
ಅದೇ ತರಹ ಈಗಿರುವ ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದ್ದು. ಅದರಲ್ಲೂ ಪ್ರಮುಖವಾಗಿ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಗೋವಿಂದ ಕಾರಜೋಳ, ರಂತಹ ಸಚಿವರುಗಳಿಗೆ ಕೋಕ್ ನೀಡುವ ಸಾಧ್ಯತೆ ಇದ್ದು. ಹಾಗೆ ಮಾಡಿದ್ದೇ ಆದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಆಗುವುದರಲ್ಲಿ ಸಂಶಯವಿಲ್ಲ. ಹಾಗೆ ಹೊಸ ಸಚಿವರುಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಅದರಲ್ಲಿ ಪ್ರಮುಖವಾಗಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಸಾಗರ ಶಾಸಕರಾದ ಹಾಲಪ್ಪ, ಗೂಳಿಹಟ್ಟಿ ಶೇಖರ್, ರೇಣುಕಾಚಾರ್ಯ, ರಂತಹ ಹೊಸ ಮುಖಗಳಿಗೆ ಆದ್ಯತೆ ಸಿಗುವ ಸಾಧ್ಯತೆ ಇದೆ. ಸಮಸ್ಯೆ ಆಗಿರುವುದು 17 ಶಾಸಕರ ಬಗ್ಗೆ ಇವರ ಬಗ್ಗೆ ಬಿಜೆಪಿ ಸರ್ಕಾರ ಅದರಲ್ಲೂ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಕಾದುನೋಡಬೇಕು. ಮುಖ್ಯಮಂತ್ರಿ ರೇಸ್ ನಲ್ಲಿರುವ ಕೆಲವು ಹೆಸರುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಪ್ರಮುಖವಾಗಿ ಪ್ರಹ್ಲಾದ್ ಜೋಶಿ, ಬಿಎಲ್ ಸಂತೋಷ್, ವಿಶ್ವೇಶ್ವರ ಹೆಗಡೆ ಕಾಗೇರಿ, ಅನ್ನೋದು ಉನ್ನತ ಮೂಲಗಳಿಂದ ಮಾಹಿತಿ .



ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ರಾಜೀನಾಮೆ ಪ್ರಸಂಗಕ್ಕೆ ಸೋಮವಾರ ಅಂತ್ಯ ಬೀಳಲಿದ್ದು. ಕೊನೆ ಹಂತದಲ್ಲಿ ಯಾವ ಬೆಳವಣಿಗೆ ಬೇಕಾದರೂ ಆಗಬಹುದು… (ವರದಿ ರಘುರಾಜ್ ಹೆಚ್, ಕೆ)..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305/7892830899…