





ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್….

ಇನ್ನು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ನೋಡುವುದಾದರೆ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಅವರಿಗೆ ಮೊದಲ ಪ್ರಾಶಸ್ತ್ಯ ನೀಡುವುದು ಒಳಿತು ಎನ್ನುವುದು ಕ್ಷೇತ್ರದ ಜನರ ಪಕ್ಷಾತೀತ ಅಭಿಪ್ರಾಯ ಇದಕ್ಕೆ ಹಲವು ಸಂಘಟನೆಗಳು ಧ್ವನಿಗೂಡಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ತೀರ್ಥಹಳ್ಳಿ ಅಧ್ಯಕ್ಷರಾದ ಸುರೇಂದ್ರ ಅವರು ಬಿಜೆಪಿ ನಾಯಕರಿಗೆ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಕಳೆದ 45 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ಆರಗ ಜ್ಞಾನೇಂದ್ರ ಅವರು 9 ಸಲ ಚುನಾವಣೆಗೆ ಸ್ಪರ್ಧಿಸಿ ಐದು ಸಲ ಸೋತು ನಾಲ್ಕು ಸಲ ಗೆದ್ದಿದ್ದಾರೆ. ತೀರ್ಥಹಳ್ಳಿಯ ಇತಿಹಾಸದಲ್ಲಿ ಯಾರು ಸತತವಾಗಿ ಮೂರು ಸಲ ಗೆದ್ದಿಲ್ಲ. ಶಾಸಕ ಆರಗ ಜ್ಞಾನೇಂದ್ರ ಅವರು ಆ ಸಾಧನೆ ಮಾಡಿದ್ದಾರೆ. ಆದರೆ ಅವರ ದುರದೃಷ್ಟವೋ, ಕ್ಷೇತ್ರದ ಜನರ ದುರದೃಷ್ಟವೋ, ಅವರಿಗೆ ಮಂತ್ರಿಪದವಿ ಸಿಕ್ಕಿಲ್ಲ ಸ್ವಾಭಾವಿಕವಾಗಿ ರಾಜಕೀಯ ನಾಯಕರ ಮೇಲೆ ಆಪಾದನೆಗಳು ಸಹಜ ಆದರೆ ಜ್ಞಾನೇಂದ್ರ ಅವರ ವಿಷಯದಲ್ಲಿ ಹಾಗಿಲ್ಲ ಅಭಿವೃದ್ಧಿಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ. ನಿರಂತರವಾಗಿ ಕ್ಷೇತ್ರದ ತುಂಬಾ ಓಡಾಡುವ , ನಿರಂತರವಾಗಿ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿರುವ, ಸರಳ ವ್ಯಕ್ತಿತ್ವದ, ನೇರ ನುಡಿಯ,ಎಪ್ಪತ್ತರ ಹರೆಯದ ಯುವಕ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎನ್ನುವುದು ಪಕ್ಷಾತೀತ ಅಭಿಪ್ರಾಯ ಏಕೆಂದರೆ ಈ ಅವಕಾಶ ಮತ್ತೆ ಸಿಗುವುದಿಲ್ಲ ವೈಯಕ್ತಿಕವಾಗಿ ಜ್ಞಾನೇಂದ್ರ ಬೇರೆ ಶಾಸಕರ ತರ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ವ್ಯಕ್ತಿತ್ವದವರು ಅಂತವರಿಗೆ ಒಂದು ಅವಕಾಶ ನೀಡುವುದು ಸೂಕ್ತ.
ಇನ್ನುಳಿದಂತೆ ರುದ್ರೆ ಗೌಡರು, ಗ್ರಾಮಾಂತರ ಶಾಸಕರಾದ ಅಶೋಕ್ ನಾಯ್ಕ್, ಸಾಗರ ಶಾಸಕರಾದ ಹರತಾಳ ಹಾಲಪ್ಪ, ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪ, ಕೂಡ ಮಂತ್ರಿಗಿರಿಯ ಲಿಸ್ಟಿನಲ್ಲಿ ಇದ್ದಾರೆ. ರುದ್ರೇಗೌಡ ರಿಗೆ ಬಹುತೇಕ ಖಚಿತ ಅನ್ನೋದು ಕೆಲವರ ಅಭಿಪ್ರಾಯ, ಕುಮಾರ್ ಬಂಗಾರಪ್ಪ ಅವರಿಗೆ ಅವಕಾಶ ಸಿಗಬಹುದು ಎನ್ನುವುದು ಹಲವರ ಅಭಿಪ್ರಾಯ, ಹರತಾಳ ಹಾಲಪ್ಪರನ್ನು ಬಿಡುವುದಿಲ್ಲ ಎನ್ನುವುದು ಕ್ಷೇತ್ರದ ಜನರ ನಂಬಿಕೆ. ಇನ್ನು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಕೂಡ ಮಂತ್ರಿಗಿರಿಗೆ ಪ್ರಯತ್ನ ಮುಂದುವರಿಸಿದ್ದಾರೆ.
ಇರುವುದು ಒಂದು ಅಥವಾ ಎರಡು ಸ್ಥಾನ ಅದು ಯಾರ ಪಾಲಾಗುತ್ತದೆ ಕಾದುನೋಡಬೇಕು.
ಒಟ್ಟಿನಲ್ಲಿ ಹಿರಿತನ, ಒಂದಷ್ಟು ಅನುಭವ,ಸುದೀರ್ಘ ರಾಜಕೀಯ ಜೀವನ, ಯಾವುದೇ ಆಪಾದನೆಗಳಿಲ್ಲದೆ ಇರುವ ವ್ಯಕ್ತಿಗಳನ್ನು ಗುರುತಿಸಿ ನೂತನ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಸಂಪುಟಕ್ಕೆ ಒಂದು ಗೌರವ ಬಂದಂತಾಗುತ್ತದೆ.
ಮುಂದೆ ಪಕ್ಷಕ್ಕೂ ಇದರಿಂದ ಸಹಾಯವಾಗಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ….
ವರದಿ…..ರಘುರಾಜ್ ಹೆಚ್.ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…..9449553305….