
ಸಾಗರ: ರಾಷ್ಟ್ರೀಯ ಹೆದ್ದಾರಿ 369 ಇ ರಾಣಿಬೆನ್ನೂರು to ಬೈಂದೂರು ಮಾರ್ಗದ ಸಿಗಂದೂರು ಬಳಿಯ ಶಂಕಣ್ಣ ಶಾನಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪದೂರು ಸನಿಹ ಹೊಟ್ಟಲ ಜಡ್ಡು ಬಳಿಯ ಹೆದ್ದಾರಿ ಕಿರಿದಾದ ” U ” ತಿರುವು ಹೊಂದಿದ್ದು, ಈ ” U ” ತಿರುವು ಅತ್ಯಂತ ಅಪಾಯಕಾರಿಯಿಂದ ಕೂಡಿದ್ದಲ್ಲದೇ ಸರ್ಕಾರ ನಿಗದಿತ ತೂಕಕ್ಕಿಂತಲೂ ಹೆಚ್ಚಿನ ಭಾರದ ಸರಕು ಸಾಮಗ್ರಿಗಳನ್ನೂ ಹೊತ್ತ ಬಾರೀ ಗಾತ್ರದ ವಾಹನಗಳು ಸಂಚಾರದಿಂದ ದಿನಗಟ್ಟಲೇ ಈ ತಿರುವಿನಲ್ಲಿ ಸಂಚಾರ ದಟ್ಟನೆಯಿಂದ ಲಘು ವಾಹನಗಳು, ಪ್ರವಾಸಿ ವಾಹನಗಳು ಸುಗಮ ಸಂಚಾರಕ್ಕೆ ತೊಡಕಾಗಿರುತ್ತದೆ.
ಇತ್ತೀಚಿಗೆ ಸ್ಥಳೀಯರೋಬ್ಬರಿಗೆ ಅನಾರೋಗ್ಯದಿಂದ ಬಳಳುತ್ತಿದ್ದ ರೋಗಿಯನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಆಂಬುಲೆನ್ಸ್ ವಾಹನದಲ್ಲಿ ರವಾನಿಸುತ್ತಿದ್ದ ವೇಳೆ ಇದೇ ” U ” ತಿರುವಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡ ಆಂಬುಲೆನ್ಸ್ ವಾಹನ ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಸ್ಥಳೀಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಇದೇ ಸಂಕಷ್ಟವನ್ನೂ ವರ್ಷವಿಡಿ ಅನುಭವಿಸುವಂತಹ ನರಕ ಯಾತನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ, ಮಾನ್ಯ ಸಂಸದರು, ಮಾನ್ಯ ಶಾಸಕರ ಬಳಿ ರಾಷ್ಟ್ರೀಯ ಹೆದ್ದಾರಿಯ ಈ ಅವ್ಯವಸ್ಥೆ ಬಗ್ಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಅಳಲು ತೋಡಿಕೊಂಡರು.
ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮಾನ್ಯ ಸಂಸದರು, ಮಾನ್ಯ ಶಾಸಕರು ಶಾನಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪದೂರು ಸನಿಹ ಹೊಟ್ಟಲ ಜಡ್ಡು ಬಳಿಯ ಹೆದ್ದಾರಿ ಕಿರಿದಾದ ” U ” ತಿರುವು ಹೊಂದಿದ್ದು, ಈ ” U ” ತಿರುವು ಅತ್ಯಂತ ಅಪಾಯಕಾರಿಯಿಂದ ಮುಕ್ತಿಗೆ ಕ್ರಮ ಕೈಗೊಂಡು ಸುಗಮ ಸುರಕ್ಷಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು, ಪ್ರವಾಸಿಗರ ಪರವಾಗಿ ಮನವಿ.
ಓಂಕಾರ ಎಸ್. ವಿ. ತಾಳಗುಪ್ಪ….
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ 9449553305…