ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನವಾಗಿ ಪತ್ರಕರ್ತರ ತಂಡವನ್ನು ರಾಜ್ಯಪಾಲರು ಆಯ್ಕೆ ಮಾಡಿದ್ದು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು ಅನುಭವಿಗಳು, ಬರಹಗಾರರು ,ಚಿಂತಕರು , ಆದ ಸದಾಶಿವ ಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಸದಸ್ಯರನ್ನಾಗಿ ಶಿವಮೊಗ್ಗದ ನಮ್ಮ ನಾಡು ಪತ್ರಿಕೆಯ ಸಂಪಾದಕರು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಆದ ಕೆವಿ ಶಿವಕುಮಾರ್ ಅವರನ್ನು, ಹಾಗೆ ಕನ್ನಡಪ್ರಭದ ವರದಿಗಾರರಾದ ಗೋಪಾಲ ಸಿಂಗಪ್ಪಯ್ಯ ಯಡಗೆರೆ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಕೆಕೆ ಮೂರ್ತಿ, ಶಿವಕುಮಾರ ಬೆಳ್ಳಿತಟ್ಟೆ, ಕೂಡ್ಲಿ ಗುರುರಾಜ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಆದ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಕೆ ಮಹೇಂದರ್, ಮಂಗಳೂರು ಜಿಲ್ಲೆಯ ಜಯಕಿರಣದ ಪತ್ರಿಕೆಯ ವರದಿಗಾರರಾದ ಜಗನ್ನಾಥ್ ಬಾಳ, ಕಲ್ಬುರ್ಗಿಯ ಕಪನೂರ್ ಬುದ್ದ ಲೋಕ ಸಂಪಾದಕರು ಆದ ದೇವೇಂದ್ರಪ್ಪನವರು, ಆಯ್ಕೆಯಾಗಿದ್ದಾರೆ….ಸದಾಶಿವ ಶೆಣೈ…ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರು ಶಿವಾನಂದ ತಗಡೂರು…ಕನ್ನಡ ಪ್ರಭ ವರದಿಗಾರರಾದ ಗೋಪಾಲ್ ಸಿಂಗಪ್ಪಯ್ಯ ಯಡಗೆರೆ…ನಮ್ಮ ನಾಡು ಪತ್ರಿಕೆಯ ಸಂಪಾದಕರು, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಕೆ,ವಿ ಶಿವಕುಮಾರ್….
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಸದಸ್ಯರಿಗೆ ನ್ಯೂಸ್ ವಾರಿಯರ್ಸ್ ಪತ್ರಿಕಾ ತಂಡದ ಪರವಾಗಿ ಧನ್ಯವಾದಗಳು. ಪತ್ರಕರ್ತರ ಕಷ್ಟಗಳಿಗೆ ಸ್ಪಂದಿಸುತ್ತಾ, ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಿ ನ್ಯಾಯಯುತವಾಗಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ನಿರಂತರವಾಗಿ ಪತ್ರಕರ್ತರ ಜೊತೆ ಸಂಪರ್ಕದಲ್ಲಿರುತ್ತಾರೆ ಎಂಬ ನಂಬಿಕೆಯೊಂದಿಗೆ….( ರಘುರಾಜ್ ಹೆಚ್, ಕೆ)…