21 /01 2021 ರಾತ್ರಿ 10:30 ಕ್ಕೆ ಶಿವಮೊಗ್ಗದಲ್ಲಿ ನಡೆದ ಹುಣಸೋಡು ಸ್ಫೋಟ ಪ್ರಕರಣದಲ್ಲಿ ಹಲವು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಆದರೆ ಎಲ್ಲರಿಗೂ ಸಮರ್ಪಕವಾಗಿ ಪರಿಹಾರ ದೊರಕಿಲ್ಲ ಕೆಲವರಿಗೆ ಪರಿಹಾರ ದೊರಕಿದ್ದರೆ ಕೆಲವರಿಗೆ ಪರಿಹಾರ ದೊರಕಿಲ್ಲ. ಈಗಲೂ ಆ ಸ್ಫೋಟದ ತೀವ್ರತೆಯಿಂದ ಹಲವು ಜನರು ಬಳಲುತ್ತಿದ್ದಾರೆ. ಆ ಸ್ಪೋಟದಿಂದ ಕಳೆದುಕೊಂಡ ಮನೆಗಳು, ಆದ ಹಾನಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ಎಂದು ಆಗ್ರಹಿಸಿ ಇಂದು ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಅಂತಹ ವ್ಯಕ್ತಿಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಗೋ ರಮೇಶ್ ಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ….ಈ ಸಂದರ್ಭದಲ್ಲಿ ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷರಾದಅ ಗೋ ರಮೇಶ್ ಗೌಡ, ಸಂತೋಷ್, ಶ್ರೀಮತಿ ನಯನ, ಹಾಗೂ ಸಂತ್ರಸ್ತರಾದ ಅಂಬಿಕಾ, ಈಶ್ವರಿ, ಕುಮಾರ್, ಪಾಪಮ್ಮ, ಜಯಮ್ಮ, ಭಾಸ್ಕರ್, ಮುಂತಾದವರು ಉಪಸ್ಥಿತರಿದ್ದರು…