
30/7/21 ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಕುರಿತು. ರಾಷ್ಟ್ರೀಯ ನಗರ ಸಂರಕ್ಷಣೆ ಜೀವನೋಪಾಯ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ- 2014 ರ ಕರ್ನಾಟಕ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ- 2019 ರ ಕುರಿತು.
ಪಟ್ಟಣ ವ್ಯಾಪಾರ ಸಮಿತಿ (ಟಿವಿಸಿ) ಕಾನೂನಾತ್ಮಕವಾಗಿ ರಚನೆಯಾಗಬೇಕು. ಟಿವಿಸಿ ಸಭೆಯ ಮುಖಾಂತರ ನಡವಳಿಕೆಗಳು ಸರಿಯಾಗಿ ರಚನೆಯಾಗಬೇಕು,
ಟಿವಿಸಿ ಸದಸ್ಯರುಗಳಿಗೆ 7 ದಿನ ಮುಂಚಿತವಾಗಿ ನೋಟಿಸನ್ನು ನೀಡಬೇಕು, ಪಟ್ಟಣ ವ್ಯಾಪಾರ ಸಮಿತಿ 100% ರಷ್ಟು ರಚನೆಯಾಗಬೇಕು, ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಟಿವಿಸಿಯಲ್ಲಿ ಆಯ್ಕೆಯಾದ ಸದಸ್ಯರುಗಳು ಇವರು ಮಾತ್ರ ಭಾಗಿಯಾಗಿರುತ್ತಾರೆ. ಇನ್ನು 60% ರಷ್ಟು ಯಾವುದೇ ಇಲಾಖೆ ವತಿಯಿಂದ ಟಿವಿಸಿ ಸಭೆಯಲ್ಲಿ ಯಾರು ಇದುವರೆಗೆ ಭಾಗಿಯಾಗಿರುವುದಿಲ್ಲ.
ಟಿವಿಸಿ ಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ಸಮೀಕ್ಷೆಯಾಗಬೇಕು. ಟೈಲರಿಂಗ್ ಟೀಚರ್ ಗಣತಿದಾರರು ಬೀದಿ ಬೀದಿ ವ್ಯಾಪಾರಿಗಳ ಹೆಸರಿನಲ್ಲಿ ಬೇರೆಯವರಿಗೆ ಸಮೀಕ್ಷೆ ಮಾಡುತ್ತಿದ್ದಾರೆ. ಹಾಗೂ ಟೈಲರಿಂಗ್ ಟೀಚರ್ ಗಣತಿದಾರರು ಇವರು ಸರಿಯಾಗಿ ಟಿವಿಸಿ ಮುಖಾಂತರ ಸಮೀಕ್ಷೆ ಮಾಡುತ್ತಿಲ್ಲ. ಟಿವಿಸಿ ಮುಖಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಮಾರಾಟ ಪ್ರಮಾಣ ಪತ್ರ ನೀಡಬೇಕು.
ಟಿವಿಸಿ ಮುಖಾಂತರ ಬೀದಿಬದಿ ವ್ಯಾಪಾರಿಗಳಿಗೆ ವೆಂಡ್ಡಿಂಗ್ ಝೊನ್ ಮಾಡಬೇಕು. ಟಿವಿಸಿ ಸದಸ್ಯರುಗಳಿಗೆ ಭತ್ಯೆ ನೀಡಬೇಕು. ಬೀದಿಬದಿ ವ್ಯಾಪಾರಿಗಳನ್ನು ಪೊಲೀಸ್ ಇಲಾಖೆ ವತಿಯಿಂದ ತೆರವುಗೊಳಿಸುತ್ತಾರೆ. ನಮ್ಮ ವಲಯ ಟಿವಿಸಿ ಸಭೆಯಲ್ಲಿ ಇದರ ಬಗ್ಗೆ ಯಾವುದೇ ಚರ್ಚೆಯಾಗಿರುದಿಲ್ಲ. ನಮ್ಮ ವಲಯದ ಯಾವುದೇ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವಂತಿಲ್ಲ.
ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ವಾಹನ ಮೋಟರ್ ಪರವಾನಗಿ, ಗುರುತಿಸಿ ಚೀಟಿಯನ್ನು ಪಡೆದಿರುವುದಿಲ್ಲ, ಹಾಗೂ ವಾಹನ ಮೋಟಾರ್ ಗಾಡಿಗಳು ಹಾಗೂ ಧ್ವನಿವರ್ಧಕ ಬಳಸಿಕೊಂಡು ವ್ಯಾಪಾರ ಮಾಡುವಂತಿಲ್ಲ, ಅಂತಹ ವಾಹನ ಮೋಟರ್ ಗಳನ್ನು ರದ್ದು ಪಡಿಸಬೇಕು ಟಿವಿಸಿ ಅಧ್ಯಕ್ಷರು.
ಬೀದಿ ಬದಿ ವ್ಯಾಪಾರಿಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಸಂಸ್ಥೆಯವರು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಅಧ್ಯಕ್ಷರು ಟಿವಿಸಿ ಮುಖಾಂತರ ನಿರ್ಬಂಧಿಸಬೇಕು. ಕಾನೂನಾತ್ಮಕವಾಗಿ ಬೀದಿಬದಿ ವ್ಯಾಪಾರಿಗಳಿಗೆ ಟಿವಿಸಿ ಮುಖಾಂತರ ಪರಿಹಾರವಾಗಿಬೇಕು.
ಟಿವಿಸಿ ಅಧ್ಯಕ್ಷರುಗಳಿಂದ ಆಯ್ಕೆಯಾದ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳಿಗೆ ಸರಿಯಾದ ರೀತಿಯಲ್ಲಿ ಗೌರವ ದೊರೆಯುತ್ತಿಲ್ಲ.
ಪಟ್ಟಣ ವ್ಯಾಪಾರ ಸಮಿತಿಯ ಅಧ್ಯಕ್ಷರು 100% ರಷ್ಟು ಸಮಿತಿ ರಚನೆ ಮಾಡಬೇಕು. ಪಟ್ಟಣ ವ್ಯಾಪಾರ ಸಮಿತಿಯಲ್ಲಿ 60% ರಷ್ಟು ಎಲ್ಲಾ ಇಲಾಖೆ ವತಿಯಿಂದ ಇರಬೇಕು.ಪಟ್ಟಣ ವ್ಯಾಪಾರ ಸಮಿತಿಯಲ್ಲಿ 40% ರಷ್ಟು ಆಯ್ಕೆಯಾದ ಸದಸ್ಯರಗಳು ಇರಬೇಕು.
ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರ ಸಂಘದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಆಯುಕ್ತರಾದ ಚಿದಾನಂದ ವಟಾರೆ ರವರಿಗೆ ಮನವಿ ಮಾಡಿದರು.
ಈ ವೇಳೆ ಸವಳಂಗ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ನಾವು ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರುವೆವೂ ನಮ್ಮ ಬಳಿ ಬೀದಿ ಬದಿ ಗುರುತಿನ ಚೀಟಿ ಇದೆ, ವೆಂಡಿಂಗ್ ಝೂನ ನಾನ್ ವೆಂಡಿಂಗ್ ಝೂನ ನಿರ್ಮಾಣ ಮಾಡಿ ನಮಗೂ ವೆಂಡಿಂಗ್ ಝೂನ ನಲ್ಲಿ ಅವಕಾಶ ಕಲ್ಪಿಸಬೇಕು ಗುರುತಿಸಿ ಚೀಟಿ ಇಲ್ಲದವರಿಗೆ ಹಾಗೂ ಬೇರೆಯವರಿಗೆ ವೆಂಡಿಂಗ್ ಝೂನ ನಲ್ಲಿ ಅವಕಾಶ ಮಾಡಬೇಡಿ ಎಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಮೂಖಾಂತರ ಆಯುಕ್ತರಿಗೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ನಾರಾಯಣ ಎಂ.ಎಸ್ ವಿನಾಯಕ.
ಶೇಷಯ್ಯ, ಸವಳಂಗ ರಸ್ತೆಯ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ.. ರಘುರಾಜ್ ಹೆಚ್ .ಕೆ….
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305…