
ದಾವಣಗೆರೆ : ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ದಾವಣಗೆರೆಯ ಜಿಲ್ಲಾಧಿಕಾರಿಯ ವರ್ಗಾವಣೆ ಕೊನೆಗೂ ಆಗಿದ್ದು. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಈವರೆಗೆ ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಶಿವಾನಂದ ಕಾಪಶಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಹಾಂತೇಶ್ ಬೀಳಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಯಾವುದೇ ಸ್ಥಳ ತೋರಿಸಿಲ್ಲ.
ಒಟ್ಟಾರೆಯಾಗಿ ಕೊನೆಗೂ ಮಹಾಂತೇಶ್ ಬೀಳಗಿ ಅವರ ವರ್ಗಾವಣೆಯಾಗಿದ್ದು. ಕಳೆದ ಸಲ ಶಿವಮೊಗ್ಗದ ಜಿಲ್ಲಾಧಿಕಾರಿ ವರ್ಗಾವಣೆಯಾದಾಗ ಇನ್ನೇನು ಶಿವಮೊಗ್ಗ ಜಿಲ್ಲೆಗೆ ಬಂದೇ ಬಿಟ್ಟರು ಎನ್ನುವ ಅಷ್ಟರ ಮಟ್ಟಿಗೆ ಇವರ ಹೆಸರು ಕೇಳಿ ಬಂದಿತ್ತು . ಆದರೆ ಬದಲಾದ ಪರಿಸ್ಥಿತಿಯಲ್ಲಿ ಡಾಕ್ಟರ್ ಸೆಲ್ವಮಣಿ ಅವರು ನೂತನ ಜಿಲ್ಲಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಗೆ ಬಂದರು. ನಂತರ ಸಾಕಷ್ಟು ಸಲ ಇವರ ವರ್ಗಾವಣೆಯ ಸುದ್ದಿಗಳು ಹಬ್ಬಿದವು. ಈಗ ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ವರ್ಗಾವಣೆ ಕುರಿತಂತೆ ಸುದ್ದಿಗಳಿಗೆ ತೆರೆ ಬಿದ್ದಿದೆ…
ರಘುರಾಜ್ ಹೆಚ್.ಕೆ…9449553305….