
ರಘುರಾಜ್ ಹೆಚ್.ಕೆ…9449553305…
ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳ ಒಕ್ಕೂಟದ ಸರ್ಕಾರ ಪತನವಾದ ನಂತರ ಶಿವಸೇನೆಯ ಬಂಡಾಯ ನಾಯಕ ಎಕಾನಾಥ್ ಶಿಂದೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿ ಸರ್ಕಾರ ರಚನೆ ಮಾಡಿ ಅಧಿಕಾರ ನಡೆಸುತ್ತಿರುವ ಬೆನ್ನಲ್ಲೇ ,
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಚಿಂತನೆ ನಡೆಸಿರುವ ಹೈಕಮಾಂಡ್ ..?
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಬೇರೊಬ್ಬರನ್ನು ಕೂರಿಸುವ ಪ್ರಬಲವಾದ ಚಿಂತನೆಯನ್ನು ಬಿಜೆಪಿ ಹೈಕಮಾಂಡ್ ನಡೆಸುತ್ತಿದೆ ಎನ್ನಲಾಗುತ್ತಿದೆ. ಇದೇ ತಿಂಗಳ 26ಕ್ಕೆ ಮಾಜಿ ಮುಖ್ಯಮಂತ್ರಿ ರಾಜಾಹುಲಿ ಎಂದೇ ಖ್ಯಾತಿ ಪಡೆದಿರುವ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟು ಒಂದು ವರ್ಷ ಕಳೆಯುತ್ತದೆ. ಬಿಎಸ್ ವೈ ರಾಜೀನಾಮೆ ನೀಡಿ ಎರಡು ದಿನದ ನಂತರ ಅಂದರೆ ಜುಲೈ 28ಕ್ಕೆ ನೂತನ ಮುಖ್ಯಮಂತ್ರಿ ಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗುತ್ತಾರೆ. ಅಲ್ಲಿಗೆ ಈ ತಿಂಗಳ 28ಕ್ಕೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಒಂದು ವರ್ಷ ಕಳೆಯುತ್ತದೆ. ಇದೆ ಸಂದರ್ಭದಲ್ಲಿ ಬಸವರಾಜ್ ಬೊಮ್ಮಾಯಿ ಅವರನ್ನು ಆ ಸ್ಥಾನದಿಂದ ಇಳಿಸಿ ಅವರ ಸ್ಥಾನಕ್ಕೆ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಚಿಂತನೆಯನ್ನು ಹೈಕಮಾಂಡ್ ನಡೆಸುತ್ತಿದೆ ಎನ್ನಲಾಗುತ್ತಿದೆ.
ಬಸವರಾಜ್ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಮುಖವಾದ ಕಾರಣಗಳೇನು ..?
1) ಬಸವರಾಜ್ ಬೊಮ್ಮಾಯಿ ಅವರ ಸಾಧನೆ ಬಿಜೆಪಿ ಹೈಕಮಾಂಡ್ ಗೆ ಅಷ್ಟೇನೂ ತೃಪ್ತಿ ತಂದಿಲ್ಲ.
2)ಬೊಮ್ಮಾಯಿ ಅಧಿಕಾರ ಅವಧಿಯಲ್ಲಿ ಸಾಕಷ್ಟು ದೂರುಗಳು ರಾಜ್ಯ ಸರ್ಕಾರದ ವಿರುದ್ಧ ಬಂದಿರುವುದು.
3) ಪಕ್ಷವನ್ನು ಸರಿಯಾಗಿ ಸಂಘಟನೆ ಮಾಡದೆ ಇರುವುದು.
4) ನಾಯಕರಲ್ಲಿರುವ ಅಸಮಾಧಾನವನ್ನು ಪರಿಹರಿಸಲು ಸಾಧ್ಯವಾಗದೇ ಇರುವುದು.
5) ಮುಂಬರುವ 2023ರ ಚುನಾವಣೆಗೆ ಬೊಮ್ಮಾಯಿ ನೇತೃತ್ವದಲ್ಲಿ ಹೋದರೆ ಚುನಾವಣೆಯಲ್ಲಿ ಗೆಲುವು ಕಷ್ಟ ಎನ್ನುವ ಆಂತರಿಕ ಸಮೀಕ್ಷೆ…
6) ಆಡಳಿತದಲ್ಲಿ ಚುರುಕುತನ ಇಲ್ಲದಿರುವುದು…
7) ವೈಯಕ್ತಿಕವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆರೋಗ್ಯ ಸರಿಯಿಲ್ಲದೆ ಇರುವುದು…
8) ಪಕ್ಷ ಸಂಘಟನೆಯ ದೃಷ್ಟಿಯಿಂದ ಬೊಮ್ಮಾಯಿ ಬದಲಾವಣೆ ಅನಿವಾರ್ಯ ಎನ್ನುವುದು.
9) ಆಡಳಿತದಲ್ಲಿ ಹಿಡಿತ ಸಾಧಿಸಲು ಆಡಳಿತಕ್ಕೆ ಚುರುಕು ಮುಟ್ಟಿಸಲು ಮುಂದಿನ ಚುನಾವಣೆಗೆ ಪಕ್ಷ ಸಂಘಟಿಸಿ ಜಯಗಳಿಸಲು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು.
ಯಾರಾಗುತ್ತಾರೆ ಮುಂದಿನ ಮುಖ್ಯಮಂತ್ರಿ :

ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಬಿಜೆಪಿಯ ಸಂಘಟನಾ ಚತುರ ಎಂದೇ ಖ್ಯಾತಿ ಪಡೆದಿರುವ ಬಿ ಎಲ್ ಸಂತೋಷ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ. ಹಿಂದೆ ಕೂಡ ಇವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.ನಂತರದ ಸ್ಥಾನಗಳಲ್ಲಿ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿ, ಸಿಟಿ ರವಿ, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್, ಅಶ್ವಥ್ ನಾರಾಯಣ್, ಆರ್ ಅಶೋಕ್, ಲಕ್ಷ್ಮಣ್ ಸವದಿ, ಮಹಿಳಾ ಕೋಟಾದಲ್ಲಿ ಶೋಭಾ ಕರಂದ್ಲಾಜೆ,ಹೀಗೆ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲರೂ ಮುಖ್ಯಮಂತ್ರಿ ಆಕಾಂಕ್ಷಿಗಳೇ, ಆದರೆ ಹೈಕಮಾಂಡ್ ಚಿತ್ತ ತೀವ್ರ ಕುತೂಹಲದಲ್ಲಿ ಇದ್ದು ಇದೇ ತಿಂಗಳ ಜುಲೈ 28ಕ್ಕೆ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆಯುತ್ತದೆ. ಇದೇ ಸಮಯಕ್ಕೆ ಸರಿಯಾಗಿ ನೂತನ ಮುಖ್ಯಮಂತ್ರಿಯ ಆಯ್ಕೆ ಮಾಡಲು ಚಿಂತನೆ ನಡೆಸಿರುವ ಹೈಕಮಾಂಡ್ ಗೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಗೊಂದಲ ಕಾಡುತ್ತಿದೆ ಎನ್ನಲಾಗುತ್ತಿದೆ.
ಚುನಾವಣೆಯ ಮುನ್ನ ಹಲವು ರಾಜ್ಯಗಳಲ್ಲಿ ಇದೇ ಕ್ರಮ ಅನುಸರಿಸಿರುವ ಬಿಜೆಪಿ ಹೈಕಮಾಂಡ್ :
ಚುನಾವಣೆ ಗೆ ಮುನ್ನ ಹಲವು ರಾಜ್ಯಗಳಲ್ಲಿ ಬಿಜೆಪಿ ಹೈಕಮಾಂಡ್ ಇದೇ ಕ್ರಮವನ್ನು ಅನುಸರಿಸಿದ್ದನ್ನು ನಾವು ಉದಾಹರಣೆಯಾಗಿ ಉದಾಹರಣೆಗೆ : ಗುಜರಾತ್ ನಲ್ಲಿ, ಉತ್ತರ ಖಾಂಡ್ ನಲ್ಲಿ ಇದೇ ಕ್ರಮ ಅನುಸರಿಸಿದ್ದನ್ನು ನೋಡಬಹುದು.
ಒಟ್ಟಿನಲ್ಲಿ ಜುಲೈ 28 ರ ನಂತರ ಬಿಜೆಪಿಯಲ್ಲಿ ಯಾವ ಬದಲಾವಣೆ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:
ರಘುರಾಜ್ ಹೆಚ್. ಕೆ…9449553305….