
ಸಾಗರ:- ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುರಕ್ಷತಾ ಹಿತ ದೃಷ್ಟಿಯಿಂದ ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಿದ ಕೆಲ ಮೂರನೇ ಕಣ್ಣು (C. C
CAMERA) ಗಳು ಹಾಳಾಗಿದ್ದು ಇದರಿಂದ ಪೊಲೀಸ್ ಇಲಾಖೆಯು ಸಾಗರ ನಗರದಲ್ಲಿ ಅಪರಾಧ ಪ್ರಕರಣಗಳನ್ನೂ ಪತ್ತೆ ಹಚ್ಚುವಲ್ಲಿ ವಿಫಲವಾಗಿರುತ್ತದೆ.
ಸಾಗರ ನಗರ ಪ್ರದೇಶದಲ್ಲಿ ಅಳವಡಿಸಿರುವ ಮೂರನೇ (C. C. CAMERA ) ಗಳಿಂದ ಪೊಲೀಸ್ ಇಲಾಖೆಯವರು ಅತೀ ಹೆಚ್ಚು ಅಪರಾಧಗಳನ್ನೂ ಪತ್ತೆ ಹಚ್ಚುವಲ್ಲಿ ಸಹಕಾರವಾಗುತ್ತಿದ್ದೂ, ಆದರೇ ಸಾಗರ ನಗರ ಪ್ರದೇಶದ ಪ್ರಮುಖ ಸ್ಥಳಗಳಲ್ಲೇ ಅದರಲ್ಲೂ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಪ್ರದೇಶದಲ್ಲೇ ಮೂರನೇ ಕಣ್ಣು (C. C. CAMERA ) ಹಾಳಾಗಿರುವುದು ಸಾಗರೀಕರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕೂಡಲೇ ಸ್ಥಳೀಯ ಆಡಳಿತವಾದ ಸಾಗರ ನಗರಸಭೆಯವರು ಸಾರ್ವಜನಿಕರ ಸುರಕ್ಷತೆ ಹಾಗೂ ಸಮಾಜದ ಒಳಿತಿಗಾಗಿ ಹಾಳಾದ ಮೂರನೇ ಕಣ್ಣು ( C. C. CAMERA ) ಗಳನ್ನೂ ದುರಸ್ಥಿಗಾಗಿ ಸೂಕ್ತ ಕ್ರಮ ಕೈಗೊಂಡು ಪೊಲೀಸ್ ಇಲಾಖೆ ಜೊತೆಗೆ ಸಹಕರಿಸಿ, ಹೆಚ್ಚುತ್ತಿರುವ ಅಪರಾಧ ಪ್ರಕರಣಕ್ಕೆ ತಿಲಾಂಜಲಿ ಹಾಡುವಂತೆ ಪ್ರಜ್ಞಾವಂತ ಸಾಗರೀಕರು ಸಾಗರ ನಗರ ಸಭೆಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಓಂಕಾರ್ ಎಸ್ ವಿ ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305..