅನೀಸ ಬಾರೂದವಾಲೆ ಸಹಕಾರವಿದೆ.
    ***
    ವರದಿ: ಡಾ.ಪ್ರಭು ಗಂಜಿಹಾಳ
  • ಮೊ: ೯೪೪೮೭೭೫೩೪೬….

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ... Big news: ಹಾಡೋನಹಳ್ಳಿ ಅಕ್ರಮ ಮರಳು ದಂಧೆಯ ಮೇಲೆ ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಭರ್ಜರಿ ದಾಳಿ..! ಸಿಕ್ಕ ವಾಹನಗಳು...