ಬೆಂಗಳೂರು: ದಿನಾಂಕ 19- 07 -2022 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನ ತ್ರಿಪುರಾ ವಾಹಿನಿ ಬೆಂಗಳೂರುನಲ್ಲಿ ಕಾರ್ಯಕ್ರಮ ನಡೆಯಲಿದೆ .
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಾಠ ಸಮಾಜದ ಶ್ರೀ ಪರಮಪೂಜ್ಯರಾದ ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತೀಯ ಸ್ವಾಮೀಜಿ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠ
ಗವಿಪುರಂ ಬೆಂಗಳೂರು ಈ ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾನ್ಯಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ನೆರವೇರಿಸುವರು. ಕರ್ನಾಟಕ ಸರ್ಕಾರದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಮತ್ತು ಕೇಂದ್ರ ಸಚಿವರುಗಳಾದ ಶ್ರೀ ಶ್ರೀಮತಿ ನಿರ್ಮಲ ಸೀತಾರಾಮನ್ ಹಾಗೂ ಶ್ರೀ ಎಂ ರಾಜೀವ್ ಚಂದ್ರಶೇಖರ್ ಇವರ ನಿಗಮದ ಅಂತರ್ಜಾಲತಾಣ ಬಿಡುಗಡೆ ಮಾಡುವರು .ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಮೊದಲ ಅಧ್ಯಕ್ಷರಾದ ಶ್ರೀ ಡಾ.ಎಂ ಜಿ ಮೂಳೆ ಅವರಿಂದ ಪ್ರಾಸ್ಥಾವಿಕ ನುಡಿ ನಮನ ಮಾಡುವರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಸಮಸ್ತ ಮಾರಾಠ ಬಾಂಧವರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಮರಾಠರ ಅಭಿವೃದ್ಧಿಗೆ ಕೈಜೋಡಿಸಬೇಕಾಗಿ
ಶಿವಮೊಗ್ಗ ಮರಾಠ ಸಮಾಜ ವತಿಯಿಂದ ಕೋರಲಾಗಿದೆ.
ಈ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸಬಹುದು… 9742906073 -9448159453-99454616030…..
ರಘುರಾಜ್ ಹೆಚ್.ಕೆ…9449553305….