Wednesday, April 30, 2025
Google search engine
Homeರಾಜ್ಯರಾಜೀನಾಮೆ ಪ್ರಸಂಗ ಮುಗಿಯುವುದು ಯಾವಾಗ!!

ರಾಜೀನಾಮೆ ಪ್ರಸಂಗ ಮುಗಿಯುವುದು ಯಾವಾಗ!!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಒತ್ತಡಗಳು ಹೆಚ್ಚುತ್ತಿರುವುದು ನಿಜ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ. ಪ್ರತಿನಿತ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಲೇ ಇವೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜೀನಾಮೆ ಕೊಡಿಸಿದರೆ ಅದು ರಾಜ್ಯ ಬಿಜೆಪಿಯ ಮೇಲೆ ಸರಿಪಡಿಸಲಾಗದಷ್ಟು ದುಷ್ಪರಿಣಾಮ ಬೀರಬಹುದು ಎನ್ನುವ ಭಯ ಹೈಕಮಾಂಡ್ ಗೆ ಇದೆ . ರಾಜ್ಯದಲ್ಲಿ ನಡೆಯುತ್ತಿರುವುದು ಲಿಂಗಾಯಿತ ಬ್ರಾಹ್ಮಣ ಲಾಬಿಗಳ ನಡುವಿನ ಮುಸುಕಿನ ಗುದ್ದಾಟದ ಮುಂದುವರಿದ ಭಾಗ . ಈ ಹಿಂದೆ ಹಲವು ಬಾರಿ ಯಡಿಯೂರಪ್ಪ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ಮುಖಂಡರನ್ನು ತಂದು ಕೂರಿಸುವ ವಿಫಲ ಪ್ರಯತ್ನಗಳನ್ನು ಮಾಡಲಾಯಿತು ಆಗ ಒಂದು ಹಂತದಲ್ಲಿ ಯಡಿಯೂರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು . ಇನ್ನು ಯಡಿಯೂರಪ್ಪರನ್ನು ವರಿಷ್ಠರು ಕಿತ್ತು ಹಾಕಿದ್ದಲ್ಲಿ ಲಿಂಗಾಯತ ಸಮುದಾಯವು ಬಹಿರಂಗವಾಗಿ ಪ್ರತಿಭಟನೆ ಮಾಡುವ ಅಪಾಯದ ಅರಿವು ಕಂಡುಬರುತ್ತಿದೆ ಕಾರಣ ಇಷ್ಟೇ ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟ ರಾಜ್ಯದಲ್ಲಿ ಬೂದಿಮುಚ್ಚಿದ ಕೆಂಡದಂತೆ ಇದೆ ಒಂದು ವೇಳೆ ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದ್ದೆ ಆದಲ್ಲಿ ಬಿಜೆಪಿ ಒಳಗಿರುವ ಲಿಂಗಾಯತರ ಒಂದು ದೊಡ್ಡ ಗುಂಪು ಸಿಡಿದೇಳುವ ಎಲ್ಲಾ ಸಾಧ್ಯತೆಗಳು ಇದೆ.
ಯಡಿಯೂರಪ್ಪ ಅವರ ಸ್ಥಾನವನ್ನು ತುಂಬಲು ಯತ್ನಿಸುತ್ತಿರುವ ಅವರ ಪುತ್ರ ವಿಜಯೇಂದ್ರ ರಿಂದ ಸ್ಥಳೀಯ ಬಿಜೆಪಿ ಮುಖಂಡರು ಆತಂಕಕ್ಕೊಳಗಾಗಿದ್ದಾರೆ ಇನ್ನೇನು ಎರಡು ವರ್ಷ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿ ಮುಗಿದ ಅವರ ಹಿರಿತನದ ಆಧಾರದಲ್ಲಿ ಮನೆಗೆ ಕಳುಹಿಸಿ ಬಳಿಕ ರಾಜ್ಯದ ಚುಕ್ಕಾಣಿಯನ್ನು ಪೂರ್ಣವಾಗಿ ತನ್ನ ಕೈವಶ ಮಾಡಿಕೊಳ್ಳುವುದು ಆರೆಸ್ಸೆಸ್ ಮುಖಂಡರ ಲೆಕ್ಕಾಚಾರವಾಗಿತ್ತು. ಆದರೆ ಸರ್ಕಾರ ದೊಳಗೆ ಇದ್ದು ವಿಜಯೇಂದ್ರ ಬೆಳೆಯುತ್ತಿರುವ ರೀತಿಗೆ ಅವರಿಗೆ ಕಂಗಾಲಾಗಿದ್ದಾರೆ ಯಡಿಯೂರಪ್ಪರ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ನಾಯಕನಾಗಿರುವ ವಿಜಯೇಂದ್ರ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಉಳಿದವರ ಕನಸು ಶಾಶ್ವತವಾಗಿ ನುಚ್ಚುನೂರು ಆಗುತ್ತದೆ.
ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರು ಮುಂದುವರಿದರೆ ಅವರ ಜೊತೆ ಅವರ ಮಗ ವಿಜಯೇಂದ್ರ ಸರ್ವರೀತಿಯಲ್ಲೂ ಬೆಳೆಯುವ ಸಾಧ್ಯತೆಗಳಿವೆ ಎಂಬುದು ಕೆಲವರ ಅಭಿಪ್ರಾಯ ಹೇಗಾದರೂ ಮಾಡಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಇಲ್ಲವಾದರೆ ಮುಂದಿನ ರಾಜಕೀಯ ಭವಿಷ್ಯ ಅತಂತ್ರ ವಾಗುವ ಆತಂಕದಲ್ಲಿ ಕೆಲವರಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಮತ್ತು ಅವರ ಪರವಾಗಿ ಸಹಿ ಸಂಗ್ರಹ ಮಾಡಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಚಾರವೇ ಇನ್ನು ಕೆಲವು ಮುಖಂಡರು ಯಡಿಯೂರಪ್ಪ ಅವರ ಬೆಂಬಲವಾಗಿ ನಿಂತಿರುವುದು ಭಿನ್ನಮತ ದಲ್ಲಿ ನಮ್ಮ ಪಾತ್ರ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಸುವುದು ಅಷ್ಟೇ ಎನ್ನುವ ರೀತಿಯಲ್ಲಿ ಇದೆ.
ರಾಜ್ಯದಲ್ಲಿ ಒಂದು ಕಡೆ ಕೊರೋನಾ ದಿಂದ ಜನರು ತತ್ತರಿಸುತ್ತಿದ್ದಾರೆ ಇನ್ನೊಂದೆಡೆ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ನಡೆಸುವುದೇ ಕಷ್ಟವಾಗಿದೆ ಇಂತಹ ಸಂದರ್ಭದಲ್ಲಿ ಅಧಿಕಾರದ ಆಸೆಗಾಗಿ ರಾಜಕಾರಣಿಗಳು ರಾಜ್ಯದ ಜನರ ಕಷ್ಟಸುಖಗಳಿಗೆ ಭಾಗಿಯಾಗುವುದು ಬಿಟ್ಟು ತಮ್ಮ ಸ್ವಾರ್ಥಕ್ಕಾಗಿ, ಕುರ್ಚಿಗಾಗಿ ದಿನನಿತ್ಯ ಕಿತ್ತಾಡುವುದನ್ನು ಜನರು ನೋಡಬೇಕಾಗಿದೆ.
ತಮ್ಮ ತಮ್ಮ ಸ್ವಾರ್ಥಗಳಿಗಾಗಿ ಇವರಿಗೆಲ್ಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಕ್ಕೆ ಯಾರನ್ನೇ ತಂದು ಕೂರಿಸಿದರೂ, ರಾಜ್ಯಕ್ಕೆ ಅದರಿಂದ ಯಾವ ಪ್ರಯೋಜನವೂ ಆಗದು. ನಾಡಿನ ಸಂಕಟಗಳನ್ನು ಕೇಂದ್ರದ ಮುಂದೆ ತೋಡಿಕೊಳ್ಳಲು ಹೆದರುವ ಸಂಸದರಿರುವವರೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುವುದು ಕಷ್ಟ. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪರಿಹಾರದ ಹಣವಾದರೂ ಬಂದಿದ್ದರೆ ರಾಜ್ಯದ ಜನರ ಸ್ಥಿತಿ ಹೀಗಿರುತ್ತಿರಲಿಲ್ಲವೇನೋ. ಅದೇನೇ ಇರಲಿ ಸದ್ಯ ನಡೆಯುತ್ತಿರುವ ರಾಜೀನಾಮೆ ಪ್ರಸಂಗಕ್ಕೆ ಸದ್ಯದಲ್ಲೇ ಅಂತ್ಯ ಬೀಳಲಿದ್ದು. ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ದೆಹಲಿಗೆ ಹೋಗಿ ಪ್ರಹ್ಲಾದ್ ಜೋಶಿ ಭೇಟಿ ಮಾಡಿರುವುದು. ಯತ್ನಾಳ್ ನಿರಂತರ ಹೇಳಿಕೆಗಳು, ಸಚಿವ ಈಶ್ವರಪ್ಪರ ಗುಡುಗು, ಮಠಾಧೀಶರ ನಿರಂತರ ಹೇಳಿಕೆಗಳು, ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ಮಾಡಿರುವುದು, ಬಿಜೆಪಿ ಕೇಂದ್ರದ ನಾಯಕರ ನಿದ್ದೆಗೆಡಿಸಿದ್ದು. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡರು ಎನ್ನುವಂತಾಗಿದೆ. ಬಿಜೆಪಿ ಹೈಕಮಾಂಡ್ ನ‌ ಸದ್ಯದ ಪರಿಸ್ಥಿತಿ, ವಿರೋಧ ಪಕ್ಷದ ಸ್ಥಾನದಲ್ಲಿರುವ ಎಂಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ, ನಂತ ಕಾಂಗ್ರೆಸ್ ನ ಹಿರಿಯ ನಾಯಕರುಗಳು ಯಡಿಯೂರಪ್ಪಪ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಜೆಡಿಎಸ್ ಮೌನವಹಿಸಿದೆ. ಸಾಮಾನ್ಯ ಜನಸಾಮಾನ್ಯರು ಸಾಂಕ್ರಮಿಕ ಕಾಯಿಲೆಯಿಂದ, ಬೆಲೆ ಏರಿಕೆಯಿಂದ, ಕಂಗೆಟ್ಟಿದ್ದು ಆರ್ಥಿಕವಾಗಿ ಚೇತರಿಸಿಕೊಳ್ಳಲಾಗದೇ ಕಂಗಾಲಾಗಿದ್ದಾರೆ. ಇನ್ನುಮುಂದಾದರೂ ಶಿಸ್ತಿನ ಪಕ್ಷ ಬಿಜೆಪಿ ಶಿಸ್ತಿನಿಂದ ಆಡಳಿತ ನಡೆಸಲಿ, ಒಬ್ಬ ಉತ್ತಮ ವ್ಯಕ್ತಿಯ ನಾಯಕತ್ವದಲ್ಲಿ ಮುಂದುವರೆಯಲಿ, ಜನಸಾಮಾನ್ಯರ ಕಷ್ಟ ಗಳಿಗೆ ಸ್ಪಂದಿಸಲಿ, ಆದಷ್ಟು ಬೇಗ ಈ ರಾಜೀನಾಮೆ ಪ್ರಸಂಗಕ್ಕೆ ಇತಿಶ್ರೀ ಹಾಡಲಿ…… ##ವರದಿ ….ರಘುರಾಜ್ ಹೆಚ್, ಕೆ##

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ//9449553305…7892830899…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...