
ದಾವಣಗೆರೆ : ದಿನಾಂಕ: 11.07.2022 ರಂದು ಸಂಜೆ ಸಮಯದಲ್ಲಿ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಟೂರು ಗ್ರಾಮದ ಪ್ರಾಥಮಿಕ ಶಾಲೆ ಹತ್ತಿರ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀಮತಿ ಕನ್ನಿಕಾ ಸಕ್ರಿವಾಲ್, ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ದಾವಣಗೆರೆ ಗ್ರಾಮಾಂತರ ಉಪವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ,
ಸಿಬ್ಬಂದಿಗಳಾದ ಎ.ಎಸ್.ಐ. ಕರಿಬಸಪ್ಪ, ಯಾಸೀನ್ ವುಲ್ಲಾ, ಹಾಗೂ ಸೈಯದ್ ಗಫೂರ್, ತಿಮ್ಮೇಶಿ, ನೂರುಲ್ಲಾ ಇವರನ್ನು ಒಳಗೊಂಡ ತಂಡದೊಂದಿಗೆ ಮೇಲ್ಕಂಡ ಸ್ಥಳಕ್ಕೆ ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 30,210/- ರೂಗಳು, ಒಂದು ಬೈಕ್, ಒಂದು ಮೊಬೈಲ್ ಹಾಗೂ ಓ.ಸಿ. ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ…
ರಘುರಾಜ್ ಹೆಚ್.ಕೆ…9449553305….