
ಕೋವಿಡ್ ಲಸಿಕೆ ಸಿಗ್ತಿಲ್ಲಾ ಅಂತಾ ರಾಜ್ಯಾದ್ಯಂತ ಜನ ಪರದಾಡುತ್ತಿದ್ದಾರೆ.
ಆದ್ರೆ, ಇಲ್ಲಿ ಲಸಿಕೆಗಳನ್ನು ಬೇಕಾಬಿಟ್ಟಿ ಹಾಳು ಮಾಡಿದ್ದಾರೆ.
ಇವರಿಗೆ ಲಸಿಕೆ ಬೆಲೆನೂ, ಅದರ ಸದುಪಯೋಗ ಮಾಡೋದರ ಅರಿವಿಲ್ಲ.
ಹೇಳುವರಿಲ್ಲ ಕೇಳುವರಿಲ್ಲ ಎಂಬಂತಾಗಿದೆ.

17 ಲಸಿಕಾ ವಾಯಲ್‌ಗಳನ್ನು ಅರೆ ಬರೆ ಬಳಸಿ ಬಿಸಾಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು.
ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಘಟನೆ.
ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ.
ದೀಢೀರ್ ಭೇಟಿ ನೀಡಿದ ಟಿಎಚ್ ಓ ಡಾ.ನಾಗರಾಜ್
ಲಸಿಕ ದಾಸ್ತಾನು ಪರಿಶೀಲಿಸಿದ ಸಂದರ್ಭದಲ್ಲಿ ಬೆಳಕಿಗೆ ಬಂದ ಘಟನೆ
ಸ್ಪಷ್ಟ ಮಾಹಿತಿ ನೀಡಲು ತಡಬಡಿಸಿದ ಹಿರಿಯ ಫಾರ್ಮಸಿಸ್ಟ್
ಉಡಾಫೆ ಉತ್ತರ ನೀಡಿದ ಸಾರ್ವಜನಿಕರ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ.
ಲಸಿಕೆ ದುರಪಯೋಗ ಪಡಿಸಿದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಟಿಎಚ್ಓ.
ಅರೆಬಳಕೆ ಮಾಡಿ ಬಿಸಾಡಿದ ವಾಯಿಲ್‌ಗಳನ್ನು ಸಂಗ್ರಹಿಸಿ ನೋಟಿಸ್ ಜಾರಿಗೊಳಿಸಿದ ಟಿಎಚ್‌ಓ.
ಲಸಿಕೆಯನ್ನು ದುರುಪಯೋಗ ಪಡಿಸಿಕೊಂಡವರ ಮೇಲೆ ಕ್ರಮಕ್ಕೆ ಆಗ್ರಹ
ನೊಟೀಸ್ ಜಾರಿಗೊಳಿಸಿದ ಪ್ರತಿಯನ್ನು ಜಿಲ್ಲಾ ಆರ್‌ಸಿಎಚ್ ಅಧಿಕಾರಿಗೆ ರವಾನಿಸಲು ಸಿದ್ಧತೆ.

ವರದಿ…ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305…