Home ರಾಜ್ಯಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ “ಸ್ಫೋಟಕ ಬಳಸಿ” “ಅಕ್ರಮ ಕಲ್ಲುಗಣಿಗಾರಿಕೆ”..!!! ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು..!!!!

ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯಲ್ಲಿ “ಸ್ಫೋಟಕ ಬಳಸಿ” “ಅಕ್ರಮ ಕಲ್ಲುಗಣಿಗಾರಿಕೆ”..!!! ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು..!!!!

by EDITOR NEWS WARRIORS
0 comments

ತೀರ್ಥಹಳ್ಳಿ : ರಾಜ್ಯದ ಉಚ್ಚನ್ಯಾಯಾಲಯದ ಸ್ಪಷ್ಟವಾದಆದೇಶವಿದ್ದರೂ, ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗ ಅಕ್ರಮ ಗಣಿಗಾರಿಕೆ ತಡೆಯಲು ಆದೇಶ ಮಾಡಿದ್ದರು.ಜಿಲ್ಲಾಧಿಕಾರಿಗಳ ಆದೇಶವಿದ್ದರೂ, ಇವೆಲ್ಲವನ್ನೂ ಗಾಳಿಗೆ ತೂರಿ ಸ್ಪೋಟಕವನ್ನು ಬಳಸಿ ಆಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಹಾಗೂ ಇದಕ್ಕೆ ಬೆಂಬಲ ನೀಡುತ್ತಿರುವ ಕೆಲವು ಅಧಿಕಾರಿಗಳ ವಿರುದ್ಧ ಪತ್ರಿಕೆ ನಿರಂತರವಾಗಿ ಸಮಗ್ರವಾಗಿ ವರದಿ ಮಾಡುತ್ತಿದೆ. ಈಗಲೂ ಕೂಡ ಪತ್ರಿಕೆಗೆ ನಿರಂತರವಾದ, ಸ್ಪಷ್ಟವಾದ ಮತ್ತು ನಿಖರವಾದ ಮಾಹಿತಿಗಳು ಲಭ್ಯವಾಗುತ್ತಿವೆ. ಅವೆಲ್ಲವೂ ದಾಖಲೆಯ ರೂಪದಲ್ಲಿ ಸಂಗ್ರವಾಗುತ್ತಿದೆ… ಎಚ್ಚರ ಎಚ್ಚರ..

ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳು :

ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಗಾರಿಕೆ ನಡೆಸುತ್ತಿರುವ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪತ್ರಿಕೆಗೆ ಭರವಸೆ ನೀಡಿದ್ದಾರೆ…

ಗಣಿಗಾರಿಕೆಗೆ ಅವಕಾಶವಿರುವುದು 41/2ಎಕರೆಗೆ ಮಾತ್ರ ಆದರೆ ಅಕ್ರಮವಾಗಿ ನಡೆಯುತ್ತಿರುವುದು 25 ರಿಂದ 30 ಎಕರೆ ಪ್ರದೇಶ :

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ಜಾಗದ ಅಳತೆ ಮಾಡಿಸಿ ಈಗಾಗಲೇ ಡ್ರೋನ್ ಕ್ಯಾಮೆರಾದ ಮೂಲಕ ಅಳತೆ ಮಾಡಿಸಿರುವ ಜಾಗ ಬರಿ 4 1/2 ಎಕರೆಯಷ್ಟು ಮಾತ್ರ ಆದರೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು 25ರಿಂದ 30ಎಕರೆ ಜಾಗದಲ್ಲಿ .

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ,ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಉಳಿದಿರುವ ಜಾಗವನ್ನು ಟೆಂಡರ್ ಗೆ ಹಾಕಿ ಆಕ್ರಮವನ್ನು ತಡೆಗಟ್ಟಿ ಜಾಗವನ್ನು ಅಳತೆ ಮಾಡಿಸಿ :

ಈಗಾಗಲೇ ಟೆಂಡರ್ ಆಗಿರುವ ಜಾಗವನ್ನು ಈ ದಿನದವರೆಗೂ ಸ್ಪಷ್ಟವಾಗಿ ಅಳತೆ ಮಾಡಿ ಗಡಿ ಗುರುತು ಮಾಡಿರುವುದಿಲ್ಲ. ತಕ್ಷಣ ಟೆಂಡರ್ ಗೆ ನಿಗದಿಪಡಿಸಿರುವ ಪ್ರಕ್ರಿಯೆ ಪ್ರದೇಶವನ್ನು ಅಳತೆ ಮಾಡಿ ಗುರುತು ಹಾಕಿ. ಪ್ರಕ್ರಿಯೆ ಕ್ರಮವನ್ನು ಚುರುಕುಗೊಳಿಸಿ ಟೆಂಡರ್ ಹಿಡಿದಿರುವವರಿಗೆ ಆ ಜಾಗವನ್ನು ನೀಡಿ ಉಳಿದಿರುವ ಪ್ರದೇಶಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿ ಅಕ್ರಮ ಕಲ್ಲುಗಾಣಿಗಾರಿಕೆಯನ್ನು ನಿಲ್ಲಿಸಿ…

ಗಣಿ ಮಾಫಿಯಾ ದೊರೆಗಳಿಂದ ರಾಜಕಾರಣಿಗಳ ಮಾರೆ :

ಗಣಿ ಮಾಫಿಯಾ ದೊರೆಗಳು ರಾಜಕಾರಣಿಗಳನ್ನು ಹಿಡಿದುಕೊಂಡು ಇನ್ನಿಲ್ಲದ ಕಸರತ್ತು ಮಾಡಿ ಹೇಗಾದರೂ ಮಾಡಿ ಟೆಂಡರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎನ್ನುವ ನಿರಂತರ ಪ್ರಯತ್ನದಲ್ಲಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ನಷ್ಟ :

ಕೆಲವು ಗಣಿ ಮಾಫಿಯಾ ದೊರೆಗಳು ಮಾಡುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ನಷ್ಟ ಉಂಟಾಗುತ್ತಿದ್ದು. ಈ ದಿನದವರೆಗೂ ಸ್ಪೋಟಕ ನಿರಂತರವಾಗಿ ನಡೆಯುತ್ತಿದೆ ಎನ್ನುವ ಮಾಹಿತಿಗಳು ಪತ್ರಿಕೆಗೆ ಲಭ್ಯವಾಗಿದೆ…

ಆಕ್ರಮ ಕಲ್ಲು ಗಣಿಗಾರಿಕೆ ನಿಲ್ಲುವರೆಗೂ ಪತ್ರಿಕೆ ಹೋರಾಟ ನಿಲ್ಲುವುದಿಲ್ಲ…

ರಘುರಾಜ್ ಹೆಚ್.ಕೆ…9449553305…

Related Articles

Leave a Comment

Latest news
ಸೇವೆಯೇ ಶಿಕ್ಷಣ ಇಲಾಖೆಯ ಮುಖ್ಯ ಧ್ಯೇಯ ಸಚಿವ ಎಸ್.ಮಧು ಬಂಗಾರಪ್ಪ..! ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...