ತೀರ್ಥಹಳ್ಳಿ : ಕಾರ್ಮಿಕರು ಜನಪ್ರತಿನಿಧಿಗಳು ರಾಜಕಾರಣಿಗಳು ಜನನಾಯಕರ ಮೇಲೆ ಇಟ್ಟ ಅತಿ ವಿಶ್ವಾಸವೇ ಅವರಿಗೆ ಕಂಟಕವಾಗಿದೆ…
ಕೆಲವೇ ಕೆಲವು ಕಲ್ಲು ಮಾಫಿಯಾ ದೊರೆಗಳ ಹಿಡಿತದಲ್ಲಿರುವ ಬಂಡೆ ::
ತೀರ್ಥಹಳ್ಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ಮೇಲಿನಕುರುವಳ್ಳಿ ಗ್ರಾಮದ ಮತ್ತು ಬುಕ್ಕಲಪುರ ಗ್ರಾಮದ ಕಲ್ಲುಬಂಡೆಯು ಸುಮಾರು 40 ಎಕರೆ ಪ್ರದೇಶದಲ್ಲಿದೆ .ಇಲ್ಲಿ ಈ ಬಂಡೆಯು ಕಳೆದ 50ವರ್ಷಗಳಿಂದ ಕೆಲವೇ ಕೆಲವರ ಅಂದರೆ 7–8ಜನರ ಕಪಿಮುಷ್ಟಿಯಲ್ಲಿದೆ .ಈ ವ್ಯಕ್ತಿಗಳು ಕೋಟಿ ಕೋಟಿ ಹಣ ಗಳಿಸಿದ್ದಾರೆ .ಕಾರ್ಮಿಕರು ಕಾರ್ಮಿಕರಾಗಿದ್ದಾರೆ .ಸುಮಾರು 400ಯಿಂದ 500 ಕಾರ್ಮಿಕರಲ್ಲಿದ್ದಾರೆ . ಇಲ್ಲೊಂದು ಕಲ್ಲುಕುಟಿಗರ ಸಹಕಾರ ಸಂಘ ಎಂಬುದಿತ್ತು .ಅದರಲ್ಲಿಯೂ ಸಹ 7-8ಜನ ಬಂಡೆ ಮಾಲೀಕರು ಕಾರ್ಮಿಕರನ್ನು ಕತ್ತಲೆಯಲ್ಲಿಟ್ಟು ಲಕ್ಷ ಲಕ್ಷ ಮುಂಡಾಮೋಚಿದ್ದಾರೆ .
ಕಾರ್ಮಿಕರು ಕಾರ್ಮಿಕರಾಗಿ ಇದ್ದಾರೆ ಮಾಲೀಕರಾಗಿಲ್ಲ :
ಇಂದಿಗೂ ಕಾರ್ಮಿಕರು ಕಾರ್ಮಿಕರಾಗಿದ್ದಾರೆ .ಧಾರ್ಮಿಕ ಹೆಸರಲ್ಲಿ ಇಲ್ಲೊಂದು ದೊಡ್ಡ ಲಾಬಿ ಕೋಟ್ಯಾಂತರ ರೂ, ವ್ಯವಹಾರ ನಡೆಸಿದೆ .ಇದಕ್ಕೆ ಮತ ಉದ್ದೇಶದಿಂದ ರಾಜಕೀಯ ನಾಯಕರು ಕಾರ್ಮಿಕರ ಮೇಲೆ ಇನ್ನಿಲ್ಲದ ಸಹಾನುಭೂತಿ ತೋರಿಸುತ್ತಾರೆ .
20 ವರ್ಷಗಳ ಹಿಂದೆ ಪ್ರಾರಂಭವಾದ ಕಲ್ಲು ಭೂಮಾಫಿಯಾ ಗುತ್ತಿಗೆ ನೀಡಲು ಬಿಡುವುದಿಲ್ಲ ಹರಾಜು ಹಾಕಲು ಬಿಡುತ್ತಿಲ್ಲ :
2000ರಿಂದ ಇಲ್ಲಿಯ ಬಂಡೆಯ ಹಗರಣ ಪ್ರಾರಂಭವಾಗಿದೆ .ಕೇವಲ ಇಲ್ಲಿ 4-5ಎಕರೆ ಬಂಡೆ ಗುತ್ತಿಗೆಯ ಮಾತ್ರ ಇದೆ .ಉಳಿದ ಎಲ್ಲ ವ್ಯವಹಾರಗಳು ಕೋಟಿಕೋಟಿ ರೂಪಾಯಿಗಳ ಕತ್ತಲೆಯಲ್ಲಿ ನಡೆಸಲಾಗುತ್ತದೆ .ಇಲ್ಲಿಯ ಬಂಡೆಗಳನ್ನು ಗುತ್ತಿಗೆ ನೀಡಲು ಮತ್ತು ಹರಾಜು ಹಾಕಲು ಇಲ್ಲಿಯ 7-8ಬಂಡೆ ಮಾಫಿಯಾದ ಶ್ರೀಮಂತರು ಬಿಡುತ್ತಿಲ್ಲ .ಏನಾದರೊಂದು ತಕರಾರು ತೆಗೆದು ತಮ್ಮ ವಶದಲ್ಲಿರುವ ಈ ಅಕ್ರಮ ಮಾಫಿಯಾವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ .
ಕಾರ್ಮಿಕರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಕಲ್ಲು ಮಾಫಿಯಾದವರು :
ಇಲ್ಲಿ ಕಾರ್ಮಿಕರ ಮುಗ್ಧತೆ ಅವಿದ್ಯಾವಂತ ತನ ಜೀವನದ ದಾರಿ ಇವೆಲ್ಲವೂ ಬಂಡೆ ಮಾಫಿಯಾದವರ ಮತ್ತು ರಾಜಕಾರಣಿಗಳ ಅನುಕೂಲಕ್ಕೆ ಉಪಯೋಗವಾಗುತ್ತಿದೆ .2006 ಸುಮಾರು ಮೂವತ್ತೆರಡು ಜನರು ಬಂಡೆ ಗುತ್ತಿಗೆ ಅರ್ಜಿ ನೀಡಿದ್ದರು .ಅದನ್ನು ಮಾಡಲು ಬಿಡಲಿಲ್ಲ .ಈಗ ಹರಾಜು ಹಾಕಲು ಮುಂದಾಗಿದ್ದಾರೆ ಹರಾಜು ಪ್ರಕ್ರಿಯೆ ಎಲ್ಲ ಹಂತ ಮುಗಿದಿದೆ ಗುತ್ತಿಗೆ ನೀಡಲು ಬಿಡುತ್ತಿಲ್ಲ .ಸುಮಾರು ಮೂವತ್ತು ಎಕರೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಸ್ಪೋಟಕ ನಡೆಯುತ್ತಿದೆ .ದಿನವೊಂದಕ್ಕೆ ಕನಿಷ್ಠ 2ಲಕ್ಷ ರೂಪಾಯಿಗಳು ಸರ್ಕಾರಕ್ಕೆ ರಾಜಧನ ವಂಚನೆ ಆಗುತ್ತಿದೆ .ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾದಾಗ ದಾಳಿ ಮಾಡಿದಾಗ ಕಾರ್ಮಿಕರ ಹೆಸರು ಹೇಳಿ ಪ್ರತಿಭಟನೆ ಮುಂತಾದವನ್ನು ಪ್ರಾರಂಭಿಸುತ್ತಾರೆ .
ಮೂರು ಪಕ್ಷದ ನಾಯಕರು ಪಟ್ಟಣದ ಹಿತದೃಷ್ಟಿಯಿಂದ ಹರಾಜಾಕಲು ಮುಂದಾಗಲಿ :
ಮೂರು ಪಕ್ಷದ ನಾಯಕರು ಬಂಡೆ ಗುತ್ತಿಗೆ ಮಾಡುಸುವುದನ್ನು ಬಿಟ್ಟು 7-8ಜನರು ಹೇಳಿದ ಹಾಗೆ ಕುಣಿಯುತ್ತಾರೆ .ಕಾರ್ಮಿಕರ ಹೆಸರಲ್ಲಿ ಬಂಡೆ ಗುತ್ತಿಗೆ ಆಗುವುದನ್ನು ಇಂದಿಗೂ ತಡೆಯುತ್ತಿದ್ದಾರೆ .ಯಾರೂ ಬಂಡೆ ನಿಲ್ಲಿಸಲು ಅಥವಾ ಕಾರ್ಮಿಕರಿಗೆ ತೊಂದರೆ ಮಾಡಲು ಮುಂದಾಗುತ್ತಿಲ್ಲ .ಮಾಫಿಯಾದವರು ಅಪಪ್ರಚಾರ ಮಾಡಿ ಅವರು ತೊಂದರೆ ಕೊಡುತ್ತಾರೆ ಇವರು ತೊಂದರೆ ಕೊಡುತ್ತಾರೆ ಎಂದು ಲಕ್ಷ ಲಕ್ಷ ಹಣ ಗಳಿಸುತ್ತಾರೆ ಹೊರತು ಯಾವುದನ್ನೂ ಬಗೆಹರಿಸಲು ಬಿಡುತ್ತಿಲ್ಲ .
ಸಣ್ಣಪುಟ್ಟ ಬಂಡೆ ಮಾಲೀಕರು ಕಾರ್ಮಿಕರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು :::
ರಾಜಕಾರಣಿಗಳಿಗೂ ಬೇಕಿಲ್ಲ .ಸಮಸ್ಯೆ ಬಗೆಹರಿದರೆ ಇಲ್ಲಿ ರಾಜಕಾರಣಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಜನನಾಯಕರಿಗೆ ಕೆಲಸವಿಲ್ಲ ವಾಗುತ್ತದೆ .ಇದನ್ನು ಕಾರ್ಮಿಕರು ಲಾರಿ ಮಾಲೀಕರು ಸಣ್ಣಪುಟ್ಟ ಬಂಡೆ ಮಾಡುವವರು ಗಮನಿಸಬೇಕು .ಸಣ್ಣಪುಟ್ಟ ಕೆಲಸ ಮಾಡುವ ಕಾರ್ಮಿಕರಿಗೆ ಗುತ್ತಿಗೆ ಮಾಡಿಸಿಕೊಳ್ಳಲು ಮುಂದಾದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ .ಪತ್ರಿಕೆಯವರ ಹೆಸರಿನಲ್ಲಿ ಅಧಿಕಾರಿಗಳ ಹೆಸರಿನಲ್ಲಿ ರಾಜಕಾರಣಿಗಳ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಎತ್ತುವಳಿ ಮಾಡುತ್ತಾರೆ .ಎಲ್ಲವನ್ನೂ ಇಲ್ಲಿ ರಾಜಕಾರಣಿಗಳು ಜನಪ್ರತಿನಿಧಿಗಳು ಜನನಾಯಕರು ನೋಡಿಕೊಂಡು ಸುಮ್ಮನಿದ್ದಾರೆ.
ಮೇಲಿನ ಕುರವಳ್ಳಿ ಬಂಡೆಯ ಹರಾಜು ಪ್ರಕ್ರಿಯೆ ರದ್ದುಗೊಳಿಸಲು ಎಲ್ಲಾ ಸಿದ್ಧತೆ ನಡೆಯುತ್ತಿದೆ:
ಮೇಲೀನ ಕುರುವಳ್ಳಿ ಸರ್ವೆ ನಂಬರ್ 38ರಲ್ಲಿ 8ಎಕರೆ ಪ್ರದೇಶ ಹರಾಜು ಗುತ್ತಿಗೆಗೆ ನೀಡಲು ಮುಂದಾಗಿದೆ .ಅದನ್ನು ರದ್ದುಗೊಳಿಸಲು ಎಲ್ಲ ಸಿದ್ಧತೆಗಳು ನಡೆದಿದ್ದು ಹೊಸ ಪ್ರಕ್ರಿಯೆ ಪ್ರಾರಂಭಿಸಲು ಲಂಚಕ್ಕಾಗಿ ಅಧಿಕಾರಿಗಳಿಗೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ .
ಅಧಿಕಾರಿಗಳ ಹೆಸರಿನಲ್ಲಿ ತಿಂಗಳಿಗೆ ಲಕ್ಷ ಲಕ್ಷ ಎತ್ತುವಳಿ :
ಅಧಿಕಾರಿಗಳು ಅತ್ತ ಹರಾಜನ್ನು ಮಾಡುವುದಿಲ್ಲ ಗುತ್ತಿಗೆಯನ್ನು ಕೊಡುವುದಿಲ್ಲ ಅಕ್ರಮವನ್ನು ನಿಲ್ಲಿಸುತ್ತಿಲ್ಲ
ಅಧಿಕಾರಿಗಳ ಹೆಸರಿನಲ್ಲಿ ಪ್ರತಿ ತಿಂಗಳು ಕನಿಷ್ಠ 5-6ಲಕ್ಷ ರೂಪಾಯಿಗಳು ಎತ್ತುವಳಿಯಾಗುತ್ತಿದೆ.
ಕಾರ್ಮಿಕರ ಬೆವರಿನ ಹಣ ಎಲ್ಲಿ ಹೋಗುತ್ತಿದೆ..?!
ಕಾರ್ಮಿಕರು ತಮ್ಮ ಬೆವರಿನ ಹಣವನ್ನು ರಕ್ತ ಕಣ್ಣೀರು ಹಾಕಿ ಹಿಡಿಶಾಪ ಹಾಕಿ ಕೊಡುತ್ತಿದ್ದಾರೆ . ಹಣವನ್ನು ವಸೂಲಿ ಮಾಡಿದ ಮಾಫಿಯಾ ನಾಯಕರು ಯಾರಿಗೆ ಹಣ ಕೊಡುತ್ತಿದ್ದಾರೆ..??!!!
ರಘುರಾಜ್ ಹೆಚ್.ಕೆ…9449553305….


2 comments
Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.
**mitolyn**
Mitolyn is a carefully developed, plant-based formula created to help support metabolic efficiency and encourage healthy, lasting weight management.