
ಕಾರ್ಗಲ್ ಶರಾವತಿ ನದಿ ತೀರದಲ್ಲಿರುವ ಶ್ರೀ ಬೃಂದಾವನ ಡ್ರೈಯರ್ಸ್ ರೈಸ್ ಮಿಲ್ ರಾತ್ರಿ ಸುರಿದ ಭಾರೀ ಗಾಳಿ ಮಳೆ, ಗುಡುಗು ಸಿಡಿಲಿನ ರಭಸಕ್ಕೆ 80 ಅಡಿ ಎತ್ತರದ ಗೋಡೆ ಕುಸಿದು ಬಿದ್ದು, ಸೂರು ಸಂಪೂರ್ಣ ಧರೆಗುರುಳಿ, ಸಾವಿರ ಚೀಲಕ್ಕೂ ಅಧಿಕ ಚೀಲ ಭತ್ತ ನೀರು ಪಾಲಾಗಿದೆ. ಯಂತ್ರೋಪಕರಣಗಳು, ಡ್ರೈಯರ್ ಮಷಿನ್, 2 ದೊಡ್ಡ ಜನರೇಟರ್ ಮತ್ತು ಕೊಠಡಿ ಸೇರಿದಂತೆ ಅಂದಾಜು 1 ಕೋಟಿಗೂ ಅಧಿಕ ನಾಶ ನಷ್ಟ ಸಂಭವಿಸಿದೆ.
ರೈಸ್ ಮಿಲ್ ಮಾಲೀಕರಾದ ವಿನೋದ ಎಸ್. ಮಹಾಲೆ ತಿಳಿಸಿದ್ದಾರೆ. ಸದಾ ಹಮಾಲರು, ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವ್ಯವಸ್ಥಾಪಕ ಶಿವಾನಂದ ಪ್ರಭು ತಿಳಿಸಿದ್ದಾರೆ.
ಓಂಕಾರ್ ಎಸ್, ವಿ ತಾಳಗುಪ್ಪ…
##################################
ರಘುರಾಜ್ ಹೆಚ್.ಕೆ…9449553305….