ಕೊನೆಗೂ ಹಲವು ಹೆಸರುಗಳು ಮುಖ್ಯಮಂತ್ರಿ ಲಿಸ್ಟಿನಲ್ಲಿ ಇದ್ದರು ಪತ್ರಿಕೆ ಆರು ತಿಂಗಳ ಹಿಂದೆಯೇ ಊಹಿಸಿದಂತೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಸರ್ವಾನುಮತದಿಂದ ಆಯ್ಕೆ ಎಂದು ಹೇಳುತ್ತಿದ್ದರು ಕೂಡ ಹಲವು ಗೊಂದಲಗಳು ಮೇಲ್ನೋಟಕ್ಕೆ ಕಾಣುತ್ತಿದೆ. ಬಿಎಸ್ವೈ ಹಠ ಮುಂದೆ ಪಕ್ಷಕ್ಕೆ ಮುಜುಗರ ಆಗುತ್ತದೆ ಎನ್ನುವ ಭಯ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಹಪಹಪಿ ಇವೆಲ್ಲವನ್ನು ನೋಡಿಕೊಂಡು ಹೈಕಮಾಂಡ್ ಬಸವರಾಜ್ ಬೊಮ್ಮಾಯಿ ಗೆ ಅಸ್ತು ಎಂದಿದೆ. ಆದರೆ ಕೇಂದ್ರದ ನಾಯಕರಲ್ಲಿ ಭಿನ್ನಮತ ತಲೆದೋರಿದೆ ಒಂದೊಂದು ನಾಯಕರ ಮನಸ್ಸಿನಲ್ಲಿ ಒಂದೊಂದು ಹೆಸರುಗಳು ಇದ್ದವು ಎನ್ನಲಾಗುತ್ತಿದ್ದು. ಕೊನೆಗೂ ಬಿಜೆಪಿಯನ್ನು ಹೊರತು ಪಡಿಸಿದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಸವರಾಜ್ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು ಈ ಹಿಂದೆ ಬಿಎಸ್ ವೈ ಕೆಜೆಪಿ ಪಕ್ಷವನ್ನು ಕಟ್ಟಿದಾಗ ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಬಲಿಸಿಲ್ಲ ನಂತರ ಕೂಡ ಇವರ ಸಂಬಂಧ ಅಷ್ಟು ಸುಧಾರಿಸಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಸವರಾಜ್ ಬೊಮ್ಮಾಯಿ ಬಿಎಸ್ವೈಗೆ ತುಂಬಾ ಆತ್ಮೀಯರಾಗಿದ್ದರು. ಪರಸ್ಪರ ಒಬ್ಬರ ಮಾತನ್ನು ಒಬ್ಬರು ತೆಗೆದು ಹಾಕುತ್ತಿರಲಿಲ್ಲ ಹಾಗಾಗಿ ಬಿಎಸ್ವೈ ಮನಸಿನಲ್ಲೂ ಕೂಡ ತನ್ನ ಉತ್ತರಾಧಿಕಾರಿ ಬಸವರಾಜ್ ಬೊಮ್ಮಾಯಿ ಆಗಬೇಕು ಎನ್ನುವುದು ಬಹಳ ತಿಂಗಳ ಹಿಂದೆ ಇತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ.ಆದರೆ ಇದನ್ನು ಪಕ್ಷ ಹಾಗೂ ಉಳಿದ ಶಾಸಕರುಗಳು ಯಾವತರ ತೆಗೆದುಕೊಂಡು ಹೋಗುತ್ತಾರೆ ಕಾದುನೋಡಬೇಕು. ಹಾಗೆಯೇ ಲಿಂಗಾಯಿತ, ದಲಿತ, ಒಕ್ಕಲಿಗ, ಸಮುದಾಯದ ಮೂರು ಜನರನ್ನು ಡಿಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಪತ್ರಿಕೆ ನಿರೀಕ್ಷಿಸಿದಂತೆ ಬಿ ಶ್ರೀರಾಮುಲು ಅವರಿಗೆ ಡಿಸಿಎಂ ಪಟ್ಟ ಪಕ್ಕಾ ಆಗಿದೆ. ಹಾಗೆ ದಲಿತ ಸಮುದಾಯದಿಂದ ಗೋವಿಂದ ಕಾರಜೋಳ ಅವರಿಗೆ, ಒಕ್ಕಲಿಗ ಸಮುದಾಯದಿಂದ ಆರ್ ಅಶೋಕ್ ಅವರಿಗೆ ಡಿಸಿಎಂ ಪಟ್ಟ ಪಕ್ಕಾ ಆಗಿದೆ. ಇವೆಲ್ಲ ಆಯ್ಕೆಗಳು ಕೂಡ ಬಿಎಸ್ವೈ ಪರವಾಗಿದೆ. ಹಾಗಾಗಿ ಎಲ್ಲೂ ಕೂಡ ಬಿಜೆಪಿ ಹೈಕಮಾಂಡ್ ಬಿಎಸ್ ವೈ ವಿರುದ್ಧ ಹೋಗಿಲ್ಲ. ಬಿಎಸ್ವೈ ಎದುರು ಹಾಕಿಕೊಂಡರೆ ಮುಂದಿನ ಚುನಾವಣೆಗೆ ಹೋಗುವುದು ಕಷ್ಟ ಆಗಬಹುದು ಎನ್ನುವ ಲೆಕ್ಕಚಾರ ಹೈಕಮಾಂಡ್ ನದು ಹೀಗಾಗಿ ಬಿಎಸ್ವೈ ತನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿರುವಾಗಲೇ ನಿರ್ಗಮನ ಹೊಂದಿದ್ದರೂ ಕೂಡ ತನಗೆ ಸರಿಹೋಗುವ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ ಇನ್ನೂ ನಾನು ರಾಜಕೀಯ ನಿವೃತ್ತಿ ಘೋಷಿಸಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.ಗೋವಿಂದ ಕಾರಜೋಳ….ಆರ್, ಅಶೋಕ್…ಬಿ ,ಶ್ರೀರಾಮುಲು…
ಹೀಗೆ ಜೀವನದುದ್ದಕ್ಕೂ ಹೋರಾಟದ ಹಾದಿಯಲ್ಲಿ ಬಂದ ಬಿಎಸ್ವೈ ಕೊನೆಗೂ ತಮ್ಮ ಹಠವನ್ನು ಸಾಧಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಗೆ ಸೆಡ್ಡು ಹೊಡೆದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಳ ದಿನಗಳಿಂದ ಪ್ರಯತ್ನದಲ್ಲಿದ್ದ ಹಲವು ಜನರಿಗೆ ನಿರಾಸೆಯಾಗಿದೆ. ಅವರ ನಿರ್ಧಾರಗಳು ಮುಂದೆ ಹೇಗಿರುತ್ತದೆ ಕಾದು ನೋಡಬೇಕು. ಯತ್ನಾಳ್ ಹೇಳಿದಂತೆ ಕೊನೆಗೂ ನಡೆಯಲಿಲ್ಲ ಆಶ್ಚರ್ಯ ಮುಖ್ಯಮಂತ್ರಿ ಆಯ್ಕೆ ಆಗಲಿಲ್ಲ ಒಂದಷ್ಟು ಸಂಯಮ, ತಾಳ್ಮೆ, ವಿದ್ಯಾಭ್ಯಾಸ, ಸುದೀರ್ಘ ರಾಜಕೀಯ ಹಿನ್ನೆಲೆ ಎಲ್ಲವನ್ನು ಹೊಂದಿರುವ ಬಸವರಾಜ್ ಬೊಮ್ಮಾಯಿ ಜನತಾ ಪರಿವಾರದಿಂದ ಬಂದಿದ್ದರು ಮೂಲ ಬಿಜೆಪಿಯವರು ಏನು ಅನ್ನುವಷ್ಟರಮಟ್ಟಿಗೆ ಬಿಜೆಪಿಯಲ್ಲಿ ತಲ್ಲೀನರಾಗಿದ್ದರು. ನಾಳೆಯಿಂದ ಅವರ ಅಧಿಕಾರ ನಾಳೆ 11:00 ಗಂಟೆಗೆ ಪ್ರಮಾಣವಚನ ಸ್ವೀಕಾರ ಬಸವರಾಜ್ ಬೊಮ್ಮಾಯಿ ಅವರಿಂದ ರಾಜ್ಯಕ್ಕೆ ಒಂದಷ್ಟು ಒಳಿತಾಗಲಿ ಎನ್ನುವುದು ರಾಜ್ಯದ ಜನರ ನಿರೀಕ್ಷೆ ….(ವರದಿ… ರಘುರಾಜ್ ಹೆಚ್, ಕೆ)….